ಬೆಂಗಳೂರು: ಮೇಕೆದಾಟು ಪಾದಯಾತ್ರೆ ಹಿನ್ನೆಲೆ ಹೆಚ್ಚಿನ ಭದ್ರತೆ ನೀಡಲಾಗುತ್ತಿದೆ ಎಂದು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಹೇಳಿದ್ದಾರೆ.
ಈ ಕುರಿತು ಮಾತನಾಡಿದ ಅವರು, ಪಾದಯಾತ್ರೆ ನಗರದ ಹೊರವಲಯ ಬಂದು ತಲುಪಿದೆ. ನಾಳೆ, ನಾಡಿದ್ದು ನಗರದಲ್ಲಿ ಪಾದಯಾತ್ರೆ ಇರಲಿದ್ದು, ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಕಾರ್ಯಕ್ರಮ ನಡೆಯಲಿದೆ. ಹಾಗಾಗಿ, ಆಯಾ ವಿಭಾಗದ ಡಿಸಿಪಿಗಳಿಗೆ ಯಾವುದೇ ಲೋಪವಾಗದಂತೆ ಭದ್ರತೆ ಕೈಗೊಳ್ಳುವಂತೆ ಸೂಚಿಸಲಾಗಿದೆ. ಅಲ್ಲದೇ, 40 ಕೆಎಸ್‌ಆರ್‌ಪಿ ಹಾಗೂ 30 ತುಕಡಿಗಳನ್ನು ನಿಯೋಜಿಸಲಾಗುವುದು ಎಂದರು.
ಸಂಚಾರ ನಿರ್ವಹಣೆ ಬಗ್ಗೆ ಪೊಲೀಸ್ ವೆಬ್‌ಸೈಟ್ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ನೀಡಲಾಗುವುದು. ಸಾರ್ವಜನಿಕರು ಸಂಚಾರ ವ್ಯತ್ಯಯದ ಬಗ್ಗೆ ಗಮನಹರಿಸಬೇಕು ಎಂದು ಕಮಲ್ ಪಂತ್ ಮನವಿ ಮಾಡಿದ್ದಾರೆ.
ಓದಿ: ಎರಡು ವರ್ಷದ ಬಳಿಕ ಮಹಾ ಶಿವರಾತ್ರಿ ಸಂಭ್ರಮ: ಶಿವನ ಆರಾಧನೆಗೆ ರಾಜಧಾನಿ ದೇಗುಲಗಳು ಸಜ್ಜು