ETV Bharat / state

ಹಳೆಯ ವಿಗ್ರಹ ಪತ್ತೆ ವಿಚಾರ: ಶಾಲೆ-ದೇವಸ್ಥಾನ ಆಡಳಿತ ಮಂಡಳಿ ನಡುವೆ ಗುದ್ದಾಟ - ಬೆಂಗಳೂರಿನಲ್ಲಿ ಅತ್ಯಂತ ಹಳೆಯ ಕಲ್ಲಿನ ವಿಗ್ರಹ ಪತ್ತೆ

ಬೆಂಗಳೂರಿನ ಕಲಾಸಿಪಾಳ್ಯ ಬಳಿ ಪತ್ತೆಯಾದ ಸುಮಾರು 800 ವರ್ಷ ಹಳೆಯದಾದ ವಿಗ್ರಹ ಸಂಬಂಧ ಶಾಲೆಯ ಆಡಳಿತ ಮಂಡಳಿ ಮತ್ತು ದೇವಸ್ಥಾನದ ಆಡಳಿತ ಮಂಡಳಿ ನಡುವೆ ಭಾರಿ ವಿವಾದ ಏರ್ಪಟ್ಟಿದೆ.

kalasipalya statue controversy
ಹಳೆಯ ವಿಗ್ರಹ ಪತ್ತೆ
author img

By

Published : Jan 6, 2021, 4:36 PM IST

ಬೆಂಗಳೂರು: ಕಲಾಸಿಪಾಳ್ಯ ಬಸ್ ನಿಲ್ದಾಣ ಬಳಿಯ ವಾಣಿ ವಿಲಾಸ ಪ್ರೌಢ ಶಾಲೆ ಹಾಗೂ ಪಿಯು ಕಾಲೇಜಿನ ಕಾಮಗಾರಿ ನಡೆಸುವಾಗ ಸುಮಾರು 800 ವರ್ಷ ಹಳೆಯದಾದ ಕಲ್ಲಿನ ವಿಗ್ರಹ ಸಿಕ್ಕಿದೆ. ಇದು ದೇವಸ್ಥಾನದ ಆಡಳಿತ ಮಂಡಳಿ ಹಾಗೂ ಕಾಲೇಜು ಆಡಳಿತ ಮಂಡಳಿ ನಡುವೆ ಗುದ್ದಾಟಕ್ಕೆ ಕಾರಣವಾಗಿದೆ.

ಹಳೆಯ ವಿಗ್ರಹ ಪತ್ತೆ

ಸದ್ಯ ಕಾಲೇಜು ಹೆಸರಲ್ಲಿರುವ ಈ ಜಾಗದಲ್ಲಿ ಕಾಮಗಾರಿ ನಡೆಸುವಾಗ ಹಳೆಯ ದೇವರ ವಿಗ್ರಹ ಸಿಕ್ಕರೂ ಸರ್ಕಾರದ ಗಮನಕ್ಕೆ ತಾರದೆ ಮುಚ್ಚಿ ಹಾಕಲು ಪ್ರಯತ್ನಿಸಿದ್ದಾರೆ ಎಂದು ಸ್ಥಳೀಯರು ಹಾಗೂ ಮಾಜಿ ಶಾಸಕ ಆರ್​.ವಿ.ದೇವರಾಜ್ ಕಡೆಯವರು ಶಾಲೆಯ ಪ್ರಾಂಶುಪಾಲರ ವಿರುದ್ಧ ಆರೋಪಿಸಿದ್ದಾರೆ.

ಘಟನೆ ಕುರಿತು ಮಾತನಾಡಿದ ಮಾಜಿ ಶಾಸಕ ಆರ್.​ವಿ.ದೇವರಾಜ್, ಟಿಪ್ಪು ಸುಲ್ತಾನ್ ಅಥವಾ ಕೆಂಪೇಗೌಡರಿಗೆ ಸಂಬಂಧಿಸಿದ ಜಾಗ ಅಲ್ಲ. ಗಂಗರ ಕಾಲದ ಜಾಗ ಇದು. ಆ ಅವಧಿಯಲ್ಲಿ ಕಲ್ಯಾಣಿ ನಿರ್ಮಾಣ ಆಗಿತ್ತು. ನಂತರ ಮೈಸೂರು ಮಹಾರಾಜರ ಕಾಲದಲ್ಲಿ ಆಸ್ಪತ್ರೆ, ಶಾಲೆ ಕಟ್ಟಿಸಲಾಯಿತು. ಈಗ ಸರ್ಕಾರದ ಜಾಗ ಆಗಿದೆ. ಈಗಾಗಲೇ ವಿಗ್ರಹ ಸಿಕ್ಕಿರುವುದರಿಂದ ಇನ್ನಷ್ಟು ಅಗೆದು, ಏನೇನಿದೆ ನೋಡಬೇಕು. ಜೊತೆಗೆ ನಿಧಿ ಇರುವ ಸಾಧ್ಯತೆಯೂ ಇದೆ ಅಂತಾ ಅರ್ಚಕರು ಹೇಳಿದ್ದರು. ಹೀಗಾಗಿ ಸರ್ಕಾರಕ್ಕೆ ಮನವಿ ಮಾಡಲಾಗುವುದು. ಅಡಿಯಲ್ಲಿ ದೇವರಿರುವಾಗ ಮತ್ತೆ ಮಣ್ಣು ಮುಚ್ಚಲು ಸಾಧ್ಯವಿಲ್ಲ. ಮುಜರಾಯಿ ಇಲಾಖೆ ಇದನ್ನು ನೋಡಲಿ ಎಂದರು. ಇದೇ ವೇಳೆ ಫಿರಂಗಿ ಗುಂಡನ್ನು ನಾವು ತಂದಿಟ್ಟಿಲ್ಲ ಎಂದ್ರು.

ಆರ್​.ವಿ.ದೇವರಾಜ್ ಪತ್ನಿ ಮಮತಾ ದೇವರಾಜ್ ಮಾತನಾಡಿ, ದೇವರ ವಿಗ್ರಹ ಸಿಕ್ಕಾಗ ಶಾಲೆ ಆಡಳಿತ ಮಂಡಳಿ ಅದನ್ನು ಮುಚ್ಚಿ ಹಾಕುವ ಪ್ರಯತ್ನ ಮಾಡಿದೆ. ಇದನ್ನು ವಿರೋಧಿಸಲಾಯಿತೇ ಹೊರತು ಶಾಲೆ ಕಟ್ಬೇಡಿ ಎಂದು ಹೇಳಿಲ್ಲ. ಯಾವುದೇ ಭದ್ರತಾ ಕ್ರಮ ತೆಗೆದುಕೊಳ್ಳದೆ ಶಾಲೆ ಕಟ್ಟಲು ಮುಂದಾಗಿದ್ದಾರೆ. ಮೊದಲು ಗುಂಡು ಸಿಕ್ಕಿದೆ, ಆಮೇಲೆ ವಿಗ್ರಹ ಸಿಕ್ಕಿದೆ. ಇದನ್ನೆಲ್ಲಾ ಮುಚ್ಚಿ ಹಾಕಿದ್ದಾರೆ ಎಂದು ದೂರಿದ್ರು.

ಇನ್ನು ಪ್ರಾಂಶುಪಾಲರಾದ ಪದ್ಮಾವತಿ ಮಾತನಾಡಿ, ಇದು ಸರ್ಕಾರದ ಜಾಗ. ಹಿರಿಯ ಅಧಿಕಾರಿಗಳ ನಿರ್ದೇಶನದಂತೆ ಕೆಲಸ ಮಾಡುತ್ತಿದ್ದೇವೆ. ಮೊದಲು ಒಂದು ಕಲ್ಲಷ್ಟೇ ಸಿಕ್ಕಿತ್ತು. ಯಾವುದೇ ಗುಂಡು ಸಿಕ್ಕಿರಲಿಲ್ಲ ಎಂದರು. ಶಾಲೆಯ ಕಾಮಗಾರಿ ಕೆಲಸ ನಿಲ್ಲಿಸಿದ್ದು ಸ್ಥಳೀಯರು ಎಂದು ಹೇಳಿದ್ದೇನೆ. ಆದರೆ ಯಾವ ವ್ಯಕ್ತಿಯ ಮೇಲೂ ನಾನು ವ್ಯಕ್ತಿಗತವಾಗಿ ಆರೋಪ ಮಾಡಿಲ್ಲ ಎಂದರು. ಮೊದಲು ಬರೀ ಕಲ್ಲಿತ್ತು, ಮೂರ್ತಿ ಇರುವುದು ಗೊತ್ತಾಗಿಲ್ಲ. ಹೀಗಾಗಿ ಮಾಹಿತಿ ಕೊಟ್ಟಿಲ್ಲ. ಅದನ್ನು ನೀರು ಹಾಕಿ ತೊಳೆದಾಗ ಗೊತ್ತಾಗಿದೆ ಎಂದರು.

ಸ್ಥಳೀಯರಾದ ಅಮರೇಶ್ ಮಾತನಾಡಿ, ಇಲ್ಲಿ ಕಲ್ಯಾಣಿಯನ್ನೇ ನಿರ್ಮಾಣ ಮಾಡಬೇಕು, ಶಾಲೆ ನಿರ್ಮಾಣ ಬೇಡ. ವಿಗ್ರಹ ಸಿಕ್ಕಿದ ಕೂಡಲೇ ಸರ್ಕಾರಕ್ಕೆ ತಿಳಿಸಬೇಕಿತ್ತು. ಆದ್ರೆ ಮಾಡಿಲ್ಲ. ಶಾಲೆ ಹೆಸರಲ್ಲಿ ರಾಜಕೀಯ ಮಾಡ್ತಿದ್ದಾರೆ ಅಂತಾ ಆರೋಪಿಸಿದ್ರು.

ಇದನ್ನೂ ಓದಿ:ಖ್ಯಾತ ಕ್ರೀಡಾಪಟು ಅಪಹರಣ ಕೇಸ್:​ ಮಾಜಿ ಸಚಿವೆಯ ವಿಚಾರಣೆ, ಪತಿ ಪರಾರಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.