ETV Bharat / state

ಪ್ರಕರಣ ದಾಖಲಿಸಿಕೊಳ್ಳದೇ ಆರೋಪಿಗಳಿಂದ ಹಣ ಪಡೆದ ಆರೋಪ: ಇನ್ಸ್​​​​ಪೆಕ್ಟರ್​ ​, ಪಿಎಸ್ಐ ಸಸ್ಪೆಂಡ್

author img

By

Published : Jul 7, 2022, 11:01 PM IST

ಪ್ರಕರಣ ದಾಖಲಿಸಿಕೊಳ್ಳದೇ ಹಣ ಪಡೆದು ನಿರ್ಲಕ್ಷ್ಯ ವಹಿಸಿದ ಆರೋಪದ ಕಲಾಸಿಪಾಳ್ಯ ಠಾಣೆಯ ಇನ್ಸ್​​​​ಪೆಕ್ಟರ್​​ ಹಾಗೂ ಪಿಎಸ್ಐನನ್ನು ಸಸ್ಪೆಂಡ್ ಮಾಡಲಾಗಿದೆ.

kalasipalya-police-station-inspector-and-psi-suspend
ಪ್ರಕರಣ ದಾಖಲಿಸಿಕೊಳ್ಳದೆ ಆರೋಪಿಗಳಿಂದ ಹಣ ಪಡೆದ ಆರೋಪ: ಇನ್‌ಸ್ಪೆಕ್ಟರ್​, ಪಿಎಸ್ಐ ಸಸ್ಪೆಂಡ್

ಬೆಂಗಳೂರು: ಪ್ರಕರಣ ದಾಖಲಿಸಿಕೊಳ್ಳದಂತೆ ಕುಖ್ಯಾತ ರೌಡಿಶೀಟರ್ ಬಾಂಬೆ ಸಲೀಂ ಸಹಚರರಿಂದ ಹಣ ಪಡೆದ ಆರೋಪದಡಿ ಕಲಾಸಿಪಾಳ್ಯ ಇನ್ಸ್​​ಪೆಕ್ಟರ್​​ ಹಾಗೂ ಸಬ್‌ ಇನ್ಸ್​​​ಪೆಕ್ಟರ್​ ಅವರನ್ನು ಅಮಾನತು ಮಾಡಿ ಪಶ್ಚಿಮ ವಿಭಾಗದ ಡಿಸಿಪಿ ಲಕ್ಷ್ಮಣ್ ನಿಂಬರಗಿ ಆದೇಶಿಸಿದ್ದಾರೆ.

ಇನ್ಸ್​​ಪೆಕ್ಟರ್​ ಚೇತನ್ ಕುಮಾರ್ ಹಾಗೂ ಪಿಎಸ್ಐ ಪ್ರಸನ್ನ ಅಮಾನತು ಆದವರು. ರಿಯಲ್ ಎಸ್ಟೇಟ್ ಉದ್ಯಮಿಯಾಗಿರುವ ಮುಯೀಜ್ ಅಹಮ್ಮದ್ ಸೇರಿದ ನಿವೇಶನ ವಿಚಾರದಲ್ಲಿ ನಕಲಿ ದಾಖಲಾತಿ ಸೃಷ್ಟಿಸಿ ಸೈಟು ತನ್ನದೆಂದು ಕೋರ್ಟ್​ಗೆ ಮೊರೆ ಹೋಗಿದ್ದರು.‌ ಇದೇ ವಿಚಾರ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿತ್ತು.

ಕಳೆದ ತಿಂಗಳು 6ರಂದು ಕುಖ್ಯಾತ ರೌಡಿಶೀಟರ್ ಧಾರವಾಡ ಜೈಲಿನಲ್ಲಿರುವ ಬಾಂಬೆ ಸಲೀಂ ಸಹಚರರ ಮುಖಾಂತರ ವಿಡಿಯೋ ಕಾಲ್​ನಲ್ಲಿ ಮಾತನಾಡಿ 8 ಲಕ್ಷ ಹಣನೀಡಬೇಕು‌. ಹಣ ನೀಡದಿದ್ದರೆ ನಿಮ್ಮ ಮನೆಗೆ ಬಿಳಿ ಬಟ್ಟೆ ಕಳುಹಿಸುತ್ತೇನೆ ಎಂದು ಧಮ್ಕಿ ಹಾಕಿದ್ದ. ಇದಕ್ಕೆ ಮುಯೀಜ್ ತಲೆಕೆಡಿಸಿಕೊಂಡಿರಲಿಲ್ಲ. ಕಾಲಕ್ರಮೇಣ ಸಲೀಂ ಸಹಚರರು ಫೋನ್ ಮಾಡಿ ಜೀವ ಬೆದರಿಕೆ ಹಾಕಿದ್ದರು‌. ಕಿರುಕುಳ ಹೆಚ್ಚಾದಂತೆ ಕಲಾಸಿಪಾಳ್ಯ ಪೊಲೀಸರಿಗೆ ಮುಜೀಬ್ ದೂರು ನೀಡಿದ್ದರು‌. ಆದರೆ, ಪ್ರಕರಣ ದಾಖಲಿಸಿಕೊಳ್ಳದೆ ಆರೋಪಿಗಳಿಂದ ಹಣ ಪಡೆದು ಕೇಸ್‌ ದಾಖಲಿಸಿಕೊಳ್ಳದೆ ಸುಮ್ಮನಾಗಿದ್ದರು ಎಂದು ಹೇಳಲಾಗಿದೆ.

ಹೀಗಾಗಿ ಸೂಕ್ತ ಕ್ರಮಕ್ಕಾಗಿ ಶೇಷಾದ್ರಿ ರಸ್ತೆಯಲ್ಲಿರುವ ಕಾರಾಗೃಹ ಇಲಾಖೆಯ ಡಿಐಜಿಗೆ ದೂರು ನೀಡಿದ್ದರು. ದೂರು ಪರಿಶೀಲಿಸಿ ನಗರ ಪೊಲೀಸ್ ಆಯುಕ್ತರಿಗೆ ವರ್ಗವಾಗಿತ್ತು‌.‌ ಬಳಿಕ‌ ಸಿಸಿಬಿ ತನಿಖೆ ಕೈಗೆತ್ತಿಕೊಂಡು ಬಾಂಬೆ ಸಲೀಂ ಸಹಚರರಾದ ಅಬ್ದುಲ್‌ ಜಾಫರ್, ಶೂಟರ್ ಕದೀಂ, ಇಮ್ರಾನ್, ಬಾಂಬೆ ರಿಯಾಜ್, ಖದೀರ್ ಹಾಗೂ‌ ಆಲಿ ಸೇರಿದಂತೆ ಆರು ಮಂದಿ ಆರೋಪಿಗಳನ್ನು ಸಿಸಿಬಿ ಬಂಧಿಸಿದೆ. ಧಾರವಾಡ‌ ಜೈಲಿನಲ್ಲಿ ಸಲೀಂನನ್ನ ಬಾಡಿ ವಾರೆಂಟ್ ಪಡೆದು ಸಿಸಿಬಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.