ETV Bharat / state

ಶಾಸಕರ ಬೆಂಬಲಿಗ ಅಧಿಕಾರಿಯಿಂದ ಬೆದರಿಕೆ ಕರೆ ಆರೋಪ: ಆಡಿಯೋ ಬಿಡುಗಡೆ ಮಾಡಿದ ಕೆ.ಮಥಾಯಿ

author img

By

Published : Jan 19, 2023, 2:54 PM IST

Updated : Jan 19, 2023, 3:47 PM IST

ಶಾಸಕರೊಬ್ಬರ ಬೆಂಬಲಿಗರಿಂದ ಬೆದರಿಕೆ ಕರೆ ಆರೋಪ - ಕೆಎಎಸ್​ ಅಧಿಕಾರಿ ವಿರುದ್ಧ ಮಾಜಿ ಅಧಿಕಾರಿ ದೂರು - ಚುನಾವಣೆಯಲ್ಲಿ ಸ್ಪರ್ಧಿಸದಂತೆ ಬೆದರಿಕೆ ಆರೋಪ

Etv Bharat
Etv Bharat
ಕೆ.ಮಥಾಯಿ ಹೇಳಿಕೆ

ಬೆಂಗಳೂರು: ಶಾಂತಿನಗರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಬಾರದೆಂದು ಅಲ್ಲಿನ ಶಾಸಕರ ಪರ ಚುನಾವಣಾ ಪ್ರಚಾರದಲ್ಲಿ ತೊಡಗಿಕೊಂಡಿರುವ ಅಧಿಕಾರಿಯೊಬ್ಬರು ಬೆದರಿಕೆ ಹಾಕಿದ್ದಾರೆ ಎಂದು ಆಮ್‌ ಆದ್ಮಿ ಪಾರ್ಟಿ (ಎಎಪಿ) ರಾಜ್ಯ ವಕ್ತಾರ ಕೆ. ಮಥಾಯಿ ಆರೋಪಿಸಿದರು. ಅಧಿಕಾರಿಯೊಬ್ಬರು ಬೆದರಿಕೆ ಹಾಕಿದ್ದಾರೆ ಎನ್ನಲಾದ ಆಡಿಯೋವನ್ನು ಸುದ್ದಿಗೋಷ್ಠಿಯಲ್ಲಿ ಕೆ.ಮಥಾಯಿ ಬಿಡುಗಡೆ ಮಾಡಿದರು.

ಆಮ್‌ ಆದ್ಮಿ ಪಾರ್ಟಿಯ ರಾಜ್ಯ ಕಚೇರಿಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಕೆ.ಮಥಾಯಿ, ಕೆಎಎಸ್‌ ಅಧಿಕಾರಿ ಜನವರಿ 13ರ ಬೆಳಗ್ಗೆ 9 ಗಂಟೆಗೆ ನನಗೆ ಮೊಬೈಲ್‌ ಕರೆ ಮಾಡಿದರು. ಸುಮಾರು 15 ನಿಮಿಷ ಮಾತನಾಡಿದ ಅವರು ಶಾಸಕರ ಹೆಸರನ್ನು ಹಲವು ಬಾರಿ ಉಲ್ಲೇಖಿಸಿ, ಅವರ ಪರವಾಗಿ ಮಾತನಾಡಿದ್ದಾರೆ. ಶಾಂತಿನಗರ ಕ್ಷೇತ್ರದಿಂದ ನಾನು ಸ್ಪರ್ಧಿಸಬಾರದು ಎಂದು ಒತ್ತಡ ಹೇರಿದ್ದಲ್ಲದೇ, ಇದಕ್ಕೆ ಒಪ್ಪದಿದ್ದರೆ ತೊಂದರೆ ಅನುಭವಿಸಬೇಕಾಗುತ್ತದೆ ಎಂದು ಬೆದರಿಕೆ ಒಡ್ಡಿದ್ದಾರೆ. ಶಾಸಕರು ಚುನಾವಣಾ ಸೋಲಿನ ಭೀತಿಯಲ್ಲಿ ಈ ರೀತಿ ಅಧಿಕಾರಿಗಳಿಂದ ಕರೆ ಮಾಡಿಸುತ್ತಿರುವುದು ದುರಂತ” ಎಂದು ಹೇಳಿದರು.

ಕರ್ನಾಟಕ ಸರ್ಕಾರ ಹಾಗೂ ಭಾರತ ಚುನಾವಣಾ ಆಯೋಗದ ನಿಯಮಗಳ ಪ್ರಕಾರ ಯಾವುದೇ ಸರ್ಕಾರಿ ಅಧಿಕಾರಿಗಳು ಯಾವುದೇ ಪಕ್ಷದ ಯಾವುದೇ ವ್ಯಕ್ತಿಯ ಪರವಾಗಿ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗುವುದು ನಿಷಿದ್ಧ. ಆದ್ದರಿಂದ ಅಧಿಕಾರಿ ವಿರುದ್ಧ ಇಲಾಖಾ ತನಿಖೆ ನಡೆಸಿ, ಕಠಿಣ ಶಿಕ್ಷೆಗೆ ಒಳಪಡಿಸಬೇಕೆಂದು ಆಗ್ರಹಿಸಿ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ದೂರು ನೀಡಿದ್ದೇನೆ. ಇಂತಹ ಬೆದರಿಕೆಗಳಿಗೆ ಹೆದರಿ ಚುನಾವಣೆಯಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ನನ್ನ ಇಡೀ ಜೀವನವನ್ನು ಭ್ರಷ್ಟಾಚಾರ ವಿರುದ್ಧ ಹೋರಾಟಕ್ಕೆ ಮುಡಿಪಾಗಿಟ್ಟಿದ್ದು, ಇದೇ ಸಿದ್ಧಾಂತ ಹೊಂದಿರುವ ಆಮ್‌ ಆದ್ಮಿ ಪಾರ್ಟಿಗಾಗಿ ಈ ಚುನಾವಣೆಯಲ್ಲಿ ಸ್ಪರ್ಧಿಸುವುದು ಖಚಿತ” ಎಂದು ಕೆ.ಮಥಾಯಿ ಹೇಳಿದರು.

ಶಾಸಕ ಹ್ಯಾರಿಸ್‌ರವರು ಕ್ಷೇತ್ರದ ಸರ್ಕಾರಿ ಶಾಲೆಗಳು ಹಾಗೂ ಸರ್ಕಾರಿ ಆಸ್ಪತ್ರೆಗಳ ಅಭಿವೃದ್ಧಿಗಾಗಿ ಏನನ್ನೂ ಮಾಡಿಲ್ಲ. ಸರ್ಕಾರಿ ನಿವೇಶನಗಳು ಹಾಗೂ ಪಾರ್ಕ್‌ಗಳನ್ನು ಅತಿಕ್ರಮಣ ಮಾಡಿಕೊಂಡ ಶಾಸಕರು ಅವುಗಳನ್ನು ರಿಯಲ್‌ ಎಸ್ಟೇಟ್‌ ಆಗಿ ಪರಿವರ್ತಿಸಿಕೊಂಡಿದ್ದಾರೆ. ಡ್ಯಾನ್ಸ್‌ ಬಾರ್‌ಗಳು ಶಾಂತಿನಗರದ ಶಾಂತಿಗೆ ಭಂಗ ತರುತ್ತಿದೆ. ಡ್ರಗ್‌ ಮಾಫಿಯಾದಿಂದ ಇಲ್ಲಿನ ಯುವಕರ ಆರೋಗ್ಯ ಹಾಳಾಗುತ್ತಿದೆ ಎಂದು ಕೆ.ಮಥಾಯಿ ಹೇಳಿದರು.

ಯಾರು ಈ ಮಥಾಯಿ: ಕೆಎಎಸ್​ ಸೇವೆಯಿಂದ ನಿವೃತ್ತವಾಗಿರುವ ಕೆ ಮಥಾಯಿ ಅವರು ಪ್ರಸ್ತುತ ಆಮ್​ ಆದ್ಮಿ ಪಕ್ಷದಲ್ಲಿ ಸಕ್ರಿಯವಾಗಿದ್ದಾರೆ. ಈ ಹಿಂದೆ ತಮ್ಮ ಅಧಿಕಾರವಾಧಿಯಲ್ಲಿ ಅವರು ಕರ್ನಾಟಕದಲ್ಲಿ ಸಕಾಲ ಯೋಜನೆ ಸೇರಿದಂತೆ ಹಲವು ದಿಟ್ಟ ಕ್ರಮವನ್ನು ಕಾರ್ಯರೂಪಕ್ಕೆ ತರುವಲ್ಲಿ ಪಾತ್ರ ವಹಿಸಿದ್ದರು. ಸದ್ಯ ಆಮ್​ ಆದ್ಮಿ ಪಕ್ಷದಲ್ಲಿ ಸಕ್ರಿಯರಾಗಿರುವ ಅವರು ಈ ಬಾರಿ ಚುನಾವಣಾ ಟಿಕೆಟ್​ ಆಕಾಂಕ್ಷಿಯಾಗಿದ್ದಾರೆ. ಶಾಂತಿನಗರದಿಂದ ಅವರು ಈ ಬಾರಿ ಕಣಕ್ಕೆ ಇಳಿಯುವ ಸಾಧ್ಯತೆ ಇದ್ದು, ಅವರು ಕಣಕ್ಕೆ ಇಳಿಯಂತೆ ಅಧಿಕಾರಿ​ ಬೆದರಿಕೆ ಹಾಕಿರುವ ಆಡಿಯೋ ಕೂಡ ರಾಜಕೀಯ ವಲಯದಲ್ಲಿ ಸಾಕಷ್ಟು ಸದ್ದು ಮಾಡಿದೆ.

ಅಭಿವೃದ್ಧಿ ಮಾಡಿದ್ದರೆ ಕುಕ್ಕರ್‌ ಹಂಚುವ ಸ್ಥಿತಿ ಶಾಸಕ ರಘುಗೆ ಬರುತ್ತಿರಲಿಲ್ಲ : ಶಾಸಕರಾಗಿನಿಂದಲೂ ಸರ್ ಸಿ.ವಿ.ರಾಮನ್‌ ಕ್ಷೇತ್ರದ ಅಭಿವೃದ್ಧಿಯನ್ನು ಕಡೆಗಣಿಸಿದ ಶಾಸಕ ಎಸ್.ರಘು ಈಗ ಸೋಲಿನ ಭೀತಿಯಲ್ಲಿ ಕುಕ್ಕರ್‌ ಮೊರೆ ಹೋಗಿದ್ದಾರೆ ಎಂದು ಆಮ್‌ ಆದ್ಮಿ ಪಾರ್ಟಿ ಬೆಂಗಳೂರು ಅಧ್ಯಕ್ಷ ಮೋಹನ್‌ ದಾಸರಿ ಹೇಳಿದರು. ಪಕ್ಷದ ರಾಜ್ಯ ಕಚೇರಿಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಮೋಹನ್‌ ದಾಸರಿ, “ಮತದಾರರಿಗೆ ಆಮಿಷವೊಡ್ಡಲು ಶಾಸಕ ಎಸ್.ರಘುರವರು ಹಲವು ಕಂಟೈನರ್‌ ವಾಹನಗಳಲ್ಲಿ ಕುಕ್ಕರ್‌ಗಳನ್ನು ತಂದು ಸಂಗ್ರಹಿಸಿ ಇಟ್ಟುಕೊಳ್ಳುತ್ತಿದ್ದಾರೆ. ವಾಣಿಜ್ಯ ತೆರಿಗೆ ಇಲಾಖೆಯ ನಿಂಬಂಧನೆಗಳ ಪ್ರಕಾರ ಇದು ಅಪರಾಧವಾಗಿದ್ದರೂ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ. ಕುಣಿಗಲ್‌ನಲ್ಲಿ ಇಂತಹದ್ದೇ ಪ್ರಕರಣಕ್ಕೆ ಸಂಬಂಧಿಸಿ ದಾಳಿ ಮಾಡಿದ ವಾಣಿಜ್ಯ ತೆರಿಗೆ ಅಧಿಕಾರಿಗಳು ಸರ್ ಸಿ.ವಿ.ರಾಮನ್‌ ಕ್ಷೇತ್ರದಲ್ಲೇಕೆ ಸುಮ್ಮನಿದ್ದಾರೆ?” ಎಂದು ಪ್ರಶ್ನಿಸಿದರು.

ಭಾರೀ ಪ್ರಮಾಣದಲ್ಲಿ ಆಮಿಷವೊಡ್ಡಲು ಸಜ್ಜಾಗುತ್ತಿರುವ ಶಾಸಕ ರಘುರವರಿಗೆ ಇದಕ್ಕೆಲ್ಲ ಹಣ ಎಲ್ಲಿಂದ ಬರುತ್ತಿದೆ? ಅವರಿಗೆ ಸಿಗುತ್ತಿರುವ ಸಂಬಳದಿಂದ ಇವೆಲ್ಲ ಸಾಧ್ಯವೇ? ಅಥವಾ 40% ಕಮಿಷನ್‌ ಹಣದಲ್ಲಿ ಆಮಿಷವೊಡ್ಡಿ ಚುನಾವಣೆ ಗೆದ್ದು ಮತ್ತಷ್ಟು ಕಮಿಷನ್‌ ಲೂಟಿ ಮಾಡುವ ಯೋಜನೆ ಇದೆಯಾ? ಕ್ಷೇತ್ರದಲ್ಲಿ ಬಿಜೆಪಿ ವಿರೋಧಿ ಅಲೆಯಿರುವುದನ್ನು ಗಮನಿಸಿದ ಅವರು ಹೇಗಾದರೂ ಮಾಡಿ ಚುನಾವಣೆ ಗೆಲ್ಲಬೇಕೆಂದು ಎಲ್ಲ ಕುಟಿಲ ತಂತ್ರಗಳನ್ನು ಅನುಸರಿಸುತ್ತಿದ್ದಾರೆ. ಜನರು ಕೊಟ್ಟ ಅಧಿಕಾರವನ್ನು ಜನರ ಹಿತಕ್ಕಾಗಿ ಬಳಸಿಕೊಂಡಿದ್ದರೆ ಅವರಿಗೆ ಇಂದು ಈ ಸ್ಥಿತಿ ಬರುತ್ತಿರಲಿಲ್ಲ” ಎಂದು ಮೋಹನ್‌ ದಾಸರಿ ಹೇಳಿದರು.

ಕ್ಷೇತ್ರದ ಮತದಾರರಿಗೆ ಹಂಚಲು ಎಸ್.ರಘು ತಂದಿರುವ ಕುಕ್ಕರ್‌ವೊಂದನ್ನು ಸುದ್ದಿಗೋಷ್ಠಿಯಲ್ಲಿ ಪ್ರದರ್ಶಿಸಿ ಮಾತನಾಡಿದ ಮೋಹನ್‌ ದಾಸರಿ, “ಬಿಜೆಪಿಯು ಅಧಿಕಾರಕ್ಕೆ ಬಂದಿರುವುದರ ಹಿಂದೆ ಇಂತಹ ಆಮಿಷಗಳು, ಸುಳ್ಳು ಭರವಸೆಗಳು, ಕೋಮುದ್ವೇಷದ ರಾಜಕೀಯ, ಆಪರೇಷನ್‌ ಕಮಲ ಮುಂತಾದ ಅನೇಕ ಕಳ್ಳಮಾರ್ಗಗಳಿವೆ. ಪ್ರಜಾಪ್ರಭುತ್ವ ವ್ಯವಸ್ಥೆಗೆ ಅತಿದೊಡ್ಡ ಸವಾಲಾಗಿ ಬಿಜೆಪಿ ಪರಿಣಮಿಸಿದೆ. ಬಿಜೆಪಿ, ಕಾಂಗ್ರೆಸ್‌, ಜೆಡಿಎಸ್‌ ಪಕ್ಷಗಳ ಆಮಿಷಗಳಿಗೆ ಮರುಳಾಗದೇ, ಪ್ರಾಮಾಣಿಕ ಹಾಗೂ ಜನಪರ ಸರ್ಕಾರವನ್ನು ಅಧಿಕಾರಕ್ಕೆ ತರಲು ಜನರು ಪಣತೊಡಬೇಕು” ಎಂದರು.

ಇದನ್ನೂ ಓದಿ: ಮೀಸಲಾತಿ ಹೋರಾಟ: ಯತ್ನಾಳ್ ಅಬ್ಬರಕ್ಕೆ ಕಡಿವಾಣ ಹಾಕಲು ಬಿಜೆಪಿ ಹೈಕಮಾಂಡ್ ಎಂಟ್ರಿ

Last Updated : Jan 19, 2023, 3:47 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.