ಬೆಂಗಳೂರು: ಕೋವಿಡ್ನಿಂದ ಕಂಗೆಟ್ಟು ಎಂಎಸ್‌ಎಂಇಗಳು ಸಂಕಷ್ಟದಲ್ಲಿದ್ದವು. ಇಂತಹ ಸಂದರ್ಭದಲ್ಲಿ ಕೇಂದ್ರ ಬಜೆಟ್‌ನಿಂದ ಅವುಗಳು ಸ್ವಲ್ಪಮಟ್ಟಿಗೆ ಚೇತರಿಕೆ ಕಾಣಬಹುದು. ಎಂಎಸ್‌ಎಂಇಗಳಿಗೆ 17,700 ಕೋಟಿ ರೂ. ಕೊಟ್ಟಿದ್ದು ಸಂತಸದ ವಿಚಾರ ಎಂದು ಕಾಸಿಯಾ ಅಧ್ಯಕ್ಷ ಕೆ.ಬಿ ಅರಸಪ್ಪ ಹೇಳಿದರು.
ಎಸ್‌ಟಿ/ಎಸ್‌ಸಿ ಹಾಗೂ ಮಹಿಳಾ ಸ್ಟಾರ್ಟ್ ಅಪ್ ಪ್ರಾಜೆಕ್ಟ್‌ಗಳಿಗೆ ಹಿಂದೆ ಶೇ. 25ರಷ್ಟು ಹಣ ಕಟ್ಟಬೇಕಿತ್ತು. ಆದರೆ ಈ ಬಜೆಟ್ನಲ್ಲಿ ಅದನ್ನು ಶೇ 15ಗೆ ಇಳಿಸಿದ್ದಾರೆ. ಬೆಂಗಳೂರು-ಚೆನ್ನೈ ಕಾರಿಡಾರ್ ಒಂದು ವರ್ಷದಲ್ಲಿ ಪೂರ್ಣಗೊಳಿಸುವುದಾಗಿ ಹೇಳಿದ್ದಾರೆ. ಇಂಪೋರ್ಟ್ ಆಗುವ ರಾ ಮೆಟೀರಿಯಲ್ಗಳ ಮೇಲೆ ಶೇ5 ರಷ್ಟು ಸುಂಕ ಕಡಿತಗೊಳಿಸಿದ್ದಾರೆ. ಬೆಂಗಳೂರಿನಲ್ಲಿ ಮೆಟ್ರೋಗೆ 14,780 ಕೋಟಿ ರೂ., ರಾಷ್ಟ್ರೀಯ ಹೆದ್ದಾರಿಗಳಿಗೆ 1,700 ಕೋಟಿ ರೂ.ಗಳನ್ನು ಕೊಡಲಾಗಿದೆ. ಸುಮಾರು 7 ಜವಳಿ ಪಾರ್ಕ್ ನಿರ್ಮಾಣ ಮಾಡುವುದಾಗಿ ಹೇಳಿದ್ದು, ಜವಳಿ ಕಾರ್ಖಾನೆಗಳಿಗೆ ಬಹಳ ಉಪಯೋಗವಾಗಲಿದೆ ಎಂದರು.
ಇದನ್ನೂ ಓದಿ: ಜೋಗಿಮಟ್ಟಿ ವನ್ಯಜೀವಿ ಧಾಮ ಅಭಿವೃದ್ಧಿಗೆ ಸರ್ಕಾರದ ನಿರ್ಲಕ್ಷ್ಯ: ಪರಿಸರ ಪ್ರೇಮಿಗಳ ಆರೋಪ