ಬೆಂಗಳೂರು: ಮಾದಕ ವಸ್ತು ವ್ಯಸನ ಪ್ರಕರಣದಲ್ಲಿ ದಿವಂಗತ ಆದಿಕೇಶವಲು ಮಗ ಶ್ರೀನಿವಾಸ್ ಬಂಧಿಸಿದ್ದ ಎನ್ಸಿಬಿ ಅಧಿಕಾರಿಗಳು ವಿಚಾರಣೆ ಮುಕ್ತಾಯ ಬಳಿಕ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಮೇ 23ರಂದು ಹೈದರಾಬಾದ್ನಿಂದ ಏರ್ ಪೋರ್ಟ್ ಬಳಿ ಬರುವಾಗ ಡ್ರಗ್ಸ್ ಸರಬರಾಜು ಮಾಡಿಕೊಂಡ ಆರೋಪದಡಿ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಶ್ರೀನಿವಾಸ್ನನ್ನು ಬಂಧಿಸಲಾಗಿತ್ತು. ಇದೀಗ ವಿಚಾರಣೆ ಮುಕ್ತಾಯಗೊಂಡಿರುವ ಹಿನ್ನೆಲೆಯಲ್ಲಿ ಆರೋಪಿಯನ್ನ ಜೈಲಿಗಟ್ಟಲಾಗಿದೆ.
ಟಿವಿಎಸ್ ಸೂಟ್ಕರ್ನಲ್ಲಿ ಡ್ರಗ್ಸ್ ಸಪ್ಲೈ: ಹೈದರಾಬಾದ್ ನಿಂದ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ ಶ್ರೀನಿವಾಸ್ ಸಾದಹಳ್ಳಿ ಗೇಟ್ನ ಮೆಕ್ ಡೊನಾಲ್ಡ್ ಬಳಿ ಕಾರಿನಲ್ಲಿ ಬರುವಾಗ ಟಿವಿಎಸ್ ಸ್ಕೂಟರ್ನಲ್ಲಿ ಬಂದಿದ್ದ ಗಿರೀಶ್ ಎಂಬಾತ ಶ್ರೀನಿವಾಸ್ಗೆ ಒಂದು ಗ್ರಾಂ ಕೊಕೈನ್ ತಂದುಕೊಟ್ಟಿದ್ದ. ಡ್ರಗ್ಸ್ ಪಾಕೇಟ್ ನೀಡುತ್ತಿದ್ದಂತೆ ಸುತ್ತುವರೆದ ಎನ್ಸಿಬಿ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದರು.
ಇದನ್ನೂ ಓದಿ : ವಿಧಾನಪರಿಷತ್ ಚುನಾವಣೆ : ಏಳೂ ಅಭ್ಯರ್ಥಿಗಳು ಅವಿರೋಧ ಆಯ್ಕೆ