ETV Bharat / state

ಅಹಿಂದ ಸಮುದಾಯಗಳ ಜಂಟಿ ಸಭೆ: ಕಾಂತರಾಜ್ ಜಾತಿ ಗಣತಿ ವರದಿ ಸ್ವೀಕರಿಸುವಂತೆ ಸರ್ಕಾರಕ್ಕೆ ಆಗ್ರಹ

ಬೆಂಗಳೂರಿನ ಶಾಸಕರ ಭವನದಲ್ಲಿ ಹಿಂದುಳಿದ ಜಾತಿಗಳ ಒಕ್ಕೂಟದ ಅಧ್ಯಕ್ಷ ಕೆ ರಾಮಚಂದ್ರಪ್ಪ ನೇತೃತ್ವದಲ್ಲಿ ಎಸ್ಸಿ, ಎಸ್ಟಿ, ಒಬಿಸಿ ಅಲ್ಪಸಂಖ್ಯಾತರ ಸಮುದಾಯ ಮುಖಂಡರ ಜಂಟಿ ಸಭೆ ನಡೆಯಿತು. ಈ ವೇಳೆ, ಡಿ.30ರಂದು ದಾವಣಗೆರೆ ಅಥವಾ ಚಿತ್ರದುರ್ಗದಲ್ಲಿ ಬೃಹತ್ ಅಹಿಂದ ಸಮಾವೇಶ ಆಯೋಜಿಸಿ ಶಕ್ತಿ ಪ್ರದರ್ಶನ ಮಾಡಲು ತೀರ್ಮಾನಿಸಲಾಯಿತು.

various community leaders meeting  was held.
ಬೆಂಗಳೂರಿನಲ್ಲಿ ಎಸ್ಸಿ, ಎಸ್ಟಿ, ಒಬಿಸಿ ಅಲ್ಪಸಂಖ್ಯಾತರ ಸಮುದಾಯ ಮುಖಂಡರ ಸಭೆ ನಡೆಯಿತು.
author img

By ETV Bharat Karnataka Team

Published : Nov 25, 2023, 9:16 PM IST

Updated : Nov 25, 2023, 9:58 PM IST

ಅಹಿಂದ ಸಮುದಾಯಗಳ ಜಂಟಿ ಸಭೆ

ಬೆಂಗಳೂರು: ಕಾಂತರಾಜ್ ಜಾತಿಗಣತಿ ಸಮೀಕ್ಷಾ ವರದಿ ಸ್ವೀಕರಿಸುವಂತೆ ಸರ್ಕಾರಕ್ಕೆ ಆಗ್ರಹಿಸಿ ಎಸ್ಸಿ,ಎಸ್ಟಿ, ಒಬಿಸಿ ಅಲ್ಪಸಂಖ್ಯಾತರ ಸಮುದಾಯದ ಸಂಘಟನೆಗಳು ರಾಜ್ಯ ಮುಖಂಡರ ಸಭೆಯಲ್ಲಿ ಇಂದು ಒಕ್ಕೊರಲಿನ ನಿರ್ಣಯ ಕೈಗೊಂಡಿವೆ.

ಶಾಸಕರ ಭವನದಲ್ಲಿ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟದ ಅಧ್ಯಕ್ಷ ಕೆ ರಾಮಚಂದ್ರಪ್ಪ ನೇತೃತ್ವದಲ್ಲಿ ಜಂಟಿ ಸಭೆ ನಡೆಯಿತು. ಈ ಸಂದರ್ಭದಲ್ಲಿ ಎಸ್ಸಿ, ಎಸ್ಟಿ, ಒಬಿಸಿ ಅಲ್ಪಸಂಖ್ಯಾತರ ಸಮುದಾಯದ ಸಂಘಟನೆಗಳ ರಾಜ್ಯ ಮುಖಂಡರು ಕಾಂತರಾಜ್ ಜಾತಿಗಣತಿ ವರದಿ ಸ್ವೀಕರಿಸುವಂತೆ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದರು. ಡಿ.30ರಂದು ದಾವಣಗೆರೆ ಅಥವಾ ಚಿತ್ರದುರ್ಗದಲ್ಲಿ ಬೃಹತ್ ಅಹಿಂದ ಸಮಾವೇಶ ಆಯೋಜಿಸಿ ಶಕ್ತಿ ಪ್ರದರ್ಶನ ಮಾಡಲು ಎಸ್ಸಿ, ಎಸ್ಟಿ, ಒಬಿಸಿ ಅಲ್ಪಸಂಖ್ಯಾತರ ಸಮುದಾಯದ ಸಂಘಟನೆ ಮುಖಂಡರು ನಿರ್ಧರಿಸಿದ್ದಾರೆ.

ಸಂವಿಧಾನದ ಸವಲತ್ತು :ಸಭೆಯಲ್ಲಿ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟದ ಅಧ್ಯಕ್ಷ ಕೆ.ರಾಮಚಂದ್ರಪ್ಪ ಮಾತನಾಡಿ, ಪ್ರಬಲ ಜಾತಿಗಳು ನೂರಾರು ವರ್ಷದಿಂದ ತಮ್ಮ ಮೇಲೆ ಸವಾರಿ ಮಾಡುತ್ತ ಬಂದಿವೆ.‌ ಸಂವಿಧಾನದ ಸವಲತ್ತುಗಳನ್ನು ಕೊಡಲು ಈಗಲೂ ಅಧಿಕಾರದಲ್ಲಿರುವವರಿಗೂ ಸಾಧ್ಯವಾಗುತ್ತಿಲ್ಲ. ಪ್ರಬಲ ಸಮುದಾಯದವರಿಗೆ ನಾವು ಸರಿಸಮಾನವಾಗಿ ಬಂದರೆ, ನಮ್ಮ ಸೇವೆ ಮಾಡಲು ಯಾರು ಇರಲ್ಲ ಎಂಬ ಆತಂಕ ಎದುರಾಗಿದೆ ಎಂದರು.

ಕಾಂತರಾಜ ವರದಿ ಎಲ್ಲಿ ಸೋರಿಕೆಯಾಗಿದೆ ?: ಮಾಜಿ ಸಿಎಂ ಮೂಲ‌ ಪ್ರತಿ ಕಳೆದು ಹೋಗಿದೆ ಅಂತಿದ್ದಾರೆ. ಕಳವು ಆಗಿದ್ದರೆ ಅವರ ಅವಧಿಯಲ್ಲೇ ಕಳವು ಆಗಿರಬೇಕು. ಮಾಜಿ ಸಿಎಂ ವಿರುದ್ಧ ಇತ್ತೀಚೆಗೆ ವಿದ್ಯುತ್ ಕಳವು ಆರೋಪ ಬಂದಿತ್ತು. ಹಾಗಾಗಿ ಅವರೇ ಜಾತಿ ಗಣತಿ ವರದಿಯ ಮೂಲ ಪ್ರತಿಯನ್ನು ಕಳವು ಮಾಡಿರಬೇಕು ಎಂದು ಟಾಂಗ್ ನೀಡಿದರು.

ಡಿಸಿಎಂ ಸ್ಥಾನಕ್ಕೆ ಡಿಕೆ ಶಿವಕುಮಾರ್ ರಾಜೀನಾಮೆ ನೀಡಬೇಕು: ಡಿಸಿಎಂ ಕೂಡ ಇದಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಅವರು ರಾಜ್ಯದ ಉಪಮುಖ್ಯಮಂತ್ರಿನಾ?. ಒಂದು ಜನಾಂಗದ ಉಪಮುಖ್ಯಮಂತ್ರಿನಾ?. ಒಬ್ಬ ಸಚಿವರೂ ಕೂಡ ವರದಿ ವಿರೋಧಿಸಿ ಸಹಿ ಹಾಕಿದ್ದಾರೆ. ಸಂವಿಧಾನ ಇಟ್ಕೊಂಡು ಪ್ರಮಾಣ ಮಾಡಿರ್ತಾರೆ. ಸ್ವಜನ ಪಕ್ಷಪಾತ ಮಾಡಲ್ಲ ಜಾತಿ ಮಾಡಲ್ಲ ಅಂತ. ಯಾವ ನೈತಿಕತೆ ಇಟ್ಟುಕೊಂಡು ಡಿಸಿಎಂ ಹುದ್ದೆಯಲ್ಲಿ ಮುಂದುವರಿಯುತ್ತಾರೆ‌. ಅವರು ರಾಜೀನಾಮೆ ನೀಡಬೇಕು.ಅದಕ್ಕೆ ನಾವು ಡಿಮ್ಯಾಂಡ್ ಮಾಡಬೇಕು ಎಂದು ಆಗ್ರಹಿಸಿದರು.

55 ಅಂಶಗಳನ್ನು ಒಳಗೊಂಡ ಸಮೀಕ್ಷೆ ಇದು. ಇದರಿಂದ ಜಾತಿಯ ಸ್ಥಿತಿಗತಿ ಏನಿದೆ?. ಸಾಮಾಜಿಕ, ಶೈಕ್ಷಣಿಕ ಸ್ಥಿತಿಗತಿ ಏನಿದೆ ಎಂಬುದು ಗೊತ್ತಾಗುತ್ತದೆ. ಈ ಸಮೀಕ್ಷೆಯನ್ನು ಬೇಗ ಜಾರಿಗೆ ತರುವಂತೆ ಸರ್ಕಾರಕ್ಕೆ ಆಗ್ರಹಿಸುವ ನಿರ್ಣಯ ಕೈಗೊಳ್ಳಬೇಕು. ಡಿ.30ರಂದು ಬೃಹತ್ ಸಮಾವೇಶ ಮಾಡಬೇಕು. ಚಿತ್ರದುರ್ಗ ಅಥವಾ ದಾವಣಗೆರೆಯಲ್ಲಿ ಮಾಡಬೇಕು ಎಂದು ಹೇಳಿದರು.

ಶಾಮನೂರು ಶಿವಶಂಕರಪ್ಪ ಲಿಂಗಾಯತ ಸಂಖ್ಯೆ ಕಡಿಮೆ ಮಾಡೋಕೆ ಪ್ರಯತ್ನ ಮಾಡ್ತಿದಾರೆ ಅಂತಾರೆ. ಲಿಂಗಾಯತರು ಉಪ ಜಾತಿಯಲ್ಲಿ ಗುರುತಿಸಿಕೊಂಡು ಬೇರೆ ಬೇರೆ ಸೌಲಭ್ಯ ಪಡೆಯುತ್ತಿದ್ದಾರೆ ಅದಕ್ಕೆ ನಾವು ಹೊಣೆಯಾ?. ಅದು ಯಾಕೆ ಅವರಿಗೆ ಗೊತ್ತಾಗಿಲ್ಲ . ಈಗ ಲಿಂಗಾಯತ ಅಂತ ಹಾಕ್ತಾರಾ ಇಲ್ಲವಾ ಎಂದು ಪ್ರಶ್ನಿಸಿದರು.

ಅಹಿಂದ ಸಮಾವೇಶ ಆಯೋಜಿಸಿ ಶಕ್ತಿ ಪ್ರದರ್ಶನ: ಕಾಂತರಾಜ್ ವರದಿಗೆ ಸಂಬಂಧಿಸಿದಂತೆ ಡಿ.30ರಂದು ಬೃಹತ್ ಅಹಿಂದ ಸಮಾವೇಶ ಚಿತ್ರದುರ್ಗ ಅಥವಾ ದಾವಣಗೆರೆಯಲ್ಲಿ ಆಯೋಜಿಸಿ, ಸುಮಾರು 10 ಲಕ್ಷ ಜನ ಸೇರಿಸಲು ನಿರ್ಧರಿಸಲಾಯಿತು.

ವೀರಪ್ಪ ಮೊಯ್ಲಿ ಅವರ ಕಾಲದಲ್ಲಿ ಶೇ 4ರಷ್ಟು ಮುಸ್ಲಿಂ ಮೀಸಲಾತಿ ನೀಡಿದ್ದಾರೆ. ದೇವೇಗೌಡರು ಮುಸ್ಲಿಂ ಮೀಸಲಾತಿ ನೀಡಿಲ್ಲ. ಅವರು ಕೇವಲ ಅಧಿಸೂಚನೆ ಮಾತ್ರ ಹೊರಡಿಸಿದ್ದಾರೆ. ಈಗ ಮುಸ್ಲಿಂರಿಗೆ ಶೇ 7ರಷ್ಟು ಮೀಸಲಾತಿ ಬೇಕು ಎಂದು ಮುಸ್ಲಿಂ ಮುಖಂಡ ಮೆಹಬೂಬಾ ಪಾಷಾ ಆಗ್ರಹಿಸಿದರು.

ಇದನ್ನೂಓದಿ:ಹಳೆ ಜಾತಿ ಗಣತಿ ವರದಿ ಕೈಬಿಡಿ, ಹೊಸದಾಗಿ ಸಮೀಕ್ಷೆ ನಡೆಸಿ: ವೀರಶೈವ ಮಹಾಸಭೆ ಆಗ್ರಹ

Last Updated : Nov 25, 2023, 9:58 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.