ETV Bharat / state

ಜಿಂದಾಲ್​​ಗೆ ಭೂಮಿ ಪರಭಾರೆ ಪ್ರಕರಣ: ವಾರ ಕಳೆದರೂ ರಚನೆಯಾಗದ ಸಂಪುಟ ‌ಉಪಸಮಿತಿ! - etv bharat

ರಾಜಕೀಯವಾಗಿ ಧೂಳೆಬ್ಬಿಸಿದ ಜಿಂದಾಲ್​ಗೆ ಭೂಮಿ ಪರಭಾರೆ ಸಂಬಂಧ ಸಂಪುಟ ಉಪಸಮಿತಿ ರಚನೆಗೆ ಮೈತ್ರಿ ಸರ್ಕಾರ ಇನ್ನೂ ಮುಂದಾಗಿಲ್ಲ. ಸಂಪುಟ‌ ಉಪಸಮಿತಿ ರಚನೆ ಮಾಡಲು ಏಕೆ ಮೀನಮೇಷ ಎಣಿಸುತ್ತಿದೆ?

ಸಂಗ್ರಹ ಚಿತ್ರ
author img

By

Published : Jun 22, 2019, 2:36 PM IST

ಬೆಂಗಳೂರು: ಕಳೆದ ಶುಕ್ರವಾರ (ಜೂನ್ 14) ಸಂಪುಟ ಸಭೆಯಲ್ಲಿ ಜಿಂದಾಲ್​ಗೆ ಭೂಮಿ ಪರಭಾರೆ ಸಂಬಂಧ ಪರಿಶೀಲನೆ ನಡೆಸಲು ಸಂಪುಟ ಉಪಸಮಿತಿ ರಚನೆಗೆ ತೀರ್ಮಾನಿಸಲಾಗಿತ್ತು. ಭೂಮಿ ಪರಭಾರೆಯ ಸಾಧಕ ಬಾಧಕಗಳನ್ನು ಪರಿಶೀಲಿಸಿ, ಆದಷ್ಟು ಬೇಗ ವರದಿ ನೀಡಲು ಸೂಚನೆ ನೀಡಲಾಗಿತ್ತು. ಆದರೆ, ಸಂಪುಟ ಉಪಸಮಿತಿ ರಚನೆ ಬಗ್ಗೆ ನಿರ್ಧಾರ ಕೈಗೊಂಡು ಒಂದು ವಾರ ಕಳೆದರೂ ಸರ್ಕಾರ ಮಾತ್ರ ಇನ್ನೂ ಸಮಿತಿ ರಚನೆಯ ಗೋಜಿಗೆ ಹೋಗಿಲ್ಲ. ವಾರ ಕಳೆದರೂ ಉಪಸಮಿತಿ ರಚನೆ ಸಾಧ್ಯವಾಗಿಲ್ಲ.

ಜಿಂದಾಲ್​ಗೆ ಭೂಮಿ ಪರಭಾರೆ ನಿರ್ಧಾರಕ್ಕೆ ಆಡಳಿತ ಪಕ್ಷದ ಶಾಸಕರೂ ಆಕ್ಷೇಪ ವ್ಯಕ್ತಪಡಿಸಿದ್ದರೆ, ಇತ್ತ ಪ್ರತಿಪಕ್ಷ ಬಿಜೆಪಿ ಯಡಿಯೂರಪ್ಪ ನೇತೃತ್ವದಲ್ಲಿ ಅಹೋರಾತ್ರಿ ಪ್ರತಿಭಟನೆ ನಡೆಸಿತ್ತು. ಹಿರಿಯ ಕಾಂಗ್ರೆಸ್ ಮುಖಂಡ‌ ಎಚ್.ಕೆ.ಪಾಟೀಲ್ ಹಾಗೂ ಪ್ರತಿಪಕ್ಷಗಳ ಕೆಂಗಣ್ಣಿನಿಂದ ಪಾರಾಗಲು ಮೈತ್ರಿ ಸರ್ಕಾರ ಸಂಪುಟ ಉಪಸಮಿತಿ ರಚನೆಗೆ ನಿರ್ಧರಿಸಿತ್ತು. ಆದರೆ, ಯಾಕೋ ಸಂಪುಟ‌ ಉಪಸಮಿತಿ ರಚನೆ ಮಾಡಲು ಮೀನಮೇಷ ಎಣಿಸುತ್ತಿದೆ.

ಸಂಪುಟ ಉಪಸಮಿತಿ ರಚನೆ ಕಸರತ್ತು:

ಮೈತ್ರಿ ಸರ್ಕಾರ ಇನ್ನೂ ಉಪಸಮಿತಿ ರಚನೆ ಕಸರತ್ತಿನಲ್ಲೇ ತೊಡಗಿದೆ. ಉಪಸಮಿತಿಯ ನೇತೃತ್ವ ಯಾರು ವಹಿಸಬೇಕು, ಯಾರೆಲ್ಲಾ ಸದಸ್ಯರಾಗಬೇಕೆಂಬ ಗೊಂದಲದಲ್ಲೇ ಮೈತ್ರಿ ಸರ್ಕಾರ ಇದೆ ಎನ್ನಲಾಗಿದೆ.

ಡಿಸಿಎಂ ಡಾ.ಜಿ.ಪರಮೇಶ್ವರ್​ ಅವರನ್ನು ಉಪಸಮಿತಿ ಅಧ್ಯಕ್ಷರನ್ನಾಗಿ ಮಾಡುವ ಬಗ್ಗೆ ಒಲವು ವ್ಯಕ್ತವಾಗಿದೆ. ಡಿಸಿಎಂ ಪರಮೇಶ್ವರ್ ನೇತೃತ್ವದಲ್ಲಿ ಉಪಸಮಿತಿ ಜಿಂದಾಲ್ ಭೂಮಿ ಪರಭಾರೆ ಪ್ರಕರಣದ ಪರಿಶೀಲನೆ ನಡೆಸುವುದು ಸೂಕ್ತ ಎಂಬುದು‌ ಬಹುತೇಕರ ಸಹಮತವಾಗಿದೆ. ಉಳಿದಂತೆ ಉಪಸಮಿತಿಗೆ ಯಾರೆನ್ನೆಲ್ಲ ಸೇರ್ಪಡೆಗೊಳಿಸಬೇಕು ಎಂಬ ಗೊಂದಲದಲ್ಲಿ ಸರ್ಕಾರ ಬಿದ್ದಂತಿದೆ.

ಉಪಸಮಿತಿಗೆ ಬಳ್ಳಾರಿಯ ಕೆಲ ಶಾಸಕರನ್ನು ಸೇರಿಸುವ ಬಗ್ಗೆ ಚರ್ಚೆ ನಡೆಯುತ್ತಿದೆ. ಭೂಮಿ ಪರಭಾರೆಗೆ ವಿರೋಧ ವ್ಯಕ್ತಪಡಿಸಿದ್ದ ಶಾಸಕ ಆನಂದ್‌ ಸಿಂಗ್, ನಾಗೇಂದ್ರರನ್ನು ಉಪಸಮಿತಿಯ ಸದಸ್ಯರನ್ನಾಗಿ ಮಾಡುವ ಸಾಧ್ಯತೆ ಹೆಚ್ಚಿದೆ ಎನ್ನಲಾಗಿದೆ.

ಇತ್ತ ಬೃಹತ್ ಕೈಗಾರಿಕಾ ಸಚಿವ ಕೆ.ಜೆ.ಜಾರ್ಜ್ ಉಪಸಮಿತಿಯ ಭಾಗವಾಗದಿರಲು ನಿರ್ಧರಿಸಿದ್ದಾರೆ. ಉಳಿದಂತೆ ಇಬ್ಬರು ಮೂವರು ಸಚಿವರು ಉಪಸಮಿತಿಯ ಸದಸ್ಯರಾಗುವ ಸಾಧ್ಯತೆ ಇದ್ದು, ಬಹುತೇಕ ಸಚಿವ ಡಿ.ಕೆ.ಶಿವಕುಮಾರ್, ಕೃಷ್ಣ ಭೈರೇಗೌಡ, ತುಕಾರಾಂ ಅಥವಾ ಪರಮೇಶ್ವರ್ ನಾಯಕ್ ಅವರನ್ನು ಉಪಸಮಿತಿಯ ಸದಸ್ಯರಾಗಿ ಆಯ್ಕೆ ಮಾಡುವ ಸಾಧ್ಯತೆ ಇದೆ.

ಒಟ್ಟಿನಲ್ಲಿ ಸಂಪುಟ ಉಪಸಮಿತಿ ರಚನೆ ಸಂಬಂಧ‌ ನಿರ್ಧಾರ ಕೈಗೊಂಡು ಒಂದು ವಾರ ಕಳೆದರೂ ಇನ್ನೂ ಉಪಸಮಿತಿ ರಚನೆಯಾಗದೇ ಇರುವುದು ಹಲವು ಅನುಮಾನ, ಗೊಂದಲಗಳಿಗೆ ಮೈತ್ರಿ ಸರ್ಕಾರ ಎಡೆ ಮಾಡಿಕೊಟ್ಟಂತಾಗಿದೆ.

Intro:Jindal sub comitteeBody:KN_BNG_01_22_JINDALSUBCOMMITTEE_DELAY_SCRIPT_VENKAT_7201951

ಜಿಂದಾಲ್‌ ಭೂಮಿ ಪರಭಾರೆ ಪ್ರಕರಣ: ವಾರ ಕಳೆದರೂ ರಚನೆಯಾಗದ ಸಂಪುಟ ‌ಉಪಸಮಿತಿ!

ಬೆಂಗಳೂರು: ರಾಜಕೀಯವಾಗಿ ಧೂಳೆಬ್ಬಿಸಿದ ಜಿಂದಾಲ್ ಗೆ ಭೂಮಿ ಪರಭಾರೆ ಸಂಬಂಧ ಸಂಪುಟ ಉಪ ಸಮಿತಿ ರಚನೆಗೆ ಮೈತ್ರಿ ಸರ್ಕಾರ ಇನ್ನೂ ಮುಂದಾಗಿಲ್ಲ.

ಕಳೆದ ಶುಕ್ರವಾರ (ಜೂನ್ 14) ಸಂಪುಟ ಸಭೆಯಲ್ಲಿ ಜಿಂದಾಲ್ ಗೆ ಭೂಮಿ ಪರಭಾರೆ ಸಂಬಂಧ ಪರಿಶೀಲನೆ ನಡೆಸಲು ಸಂಪುಟ ಉಪಸಮಿತಿ ರಚನೆಗೆ ತೀರ್ಮಾನಿಸಲಾಗಿತ್ತು. ಭೂಮಿ ಪರಭಾರೆಯ ಸಾಧಕ ಬಾಧಕಗಳನ್ನು ಪರಿಶೀಲಿಸಿ, ಆದಷ್ಟು ಬೇಗ ವರದಿ ನೀಡಲು ಸೂಚನೆಯನ್ನೂ ನೀಡಲಾಗಿತ್ತು. ಆದರೆ, ಸಂಪುಟ ಉಪಸಮಿತಿ ರಚನೆ ಬಗ್ಗೆ ನಿರ್ಧಾರ ಕೈಗೊಂಡು ಒಂದು ವಾರ ಕಳೆದರೂ ಸರ್ಕಾರ ಮಾತ್ರ ಇನ್ನೂ ಸಮಿತಿ ರಚನೆಯ ಗೋಜಿಗೆ ಹೋಗಿಲ್ಲ. ವಾರ ಕಳೆದರೂ ಉಪಸಮಿತಿ ರಚನೆ ಸಾಧ್ಯವಾಗಿಲ್ಲ.

ಜಿಂದಾಲ್ ಗೆ ಭೂಮಿ ಪರಭಾರೆ ನಿರ್ಧಾರಕ್ಕೆ ಆಡಳಿತ ಪಕ್ಷದ ಶಾಸಕರೂ ಆಕ್ಷೇಪ ವ್ಯಕ್ತಪಡಿಸಿದ್ದರೆ, ಇತ್ತ ಪ್ರತಿಪಕ್ಷ ಬಿಜೆಪಿ ಯಡಿಯೂರಪ್ಪ ನೇತೃತ್ವದಲ್ಲಿ ಅಹೋರಾತ್ರಿ ಪ್ರತಿಭಟನೆಯನ್ನೂ ನಡೆಸಿತ್ತು. ಹಿರಿಯ ಕಾಂಗ್ರೆಸ್ ಮುಖಂಡ‌ ಎಚ್.ಕೆ.ಪಾಟೀಲ್ ಹಾಗೂ ಪ್ರತಿಪಕ್ಷಗಳ ಕೆಂಗಣ್ಣಿನಿಂದ ಪಾರಾಗಲು ಮೈತ್ರಿ ಸರ್ಕಾರ ಸಂಪುಟ ಉಪಸಮಿತಿ ರಚನೆಗೆ ನಿರ್ಧರಿಸಿತ್ತು. ಆದರೆ ಯಾಕೋ ಸಂಪುಟ‌ ಉಪಸಮಿತಿ ರಚನೆ ಮಾಡಲು ಮೀನಾಮೇಷ ಎಣಿಸುತ್ತಿದೆ.

ಸಂಪುಟ ಉಪಸಮಿತಿ ರಚನೆ ಕಸರತ್ತು:

ಮೈತ್ರಿ ಸರ್ಕಾರ ಇನ್ನೂ ಉಪಸಮಿತಿ ರಚನೆ ಕಸರತ್ತಿನಲ್ಲೇ ತೊಡಗಿದೆ. ಉಪಸಮಿತಿಯ ನೇತೃತ್ವ ಯಾರು ವಹಿಸಬೇಕು, ಯಾರೆಲ್ಲಾ ಸದಸ್ಯರಾಗಬೇಕೆಂಬ ಗೊಂದಲದಲ್ಲೇ ಮೈತ್ರಿ ಸರ್ಕಾರ ಇದೆ ಎನ್ನಲಾಗಿದೆ.

ಡಿಸಿಎಂ ಡಾ.ಜಿ.ಪರಮೇಶ್ವರ್ ನ್ನು ಉಪಸಮಿತಿ ಅಧ್ಯಕ್ಷರನ್ನಾಗಿ ಮಾಡುವ ಬಗ್ಗೆ ಒಲವು ವ್ಯಕ್ತವಾಗಿದೆ. ಡಿಸಿಎಂ ಪರಮೇಶ್ವರ್ ನೇತೃತ್ವದಲ್ಲಿ ಉಪಸಮಿತಿ ಜಿಂದಾಲ್ ಭೂಮಿ ಪರಭಾರೆ ಪ್ರಕರಣದ ಪರಿಶೀಲನೆ ನಡೆಸುವುದು ಸೂಕ್ತ ಎಂಬುದು‌ ಬಹುತೇಕರ ಸಹಮತವಾಗಿದೆ. ಉಳಿದಂತೆ ಉಪಸಮಿತಿ ಗೆ ಯಾರೆನ್ನೆಲ್ಲ ಸೇರ್ಪಡೆಗೊಳಿಸಬೇಕು ಎಂಬ ಗೊಂದಲದಲ್ಲಿ ಸರ್ಕಾರ ಬಿದ್ದಂತಿದೆ.

ಉಪಸಮಿತಿಗೆ ಬಳ್ಳಾರಿಯ ಕೆಲ ಶಾಸಕರನ್ನು ಸೇರಿಸುವ ಬಗ್ಗೆ ಚರ್ಚೆ ನಡೆಯುತ್ತಿದೆ. ಭೂಮಿ ಪರಭಾರೆಗೆ ವಿರೋಧ ವ್ಯಕ್ತಪಡಿಸಿದ್ದ ಶಾಸಕ ಆನಂದ್‌ ಸಿಂಗ್, ನಾಗೇಂದ್ರರನ್ನು ಉಪಸಮಿತಿಯ ಸದಸ್ಯರನ್ನಾಗಿ ಮಾಡುವ ಸಾಧ್ಯತೆ ಹೆಚ್ಚಿದೆ ಎನ್ನಲಾಗಿದೆ.

ಇತ್ತ ಬೃಹತ್ ಕೈಗಾರಿಕಾ ಸಚಿವ ಕೆ.ಜೆ.ಜಾರ್ಜ್ ಉಪಸಮಿತಿಯ ಭಾಗವಾಗದಿರಲು ನಿರ್ಧರಿಸಿದ್ದಾರೆ. ಉಳಿದಂತೆ ಇಬ್ಬರು ಮೂವರು ಸಚಿವರು ಉಪಸಮಿತಿಯ ಸದಸ್ಯರಾಗುವ ಸಾಧ್ಯತೆ ಇದ್ದು, ಬಹುತೇಕ ಸಚಿವ ಡಿ.ಕೆ.ಶಿವಕುಮಾರ್, ಕೃಷ್ಣ ಭೈರೇಗೌಡ, ತುಕಾರಾಂ ಅಥವಾ ಪರಮೇಶ್ವರ್ ನಾಯಕ್ ರನ್ನು ಉಪಸಮಿತಿಯ ಸದಸ್ಯರಾಗಿ ಆಯ್ಕೆ ಮಾಡುವ ಸಾಧ್ಯತೆ ಇದೆ.

ಒಟ್ಟಿನಲ್ಲಿ ಸಂಪುಟ ಉಪಸಮಿತಿ ರಚನೆ ಸಂಬಂಧ‌ ನಿರ್ಧಾರ ಕೈಗೊಂಡು ಒಂದು ವಾರ ಕಳೆದರೂ ಇನ್ನೂ ಉಪಸಮಿತಿ ರಚನೆಯಾಗದೇ ಇರುವುದು ಹಲವು ಅನುಮಾನ, ಗೊಂದಲಗಳಿಗೆ ಮೈತ್ರಿ ಸರ್ಕಾರ ಎಡೆ ಮಾಡಿಕೊಟ್ಟಂತಾಗಿದೆ.Conclusion:Delay
ETV Bharat Logo

Copyright © 2025 Ushodaya Enterprises Pvt. Ltd., All Rights Reserved.