ETV Bharat / state

ಜಿಂದಾಲ್ ಕಂಪೆನಿಗೆ ಭೂ ಪರಭಾರೆ : ಬಿಜೆಪಿಯಿಂದ ಬೃಹತ್​ ಪ್ರತಿಭಟನೆ ನಿರ್ಧಾರ

ಜಿಂದಾಲ್ ಕಂಪೆನಿಗೆ ಭೂ ಪರಭಾರೆ ಹಾಗೂ ರೈತರ ಸಾಲಮನ್ನಾ ವಿಚಾರವಾಗಿ ಬಿಜೆಪಿ ನಾಯಕರು ಹಾಗೂ ಮುಖಂಡರು ಧರಣಿ ನಡೆಸುತ್ತಿದ್ದು,ಇಂದು ದೊಡ್ಡ ಮಟ್ಟದ ಹೋರಾಟ ನಡೆಸಲು ನಿರ್ಧರಿಸಿದ್ದಾರೆ.‌

author img

By

Published : Jun 16, 2019, 8:04 AM IST

ಇಂದು ಬಿಜೆಪಿಯಿಂದ ಬೃಹತ್​ ಪ್ರತಿಭಟನೆ

ಬೆಂಗಳೂರು: ಜಿಂದಾಲ್ ಕಂಪೆನಿಗೆ ಭೂ ಪರಭಾರೆ ಹಾಗೂ ರೈತರ ಸಾಲಮನ್ನಾ ವಿಚಾರವಾಗಿ ಬಿಜೆಪಿ ಮುಖಂಡರು ಕಳೆದ ಎರಡು ದಿನದಿಂದ ಆಹೋರಾತ್ರಿ ಧರಣಿ ಕೈಗೊಂಡಿದ್ದಾರೆ.

ಇಂದು ಬಿಜೆಪಿಯಿಂದ ಬೃಹತ್​ ಪ್ರತಿಭಟನೆ

ಇಂದು ಬಿಜೆಪಿ ನಾಯಕರ ಆಹೋರಾತ್ರಿ ಧರಣಿ ಸತ್ಯಾಗ್ರಹ ಅಂತ್ಯವಾಗಲಿದ್ದು ಕೊನೆ ದಿನವಾದ ಇಂದು ದೊಡ್ಡ ಹೋರಾಟ ನಡೆಸಲು ಬಿಜೆಪಿ ನಾಯಕರು ನಿರ್ಧಾರ ಮಾಡಿದ್ದಾರೆ‌. ನಗರದ ಮೌರ್ಯ ಸರ್ಕಲ್ ಬಳಿ ಬೃಹತ್ ಪ್ರತಿಭಟನೆ ನಡೆಸಿ 12 ಗಂಟೆಗೆ ಮೌರ್ಯ ಸರ್ಕಲ್ ನಿಂದ ಹೊರಟು ರೇಸ್ ಕೋರ್ಸ್ ರಸ್ತೆ, ಚಿತ್ರಕಲಾ ಪರಿಷತ್ ಮೂಲಕ ಜಾಥಾ ಮಾಡಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಗೃಹ ಕಚೇರಿ ಕೃಷ್ಣಗೆ ಮುತ್ತಿಗೆ ಹಾಕಲಿದ್ದಾರೆ.

ಇನ್ನು ಹೋರಾಟದಲ್ಲಿ ಸುಮಾರು ಐದು ಸಾವಿರ ಕಾರ್ಯಕರ್ತರು ಭಾಗಿಯಾಗುವ ನಿರೀಕ್ಷೆ ಇದೆ. ಬೆಂಗಳೂರಿನ ಎಲ್ಲಾ ವಾರ್ಡ್ ಬಿಜೆಪಿ ಮುಖಂಡರು, ಕಾರ್ಯಕರ್ತರಿಗೆ ಪ್ರತಿಭಟನೆ ಹಾಗೂ ಮುತ್ತಿಗೆ ವೇಳೆ ಭಾಗವಹಿಸುವಂತೆ ಸೂಚನೆ ನೀಡಲಾಗಿದೆ.

Intro:ಬಿಜೆಪಿ ಆಹೋರಾತ್ರಿ ಧರಣಿ
ಫ್ರೆಶಪ್ ಆಗಲು ಮನೆಗೆ ತೆರಳಿದ ಬಿಜೆಪಿ ನಾಯಕರು ಮೋಜೋ ವಾಕ್ ಥ್ರೂ ವಿಶುವಲ್ ಬಂದಿದೆ

Bhavya

ಜಿಂದಾಲ್ ಕಂಪನಿಗೆ ಭೂ ಪರಭಾರೆ ಹಾಗೂ ರೈತರ ಸಾಲಮನ್ನಕ್ಕೆ ಬಿಜೆಪಿ ಮುಖಂಡರು ಕಳೆದ ಎರಡು ದಿನದಿಂದ ಆಹೋರಾತ್ರಿ ಧರಣಿ ಕೈಗೊಂಡಿದ್ದಾರೆ.ಇಂದು ಬಿಜೆಪಿ ನಾಯಕರ ಆಹೋರಾತ್ರಿ ಧರಣಿ ಸತ್ಯಾಗ್ರಹ ಅಂತ್ಯವಾಗಲಿದ್ದು ಕೊನೆ ದಿನ ದೊಡ್ಡ ಹೋರಾಟ ನಡೆಸಲು ಬಿಜೆಪಿ ನಾಯಕರು ನಿರ್ಧಾರ ಮಾಡಿದ್ದಾರೆ‌.

ಮುಂಜಾನೆ ಮೌರ್ಯ ಸರ್ಕಲ್ ಬಳಿ ಬೃಹತ್ ಪ್ರತಿಭಟನೆ ನಡೆಸಿ
೧೨ ಗಂಟೆಗೆ ಮೌರ್ಯ ಸರ್ಕಲ್ ನಿಂದ ಹೊರಟು ರೇಸ್ ಕೋರ್ಸ್ ರಸ್ತೆ, ಚಿತ್ರಕಲಾ ಪರಿಷತ್ ಮೂಲಕ ಜಾಥಾ ಮಾಡಿ
ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಗೃಹ ಕಚೇರಿ ಕೃಷ್ಣಗೆ
ಮುತ್ತಿಗೆ ಹಾಕಲಿದ್ದಾರೆ.
ಇನ್ನು ಹೋರಾಟದಲ್ಲಿ ಸುಮಾರು ಐದು ಸಾವಿರ ಕಾರ್ಯಕರ್ತರು ಭಾಗಿ ನಿರೀಕ್ಷೆ ಇದ್ದು‌ ಬೆಂಗಳೂರಿನ ಎಲ್ಲಾ ವಾರ್ಡ್ ಬಿಜೆಪಿ ಮುಖಂಡರು, ಕಾರ್ಯಕರ್ತರು ಪ್ರತಿಭಟನೆ ಹಾಗೂ ಮುತ್ತಿಗೆ ವೇಳೆ ಭಾಗವಹಿಸಲು ಸೂಚನೆ ನೀಡಲಾಗಿದೆ.

ಸದ್ಯ ಎಲ್ಲಾ ಬಿಜೆಪಿ ನಾಯಕರು ಫ್ರೆಶಪ್ ಆಗಲು ಮನೆಗೆ ಹೋಗಿದ್ದು ಮಾಜಿ ಸಚಿವ ರೇಣುಕಾಚಾರ್ಯ ಮತ್ತು ವಿಶ್ವನಾಥ್ ಹೊರತು ಪಡಿಸಿ ಎಲ್ಲಾ ನಾಯಕರು ಬೆಳಗ್ಗೆ ಐದು ಗಂಟೆ ಸುಮಾರಿಗೆ ಮನೆಗೆ ತೆರಳಿದ್ದಾರೆ. ಎಂಟು ಗಂಟೆಗೆ ಮತ್ತೆ ಎಲ್ಲಾ ನಾಯಕರು ಹಾಜರಾಗಲಿದ್ದಾರೆ ಎಂದು ತಿಳಿದು ಬಂದಿದೆ.Body:KN_BNG_01_16_BJP_7204498_BHAVYAConclusion:KN_BNG_01_16_BJP_7204498_BHAVYA
ETV Bharat Logo

Copyright © 2024 Ushodaya Enterprises Pvt. Ltd., All Rights Reserved.