ETV Bharat / state

25 ಲಕ್ಷ ಮೌಲ್ಯದ 32 ಬೈಕ್ ಕಳ್ಳತನ: ಆನೇಕಲ್‌ನಲ್ಲಿ ಅಂತಾರಾಜ್ಯ ಕಳ್ಳನ ಬಂಧನ

author img

By

Published : Nov 9, 2021, 6:57 PM IST

ಬೆಂಗಳೂರಿನ ಜಿಗಣಿ ಪೊಲೀಸರು ಅಂತಾರಾಜ್ಯ ಬೈಕ್​ ಕಳ್ಳನನ್ನು ಬಂಧಿಸಿದ್ದು, ಆತನ ಬಳಿಯಿಂದ ಸುಮಾರು 32 ಬೈಕ್​ಗಳನ್ನು ವಶಕ್ಕೆ ಪಡೆದಿದ್ದಾರೆ.

jigani police detained 32 bikes from interstate thief
ಬೈಕ್​ ಕಳ್ಳನ ಬಂಧನ

ಆನೇಕಲ್: 25 ಲಕ್ಷ ಮೌಲ್ಯದ 32 ದ್ವಿಚಕ್ರ ವಾಹನಗಳನ್ನು ಕಳ್ಳತನ ಮಾಡಿದ್ದ ಅಂತಾರಾಜ್ಯ ಕಳ್ಳನನ್ನ ಬಂಧಿಸುವಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಆನೇಕಲ್ ಉಪ ವಿಭಾಗದ ಜಿಗಣಿ ಪೊಲೀಸರು ಯಶಸ್ವಿಯಾಗಿದ್ದಾರೆ.

ತಮಿಳುನಾಡಿನ ವೆಲ್ಲೂರು ಜಿಲ್ಲೆಯ ಗುಡಿಯಾತಂ ತಾಲೂಕಿನ ಕಾರಂಪಟ್ಟಿ ಗ್ರಾಮದ ಚಾಲಕ ವೃತ್ತಿ ಮಾಡಿಕೊಂಡಿದ್ದ ಶರತ್ ಬಾಬು(38) ಬಂಧಿತ ಆರೋಪಿ.

ಈತ ಜಿಗಣಿ, ಬನ್ನೇರುಘಟ್ಟ, ಆನೇಕಲ್ ಮತ್ತಿತರ ಪೊಲೀಸ್ ಠಾಣಾ ಸರಹದ್ದಿನಲ್ಲಿ ಬೈಕ್​ಗಳನ್ನು ಕಳ್ಳತನ ಮಾಡಿ ತಮಿಳುನಾಡಿಗೆ ಬೈಕ್ ಸಮೇತ ಪರಾರಿಯಾಗುತ್ತಿದ್ದ ಎಂದು ತಿಳಿದು ಬಂದಿದೆ.

ಕಳೆದ ನಾಲ್ಕು ತಿಂಗಳುಗಳಲ್ಲಿ ಮನೆಗಳ ಬಳಿ, ಬೈಕ್ ನಿಲ್ದಾಣಗಳಲ್ಲಿ ಮತ್ತು ರಸ್ತೆ ಬದಿ ನಿಲ್ಲಿಸಿದ್ದ ಬೈಕ್​ಗಳನ್ನು ಕಳ್ಳತನ ಮಾಡಿದ್ದಾಗಿ ವಿಚಾರಣೆ ವೇಳೆ ಆರೋಪಿ ಪೊಲೀಸರೆದುರು ಬಾಯ್ಬಿಟ್ಟಿದ್ದಾನೆ.

ಪೊಲೀಸರು ಆರೋಪಿಯಿಂದ 32 ಬೈಕ್​​ಗಳನ್ನು ವಶಪಡಿಸಿಕೊಂಡಿದ್ದಾರೆ. ಸದ್ಯ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವ ಸಿದ್ಧತೆಯಲ್ಲಿದ್ದು ಬೈಕ್ ಕಳೆದುಕೊಂಡವರಿಗೆ ಮರಳಿ ನೀಡಲು ಕ್ರಮ ಕೈಗೊಳ್ಳಲಿದ್ದಾರೆ.

ಇದನ್ನೂ ಓದಿ:ವನ್ಯಜೀವಿಗಳ ದೇಹದ ಭಾಗಗಳ ಮಾರಾಟ ಯತ್ನ: ರಾಯಚೂರಲ್ಲಿ ನಾಲ್ವರ ಬಂಧನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.