ಬೆಂಗಳೂರು: ಬಹುನಿರೀಕ್ಷಿತ ಆಭರಣ ಪ್ರದರ್ಶನ ಮೇಳಕ್ಕೆ ಮತ್ತೆ ಕಾಲ ಕೂಡಿಬಂದಿದೆ. ನಗರದ ಅತಿದೊಡ್ಡ ಆಭರಣಕಾರರನ್ನು ಒಂದೇ ಸೂರಿನಡಿ ತರುವ ಉದ್ದೇಶದಿಂದ ಪ್ರಥಮ ಬಾರಿಗೆ ಮಹಿಳಾ ಉದ್ಯಮಿಗಳಿಂದ ವೈವಿಧ್ಯಮಯ ಆಭರಣ ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿದೆ.
![jewelry-exhibition-fair-by-women-entrepreneurs](https://etvbharatimages.akamaized.net/etvbharat/prod-images/kn-bng-jewelaryshow-ka10018_05092019124624_0509f_1567667784_203.jpg)
ಈ ಜ್ಯುವೆಲ್ಲರಿ ಪ್ರದರ್ಶನವನ್ನು ಸೆಪ್ಟಂಬರ್ 7 ಮತ್ತು 8 ರಂದು ಹೆಚ್‍ಎಸ್‍ಆರ್ ಲೇಔಟ್‍ನ ವೈಟ್ ಹೌಸಹಹ ಕನ್ವೆನ್ಷನ್ ಸೆಂಟರ್‍ನಲ್ಲಿ ಹಮ್ಮಿಕೊಳ್ಳಲಾಗಿದ್ದು, ಪ್ರೀಮಿಯಂ ಆಭರಣಗಳು ವಿವಿಧ ಅಭಿರುಚಿ ಮತ್ತು ಬಜೆಟ್‍ಗೆ ಅನುಗುಣವಾಗಿ ಅತ್ಯುತ್ತಮ ಸಂಗ್ರಹಗಳೊಂದಿಗೆ ದೊರೆಯಲಿವೆ. 2 ದಿನಗಳ ಕಾಲ ಬೆಳಗ್ಗೆ 10ರಿಂದ ಸಂಜೆ 7 ಗಂಟೆವರೆಗೆ ಆಭರಣ ಪ್ರದರ್ಶನ ನಡೆಯಲಿದ್ದು, ಪ್ರಸ್ತುತ ಮೇಳದಲ್ಲಿ ಸುಮಾರು 15ಕ್ಕೂ ಹೆಚ್ಚು ನುರಿತ ಆಭರಣ ತಯಾರಕರು ತಮ್ಮದೇ ಆದ ಪ್ರಾಚೀನ ಕಾಲದ ಆಭರಣಗಳನ್ನು ಪ್ರದರ್ಶಿಸಲಿದ್ದಾರೆ.
![jewelry-exhibition-fair-by-women-entrepreneurs](https://etvbharatimages.akamaized.net/etvbharat/prod-images/kn-bng-jewelaryshow-ka10018_05092019124624_0509f_1567667784_789.jpg)
ಪ್ರದರ್ಶನದ ಸಂಸ್ಥಾಪಕರಾದ ಸನಮ್ ಡೆಂಬ್ಲಾ ಮಾತನಾಡಿ, ಈ ಸುಂದರ ನಗರದ ಸೌಂದರ್ಯವನ್ನು ಪೂರೈಸಲು ನಾವು ಪ್ರೀಮಿಯಂ ಆಭರಣಗಳನ್ನು ಪ್ರದರ್ಶಿಸುತ್ತಿದ್ದೇವೆ. ತರಹೇವಾರಿ ಆಭರಣಗಳು ಒಂದೇ ಕಡೆ ಸಿಗುವುದರಿಂದ ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಆಭರಣಗಳನ್ನು ಕಣ್ತುಂಬಿಕೊಳ್ಳಬಹುದಾಗಿದೆ ಎಂದರು.
![jewelry-exhibition-fair-by-women-entrepreneurs](https://etvbharatimages.akamaized.net/etvbharat/prod-images/kn-bng-jewelaryshow-ka10018_05092019124624_0509f_1567667784_1078.jpg)
ನವರಥನ್ ಜ್ಯುವೆಲ್ಲರ್ಸ್, ನೀಲಕಂಠ ಜ್ಯುವೆಲ್ಲರಿ, ಪಂಚ್ ಕೇಸರಿ ಬಡೆರಾ ಜ್ಯುವೆಲ್ಲರ್ಸ್, ಶ್ರೀ ಗಣೇಶ್ ಡೈಮಂಡ್ಸ್ ಮತ್ತು ಜ್ಯುವೆಲ್ಲರಿ, ಅನನ್ಯಾ ಡೈಮಂಡ್ಸ್, ರಾಜ್ ಡೈಮಂಡ್ಸ್, ಪಿಎಂಜೆ ಜ್ಯುವೆಲ್ಲರ್ಸ್, ಶ್ರೀ ಕೃಷ್ಣ ಡೈಮಂಡ್ಸ್, ಜ್ಯುವೆರಾನ್ ಜ್ಯುವೆಲ್ಲರ್ಸ್, ಅಪ್ರಾಂಜೆ ಜ್ಯುವೆಲ್ಲರ್ಸ್, ಅಮ್ರಪಾಲಿ ಜ್ಯುವೆಲ್ಸ್ ಮತ್ತು ಡೈಮಂಡ್ ಮಂತ್ರ ಸೇರಿದಂತೆ ಅನೇಕ ಆಭರಣ ಕಂಪನಿಗಳು ಮೇಳದಲ್ಲಿ ಭಾಗವಹಿಸಲಿವೆ.