ಬೆಂಗಳೂರು : ಜ್ಯುವೆಲ್ಲರಿ ಶಾಪ್ ಶೆಟರ್ ಮುರಿದು ಒಳ ನುಗ್ಗಿರುವ ಖದೀಮರು ಲಕ್ಷಾಂತರ ಮೌಲ್ಯದ ಆಭರಣ ದೋಚಿರುವ ಘಟನೆ ವೈಟ್ ಫೀಲ್ಡ್ ಪೊಲೀಸ್ ಠಾಣಾ ವ್ಯಾಪ್ತಿಯ ಇಮ್ಮಡಿಹಳ್ಳಿಯಲ್ಲಿ ನಡೆದಿದೆ.
ಇಮ್ಮಡಿಹಳ್ಳಿ ಮಾತಾಜಿ ಜ್ಯುವೆಲ್ಲರಿ ಶಾಪ್ನಲ್ಲಿ ಆಗಸ್ಟ್ 5ರ ಬೆಳಗಿನ ಜಾವ ಈ ಘಟನೆ ನಡೆದಿದೆ. ಜ್ಯುವೆಲ್ಲರಿ ಶಾಪ್ ಪಕ್ಕದ ಗ್ರಂಧಿಗೆ ಅಂಗಡಿಯಿಂದ ಕಿಟಕಿ ಸರಳು ಮುರಿದು ಒಳ ನುಗ್ಗಿರುವ ಕಳ್ಳರು, ಚಿನ್ನವಿದ್ದ ಲಾಕರ್ ಒಡೆಯಲು ಮುಂದಾಗಿದ್ದಾರೆ. ಲಾಕರ್ ಒಪನ್ ಆಗದ ಕಾರಣ ಅಲ್ಲೇ ಇದ್ದ 35 ಲಕ್ಷ ಮೌಲ್ಯದ 50 ಕೆಜಿ ಬೆಳ್ಳಿವಸ್ತು ಹಾಗೂ ₹10 ಸಾವಿರ ನಗದು ದೋಚಿದ್ದಾರೆ.
ಕಳ್ಳರ ಚಲನವಲನ, ಕಳ್ಳತನ ಮಾಡಿರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಅಂಗಡಿ ಮಾಲೀಕ ಧರ್ಮರಾಮ್ ಎಂಬುವರು ನೀಡಿದ ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡು ವೈಟ್‌ಫೀಲ್ಡ್ ಪೊಲೀಸರು ತನಿಖೆ ಕೈಗೊಂಡಿದ್ದಾರೆ.