ಬೆಂಗಳೂರು: ಹಿಂದೆ ಒಂದು ಮಾತಿತ್ತು. ‘ಕೈಲಾಗದವನು ಮೈ ಪರಚಿಕೊಂಡ’ ಅಂತಾ. ಈಗ ಬಂದಿರುವ ಹೊಸ ನುಡಿಗಟ್ಟು ಏನೆಂದರೆ, ‘ಕೈಲಾಗದ ಕಾಂಗ್ರೆಸ್ ನಾಯಕ ಮೈ ಪರಚಿಕೊಂಡ’ ಎಂದು. ಸುಳ್ಳು ಸಿದ್ದಯ್ಯನ ವರಸೆ ಹಾಗಿದೆ. ಐದು ವರ್ಷ ಅಧಿಕಾರ ಇದ್ದಾಗ ಗಡದ್ದಾಗಿ ನಿದ್ದೆ ಹೊಡೆದು ಈಗ ಇನ್ನೇನು ಮಾಡಬೇಕಿತ್ತು ಎಂದು ಹೊಸ ರಾಗ ಹಾಡುತ್ತಿದ್ದಾರೆ ಎಂದು ಜೆಡಿಎಸ್ ತೀವ್ರ ವಾಗ್ದಾಳಿ ನಡೆಸಿದೆ.
ಕೊಟ್ಟ ಕುದುರೆ ಏರಿ, ಸವಾರಿಯನ್ನೂ ಮಾಡಿ, ಆಮೇಲೆ ನಮ್ಮ'ಕೈ'ಯಲ್ಲಿ ಏನೂ ಮಾಡಲಾಗಲಿಲ್ಲ ಎಂದರೆ ಹೇಗೆ?. ಅಂದರೆ, ಕೊಟ್ಟ ಕುದುರೆ ಏರಿ ಕೆಲಸ ಮಾಡದವರು ಕಾಂಗ್ರೆಸ್ ನಾಯಕ ಉರುಫ್ ಸುಳ್ಳು ಸಿದ್ದಯ್ಯ! ಎಂದು ಕಿಡಿಕಾರಿದೆ.
-
ಹಿಂದೆ ಒಂದು ಮಾತಿತ್ತು. " ಕೈಲಾಗದವನು ಮೈ ಪರಚಿಕೊಂಡ."
— Janata Dal Secular (@JanataDal_S) January 7, 2022 " class="align-text-top noRightClick twitterSection" data="
ಈಗ ಬಂದಿರುವ ಹೊಸ ನುಡಿಗಟ್ಟು ಏನೆಂದರೆ, "ಕೈಲಾಗದ ಕಾಂಗ್ರೆಸ್ ನಾಯಕ ಮೈ ಪರಚಿಕೊಂಡ" ಎಂದು. ಸುಳ್ಳು ಸಿದ್ದಯ್ಯನ ವರಸೆ ಹಾಗಿದೆ. ಐದು ವರ್ಷ ಅಧಿಕಾರ ಇದ್ದಾಗ ಗಡದ್ದಾಗಿ ನಿದ್ದೆ ಹೊಡೆದು ಈಗ ಇನ್ನೇನು ಮಾಡಬೇಕಿತ್ತು ಎಂದು ಹೊಸ ರಾಗ ಹಾಡುತ್ತಿದ್ದಾರೆ. (1/11)
">ಹಿಂದೆ ಒಂದು ಮಾತಿತ್ತು. " ಕೈಲಾಗದವನು ಮೈ ಪರಚಿಕೊಂಡ."
— Janata Dal Secular (@JanataDal_S) January 7, 2022
ಈಗ ಬಂದಿರುವ ಹೊಸ ನುಡಿಗಟ್ಟು ಏನೆಂದರೆ, "ಕೈಲಾಗದ ಕಾಂಗ್ರೆಸ್ ನಾಯಕ ಮೈ ಪರಚಿಕೊಂಡ" ಎಂದು. ಸುಳ್ಳು ಸಿದ್ದಯ್ಯನ ವರಸೆ ಹಾಗಿದೆ. ಐದು ವರ್ಷ ಅಧಿಕಾರ ಇದ್ದಾಗ ಗಡದ್ದಾಗಿ ನಿದ್ದೆ ಹೊಡೆದು ಈಗ ಇನ್ನೇನು ಮಾಡಬೇಕಿತ್ತು ಎಂದು ಹೊಸ ರಾಗ ಹಾಡುತ್ತಿದ್ದಾರೆ. (1/11)ಹಿಂದೆ ಒಂದು ಮಾತಿತ್ತು. " ಕೈಲಾಗದವನು ಮೈ ಪರಚಿಕೊಂಡ."
— Janata Dal Secular (@JanataDal_S) January 7, 2022
ಈಗ ಬಂದಿರುವ ಹೊಸ ನುಡಿಗಟ್ಟು ಏನೆಂದರೆ, "ಕೈಲಾಗದ ಕಾಂಗ್ರೆಸ್ ನಾಯಕ ಮೈ ಪರಚಿಕೊಂಡ" ಎಂದು. ಸುಳ್ಳು ಸಿದ್ದಯ್ಯನ ವರಸೆ ಹಾಗಿದೆ. ಐದು ವರ್ಷ ಅಧಿಕಾರ ಇದ್ದಾಗ ಗಡದ್ದಾಗಿ ನಿದ್ದೆ ಹೊಡೆದು ಈಗ ಇನ್ನೇನು ಮಾಡಬೇಕಿತ್ತು ಎಂದು ಹೊಸ ರಾಗ ಹಾಡುತ್ತಿದ್ದಾರೆ. (1/11)
ಮೇಕೆದಾಟು ಕನಸು ಕಂಡವರು 1995ರಲ್ಲಿ ಸಿಎಂ ಆಗಿದ್ದ ಹೆಚ್.ಡಿ.ದೇವೇಗೌಡರು. ಆ ಯೋಜನೆಯ ಸಮಗ್ರ ಯೋಜನಾ ವರದಿ -DPR ಮಾಡಿ ಕೇಂದ್ರಕ್ಕೆ ಕಳುಹಿಸಿದ್ದು, 2018ರಲ್ಲಿ ಸಿಎಂ ಆಗಿದ್ದ ಕುಮಾರಸ್ವಾಮಿ ಅವರು.
2017ರಲ್ಲಿ ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಕಳುಹಿಸಿದ್ದು ಕೇವಲ PFR ಮಾತ್ರ. ಬೆಂಗಳೂರಿನಲ್ಲೇ ಇದ್ದ ಕೇಂದ್ರ ಜಲ ಆಯೋಗದ ಪ್ರಾದೇಶಿಕ ಕಚೇರಿಗೆ PFR ಕೊಟ್ಟು ಕೈ ತೊಳೆದುಕೊಂಡ ಅವರ ಸರ್ಕಾರ, ಆ ಪ್ರಾದೇಶಿಕ ಕಚೇರಿ ಕೇಳಿದ ಯಾವ ಪ್ರಶ್ನೆಗೂ ಉತ್ತರ ಕೊಡಲಿಲ್ಲ. 2018ರಲ್ಲಿ ಹೆಚ್.ಡಿ.ಕುಮಾರಸ್ವಾಮಿ ಅವರು ಸಿಎಂ ಅದ ಮೇಲೆ ಪುನಃ PFR ಸಲ್ಲಿಸಿದ ಮೇಲೆ DPR ಸಲ್ಲಿಕೆಗೆ ಅವಕಾಶ ಸಿಕ್ಕಿತು. ಆಗ ಕುಮಾರಸ್ವಾಮಿ ಅವರ ಸರಕಾರ ತಡ ಮಾಡದೇ DPR ಸಿದ್ದಪಡಿಸಿ ಸಲ್ಲಿಸಿತು.
ಮೇಕೆದಾಟು ಡಿಪಿಆರ್ ಮಾಡಿದ್ದು ಯಾರು?
ಮೇಕೆದಾಟು ಯೋಜನೆಗೆ DPR ಮಾಡಿದ್ದು ಹೆಚ್.ಡಿ.ಕುಮಾರಸ್ವಾಮಿ ಅವರ ಸರ್ಕಾರ ಎಂದು ನಿನ್ನೆ ಜಲ ಸಂಪನ್ಮೂಲ ಸಚಿವರಾದ ಗೋವಿಂದ ಕಾರಜೋಳ ಅವರೇ ದಾಖಲೆಗಳ ಸಮೇತ ಹೇಳಿದ್ದಾರೆ. ಐದು ವರ್ಷ ಸುಳ್ಳು ಸಿದ್ದಯ್ಯ ಮಾಡಿದ್ದೇನು ಇಲ್ಲ ಎಂದು ಕಡ್ಡಿ ಮುರಿದಂತೆ ತಿಳಿಸಿದ್ದಾರೆ ಎಂದು ಜೆಡಿಎಸ್ ಹೇಳಿದೆ.
ಓದಿ: PM Security breach : ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಿದ ಪಂಜಾಬ್ ಸರ್ಕಾರ
ಹೀಗಿದ್ದರೂ ಸುಳ್ಳು ಸಿದ್ದಯ್ಯ ನಾವೇ DPR ಮಾಡಿದ್ದು ಎಂದು ಬೂಸಿ ಬಿಡುತ್ತಿದ್ದಾರೆ. ಅವರಿಗೆ PFR ಎಂಬುದು DPR ಆಗಿದ್ದು ಹೇಗೆ?, ಐದು ವರ್ಷ ಸಿಎಂ ಆಗಿದ್ದ ವ್ಯಕ್ತಿಗೆ ಇವೆರಡಕ್ಕೂ ಇರುವ ವ್ಯತ್ಯಾಸ ತಿಳಿಯದೇ? ಎಂದು ಟ್ವೀಟ್ ಮೂಲಕ ಜೆಡಿಎಸ್ ಪ್ರಶ್ನಿಸಿದೆ.
ತಮ್ಮ ತಪ್ಪು ಮುಚ್ಚಿಕೊಳ್ಳಲು ಈಗ ದೇವೇಗೌಡರನ್ನು ಸುಳ್ಳು ಸಿದ್ದಯ್ಯ ಟೀಕೆ ಮಾಡುತ್ತಿದ್ದಾರೆ. ಮೋದಿಗೆ ಗೌಡರು ಆಪ್ತರು. ಮೇಕೆದಾಟು ಯೋಜನೆಗೆ ಕೇಂದ್ರದ ಒಪ್ಪಿಗೆಯನ್ನು ಗೌಡರೇ ಕೊಡಿಸಲಿ ಎಂದು ಹೇಳಿದ್ದಾರೆ. ಹಾಗಾದರೆ, ಈ ಕೆಲಸ ಗೌಡರಿಂದ ಮಾತ್ರ ಆಗುವುದು ಎಂದು ಅವರು ಒಪ್ಪಿಕೊಂಡ ಹಾಗಾಯಿತು.
ಹಾಗಾದರೆ ಪಾದಯಾತ್ರೆ ಏತಕ್ಕೆ?. ಆಡಳಿತಾತ್ಮಕ, ಕಾನೂನು ಹಾಗೂ ತಾಂತ್ರಿಕ ಅಂಶಗಳ ಆಧಾರದ ಮೇಲೆ ದೇವೇಗೌಡರಿಗೆ ಯಾವಾಗ ಏನು ಹೆಜ್ಜೆ ಇಡಬೇಕು ಎಂಬುದು ಚೆನ್ನಾಗಿ ಗೊತ್ತಿದೆ. ಅದು ಅನೇಕ ಯೋಜನೆಗಳಲ್ಲಿ ಸಾಬೀತಾಗಿದೆ. ಆ ಬಗ್ಗೆ ಸಿದ್ದರಾಮಯ್ಯ ಅವರು ಹೇಳಬೇಕಾದ ಅಗತ್ಯ ಇಲ್ಲ ಅಂತಾ ಜೆಡಿಎಸ್ ಹೇಳಿದೆ.
ಹೀಗಿದ್ದರೂ ರಾಜ್ಯ ನೀರಾವರಿಗೆ ಹೆಚ್.ಡಿ.ದೇವೇಗೌಡರ ಕೊಡುಗೆ ಉಪೇಕ್ಷಿಸಿ ಸುಳ್ಳುಗಳ ಮೂಲಕ ಜನರಿಗೆ ತಪ್ಪು ಮಾಹಿತಿ ನೀಡುವುದು ರಾಜ್ಯಕ್ಕೆ ಮಾಡುವ ದ್ರೋಹ. ಇನ್ನಾದರೂ ಸುಳ್ಳು ಹೇಳುವುದು ಬಿಟ್ಟರೆ ಒಳಿತು. ಇಲ್ಲವಾದರೆ ಜನರೇ ಸುಳ್ಳಯ್ಶನ ನಾಲಿಗೆಗೆ ಬುದ್ಧಿ ಕಲಿಸಲಿದ್ದಾರೆ.
ಪಾದಯಾತ್ರೆಯಿಂದ ಮೇಕೆದಾಟು ಯೋಜನೆಗೆ ಚಿಕ್ಕಾಸು ಉಪಯೋಗವಿಲ್ಲ. ಆ ಪಾದಯಾತ್ರೆಯ ಪೆಟ್ಟು ಜನರ ಮೇಲೆ ಬೀಳಲಿದೆ. ಅದರ ತೀವ್ರತೆ ಗೊತ್ತಾದ ಮೇಲೆ ಮುಂದೆ ಜನರೇ ಕಾಂಗ್ರೆಸ್ ನಾಯಕರ ಮುಖಕ್ಕೆ ಮಂಗಳಾರತಿ ಮಾಡಲಿದ್ದಾರೆ ಎಂದು ಜೆಡಿಎಸ್ ಟೀಕಿಸಿದೆ.