ETV Bharat / state

ಬಿಎಸ್​ವೈ ಪ್ರಭಾವದಿಂದ ಬಿಜೆಪಿಯನ್ನು ಬಿಡಿಸಲು ವೇದಿಕೆ ಸಜ್ಜಾಗುತ್ತಿದೆಯೇ?: ಜೆಡಿಎಸ್ - ಪೇಶ್ವೆ ಬ್ರಾಹ್ಮಣರು ಶೃಂಗೇರಿ ಮಠದ ಮೇಲೆ ದಾಳಿ

ಕರುನಾಡಿನ ಸುಸಂಸ್ಕೃತ ಶೃಂಗೇರಿ ಮಠಕ್ಕೆ ಭೇಟಿ ನೀಡಿ, ಈಗ ಪಕ್ಷಕ್ಕೆ ಬಿದ್ದಿರುವ ಹೊಡೆತ ಸರಿದೂಗಿಸಲು ಬಿಜೆಪಿ ಹೈಕಮಾಂಡ್ ಯತ್ನಿಸುತ್ತಿರಬೇಕು ಎಂದು ಜೆಡಿಎಸ್​ ಟ್ವೀಟ್ ಮಾಡಿದೆ.​

ಜೆಡಿಎಸ್​ ಟ್ವೀಟ್​
ಜೆಡಿಎಸ್​ ಟ್ವೀಟ್​
author img

By

Published : Feb 20, 2023, 6:47 PM IST

ಬೆಂಗಳೂರು : ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಇಂದು ಸಂಜೆ ಶೃಂಗೇರಿ ಮಠಕ್ಕೆ ಭೇಟಿ ನೀಡಿ ಅಲ್ಲಿಯೇ ವಾಸ್ತವ್ಯ ಹೂಡಲಿದ್ದಾರೆ ಎಂಬ ಅಧಿಕೃತ ಮಾಹಿತಿ ಇದೆ. ಮಹಾರಾಷ್ಟ್ರದ ಪೇಶ್ವೆ ಬ್ರಾಹ್ಮಣರು ಶೃಂಗೇರಿ ಮಠದ ಮೇಲೆ ದಾಳಿ ಮಾಡಿದ್ದರ ಬಗ್ಗೆ ಚರ್ಚೆಯಾಗುತ್ತಿರುವ ಸಂದರ್ಭದಲ್ಲಿ ನಡ್ಡಾ ಅವರ ಭೇಟಿ ಹಲವು ಪ್ರಶ್ನೆಗಳಿಗೆ ದಾರಿ ಮಾಡಿದೆ ಎಂದು ಜೆಡಿಎಸ್ ಹೇಳಿದೆ.

  • ಸತ್ಯದ ತಲೆ‌‌ ಮೇಲೆ ಹೊಡೆದು ಸುಳ್ಳು ಹೇಳುವುದನ್ನೇ ಕರಗತ ಮಾಡಿಕೊಂಡಿರುವ ಬಿಜೆಪಿ ಪಕ್ಷವು ಮಹಾರಾಷ್ಟ್ರದ ಪೇಶ್ವೆಗಳ ಹಿಡಿತದಲ್ಲಿರುವುದು ಗುಟ್ಟಾಗಿ ಉಳಿದಿಲ್ಲ. ಕರುನಾಡಿನ ಸುಸಂಸ್ಕೃತ ಶೃಂಗೇರಿ ಮಠಕ್ಕೆ ಭೇಟಿ ನೀಡಿ, ಈಗ ಪಕ್ಷಕ್ಕೆ ಬಿದ್ದಿರುವ ಹೊಡೆತವನ್ನು ಸರಿದೂಗಿಸಲು @BJP4India ಹೈಕಮಾಂಡ್ ಯತ್ನಿಸುತ್ತಿರಬೇಕು. 3/7

    — Janata Dal Secular (@JanataDal_S) February 20, 2023 " class="align-text-top noRightClick twitterSection" data=" ">

ಪೇಶ್ವೆ ಬ್ರಾಹ್ಮಣರ ವಂಶಸ್ಥರಿಗೆ ಸೇರಿದ ಪ್ರಹ್ಲಾದ್ ಜೋಶಿಯವರನ್ನು ಮುಖ್ಯಮಂತ್ರಿ ಮಾಡುವ ಬಗ್ಗೆ ಬಿಜೆಪಿ ಹೈಕಮಾಂಡ್ ಚಿಂತನೆ ನಡೆಸಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಹೇಳಿದ್ದರಷ್ಟೆ. ಇದರ ನಂತರ ರಾಜ್ಯ ಬಿಜೆಪಿ ತಡಬಡಾಯಿಸಿದ್ದು ಎಲ್ಲರಿಗೂ ಗೊತ್ತಿರುವ ಸಂಗತಿ. ಸತ್ಯದ ತಲೆ ಮೇಲೆ ಹೊಡೆದು ಸುಳ್ಳು ಹೇಳುವುದನ್ನೇ ಕರಗತ ಮಾಡಿಕೊಂಡಿರುವ ಬಿಜೆಪಿಯು ಮಹಾರಾಷ್ಟ್ರದ ಪೇಶ್ವೆಗಳ ಹಿಡಿತದಲ್ಲಿರುವುದು ಗುಟ್ಟಾಗಿ ಉಳಿದಿಲ್ಲ. ಕರುನಾಡಿನ ಸುಸಂಸ್ಕೃತ ಶೃಂಗೇರಿ ಮಠಕ್ಕೆ ಭೇಟಿ ನೀಡಿ, ಈಗ ಪಕ್ಷಕ್ಕೆ ಬಿದ್ದಿರುವ ಹೊಡೆತವನ್ನು ಸರಿದೂಗಿಸಲು ಬಿಜೆಪಿ ಹೈಕಮಾಂಡ್ ಯತ್ನಿಸುತ್ತಿರಬೇಕು ಎಂದು ಟೀಕಿಸಿದೆ.

ಇದನ್ನೂ ಓದಿ : ಕಾಂಗ್ರೆಸ್ ಅತೀ ಭ್ರಷ್ಟ ಸರ್ಕಾರ ನೀಡಿತ್ತು, ತನಿಖೆಯಾಗದ ಎಲ್ಲಾ ಪ್ರಕರಣ ಲೋಕಾಯುಕ್ತಕ್ಕೆ ಶಿಫಾರಸು: ಸಿಎಂ ಘೋಷಣೆ

ಇದರ ಹಿಂದಿನ ಲೆಕ್ಕಾಚಾರಗಳು ಏನೆಲ್ಲ ಇರಬಹುದು? ಪ್ರಹ್ಲಾದ್ ಜೋಶಿಯವರನ್ನೇ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಣೆ ಮಾಡುವುದಕ್ಕೆ ಈ ಭೇಟಿ ಮುನ್ನುಡಿಯೇ? ಯಡಿಯೂರಪ್ಪನವರ ಪ್ರಭಾವದಿಂದ ರಾಜ್ಯ ಬಿಜೆಪಿಯನ್ನು ಬಿಡಿಸಿ, ನಾಡಿನಲ್ಲಿ ದೇಶ ಒಡೆದ ಪೇಶ್ವೆಗಳ ಅಧಿಕಾರ ಸ್ಥಾಪಿಸಲು ವೇದಿಕೆ ಸಜ್ಜಾಗುತ್ತಿದೆಯೇ? ಎಂದು ಅನುಮಾನ ವ್ಯಕ್ತಪಡಿಸಿದೆ.

  • ಇದರ ಹಿಂದಿನ‌ ಲೆಕ್ಕಾಚಾರಗಳು ಏನೆಲ್ಲ ಇರಬಹುದು? ಪ್ರಹ್ಲಾದ್ ಜೋಶಿಯವರನ್ನೆ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಣೆ ಮಾಡುವುದಕ್ಕೆ ಈ ಭೇಟಿ ಮುನ್ನುಡಿಯೆ? ಯಡಿಯೂರಪ್ಪನವರ ಪ್ರಭಾವದಿಂದ ರಾಜ್ಯ @BJP4Karnatakaಯನ್ನು ಬಿಡಿಸಿ,‌ ನಾಡಿನಲ್ಲಿ ದೇಶ ಒಡೆದ ಪೇಶ್ವೆಗಳ ಅಧಿಕಾರ ಸ್ಥಾಪಿಸಲು ವೇದಿಕೆ‌ ಸಜ್ಜಾಗುತ್ತಿದೆಯೆ? 4/7

ಸರ್ವೆ ಜನಾಃ ಸುಖಿನೋ ಭವಂತು ಎನ್ನುವ ನಮ್ಮ ನಾಡಿನ ಸುಸಂಸ್ಕೃತ ಬ್ರಾಹ್ಮಣ ವಂಶಕ್ಕೆ ಸೇರಿದವರ್ಯಾರು ಬಿಜೆಪಿಗೆ ಸಿಗಲಿಲ್ಲವೇ?. ಕುತಂತ್ರದ ರಾಜಕಾರಣ ಮಾಡುತ್ತ, ರಾಷ್ಟ್ರವನ್ನು ಒಡೆದಾಳುವ ಪೇಶ್ವೆ ಬ್ರಾಹ್ಮಣರಿಗೆ ಮಣೆ ಹಾಕುತ್ತಿರುವುದೇಕೆ? ಈ ದುಃಸ್ವಪ್ನ ನಿಜವಾದರೆ ರಾಜ್ಯ ಬಿಜೆಪಿ ಪೂರ್ಣವಾಗಿ ಆರ್​ಎಸ್​ಎಸ್​ ಹಿಡಿತಕ್ಕೆ ಸಿಗಲಿದೆ ಎಂದಿದೆ.

ಇದನ್ನೂ ಓದಿ: ರೂಪಾ ಕೇಳಿರುವ ಪ್ರಶ್ನೆಗಳು ನೈತಿಕವಾಗಿವೆ, ಸಂಬಂಧಿಸಿದವರು ಉತ್ತರಿಸಲಿ: ಪ್ರತಾಪ್ ಸಿಂಹ

ಕುತಂತ್ರ ರಾಜಕಾರಣಕ್ಕೆ ರಾಜ್ಯದ ಜನತೆ ಬಲಿಯಾಗಬಾರದು. ಮುಖವಾಡದ ರಾಜಕೀಯ ಮಾಡುತ್ತಾ, ಅಧಿಕಾರವನ್ನು ಪೇಶ್ವೆಗಳಿಗೆ ಧಾರೆ ಎರೆಯುವ ಈ ಹುನ್ನಾರ ಬಹು ಅಪಾಯಕಾರಿ. ರಾಜ್ಯದಲ್ಲಿ ಕೋಮುಗಳ ಮಧ್ಯೆ ಬೆಂಕಿ ಹಚ್ಚಿ, ಅದರ ಶಾಖದಲ್ಲಿ ಮೈ ಕಾಯಿಸಿಕೊಳ್ಳುವ ಇವರು ಯಾವುದೇ ಕಾರಣಕ್ಕೂ ನಂಬಿಕೆಗೆ ಅರ್ಹರಲ್ಲ.

'ಮನುಷ್ಯ ಜಾತಿ ತಾನೊಂದೇ ವಲಂ' ಎಂದ ಪಂಪನ ನಾಡಿನಲ್ಲಿ ಎಲ್ಲ ಜಾತಿ-ಧರ್ಮದವರು ಕೂಡಿ ಬಾಳುತ್ತಿದ್ದೇವೆ. ಕುವೆಂಪುರವರ 'ವಿಶ್ವಮಾನವ ತತ್ವ' ನಮ್ಮ ನಾಡಿನ ಉಸಿರಾಗಿದೆ. ಈ ಸಾಮರಸ್ಯ, ಸಹಬಾಳ್ವೆಯನ್ನು ಹಾಳುಗೆಡವಲು ಕಾಯುತ್ತಿರುವವರನ್ನು ಚುನಾವಣೆಯಲ್ಲಿ ಸೋಲಿಸಬೇಕಿದೆ. ಇದು ಕನ್ನಡ ನಾಡಿನ ಮಣ್ಣಿಗೆ ಅತ್ಯಗತ್ಯ ಎಂದು ಜೆಡಿಎಸ್ ಟ್ವೀಟ್​ನಲ್ಲಿ ಹೇಳಿದೆ.

ಇದನ್ನೂ ಓದಿ : ಮಿತಿಯಲ್ಲಿ ಇರಬೇಕಿತ್ತು, ಗಲಾಟೆ ವಿಧಾನಸೌಧದವರೆಗೆ ಬಂದಿದೆ ಅಂದ್ರೆ ಸುಮ್ಮನಿರಲ್ಲ: ಸಚಿವ ಮಾಧುಸ್ವಾಮಿ ಎಚ್ಚರಿಕೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.