ETV Bharat / state

ಕಾಂಗ್ರೆಸ್ ಕೈಗೆ ಅಧಿಕಾರ ಕೊಟ್ಟಿದ್ದಾರೆ, ಸರ್ಕಾರ ಆಡಿದ್ದೇ ಆಟವಾಗಿದೆ : ಜೆಡಿಎಸ್‌ ರಾಜ್ಯಾಧ್ಯಕ್ಷ ಸಿ ಎಂ ಇಬ್ರಾಹಿಂ ವಾಗ್ದಾಳಿ - ಜೆಡಿಎಸ್‌ ರಾಜ್ಯಾಧ್ಯಕ್ಷ ಸಿ ಎಂ ಇಬ್ರಾಹಿಂ

ಎಸ್​ಸಿ, ಎಸ್​ಟಿ ಅನುದಾನವನ್ನು ಬೇರೆ ಯಾವುದಕ್ಕೂ ಬಳಸಿಕೊಳ್ಳುವ ಅವಕಾಶ ಇಲ್ಲ. ಕಾಂಗ್ರೆಸ್​ ಸರ್ಕಾರಕ್ಕೆ ತಾವು ಆಡಿದ್ದೇ ಆಟ ಎಂಬಂತಾಗಿದೆ ಎಂದು ಜೆಡಿಎಸ್​ ರಾಜ್ಯಾಧ್ಯಕ್ಷ ಸಿ ಎಂ ಇಬ್ರಾಹಿಂ ಹೇಳಿದ್ದಾರೆ.

jds-state-president-cm-ibrahim-slams-congress-govt
ಕಾಂಗ್ರೆಸ್ ಕೈಗೆ ಅಧಿಕಾರ ಕೊಟ್ಟಿದ್ದಾರೆ, ಸರ್ಕಾರ ಹಾಡಿದ್ದೆ ಆಟ ಆಗಿದೆ : ಜೆಡಿಎಸ್‌ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ ವಾಗ್ದಾಳಿ
author img

By

Published : Aug 2, 2023, 3:31 PM IST

ಬೆಂಗಳೂರು : ಎಸ್​ಸಿ, ಎಸ್​ಟಿ ಅನುದಾನವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಸುವ ಬಗ್ಗೆ ಆ ಸಮಾಜದ ಜನ ಮತ್ತು ನಾಯಕರು ವಿಚಾರ ಮಾಡಬೇಕು. ಕಾಂಗ್ರೆಸ್ ಕೈಗೆ ಅಧಿಕಾರ ಕೊಟ್ಟಿದ್ದಾರೆ. ಸರ್ಕಾರ ಆಡಿದ್ದೇ ಆಟ ಎಂಬಂತಾಗಿದೆ ಎಂದು ಜೆಡಿಎಸ್‌ ರಾಜ್ಯಾಧ್ಯಕ್ಷ ಸಿ ಎಂ ಇಬ್ರಾಹಿಂ ಕಿಡಿಕಾರಿದ್ದಾರೆ.

ಇಂದು ತಮ್ಮ ನಿವಾಸದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನಾವು ಹೇಳಲು ಹೋದ್ರೆ ಅಧಿಕಾರ ಸಿಕ್ಕಿಲ್ಲ ಎಂದು ಈ ವಿಷಯ ಮಾತನಾಡುತ್ತಾರೆ ಎಂದು ಹೇಳುತ್ತಾರೆ. ಆದರೂ ವಿರೋಧ ಪಕ್ಷವಾಗಿ ನಾವು ನಮ್ಮ ಕೆಲಸ ಮಾಡುತ್ತೇವೆ. ಗ್ಯಾರಂಟಿ ಯೋಜನೆಗಳಿಗೆ ಯಾವ ರೀತಿ ಎಸ್ ಸಿ, ಎಸ್ ಟಿ ಹಣ 11 ಸಾವಿರ ಕೋಟಿ ರೂ. ಬಳಸಿಕೊಳ್ಳುತ್ತೀರಾ, ಕಾನೂನು ಏನಾದ್ರೂ ಬದಲಾವಣೆ ಮಾಡುತ್ತಿರಾ? ಎಂದು ಪ್ರಶ್ನಿಸಿದರು. ಈ ಹಣ ಬೇರೆ ಯಾವುದಕ್ಕೂ ಬಳಸಿಕೊಳ್ಳುವ ಅವಕಾಶ ಇಲ್ಲ ಎಂದು ಇದೇ ವೇಳೆ ಹೇಳಿದರು.

ಹಳ್ಳಿಗಳಲ್ಲಿ ಕಳಪೆ ಅಕ್ಕಿ ಕೊಡುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. 5 ಗ್ಯಾರಂಟಿ ಯೋಜನೆಗಳು ಜನರಿಗೆ ತಲುಪುತ್ತಿದೆಯಾ ಎಂದು ತಿಳಿಯಲು ಕಮಿಟಿ ರಚನೆ ಮಾಡಿ. ಈ ಬಾರಿ ಅಭಿವೃದ್ಧಿ ಕೆಲಸ ಇಲ್ಲ ಎಂದು ನೀವೇ ಹೇಳುತ್ತಿದ್ದಿರಾ, ಮತ್ತೆ ಯಾವ ರೀತಿ ರಸ್ತೆ ಸೇರಿ ಅಭಿವೃದ್ಧಿ ಕೆಲಸ ಮಾಡುತ್ತಿರಾ ಎಂದು ಇಬ್ರಾಹಿಂ ಪ್ರಶ್ನಿಸಿದರು. ನೀವು 5 ವರ್ಷ ಅಧಿಕಾರದಲ್ಲಿ ಇರಲಿದ್ದೀರಾ. ಹಾಗಾಗಿ ಸರ್ವ ಪಕ್ಷದ ಸಭೆ ಕರೆಯಿರಿ ಎಂದು ಒತ್ತಾಯಿಸಿದರು.

ಫ್ರೀ ಗ್ಯಾರಂಟಿ ಯೋಜನೆ ತೆಗೆಯಿರಿ. ರಾಜ್ಯದ ಅಭಿವೃದ್ಧಿ ಬಗ್ಗೆ ಕೆಲಸ ಮಾಡಿ. ಸಿದ್ದರಾಮಯ್ಯ ಸಕ್ಸಸ್ ಆಗಬೇಕು ಎಂಬುದು ನಮಗೂ ಇದೆ ಎಂದು ಹೇಳಿದರು. ದೆಹಲಿಯಲ್ಲಿ ಕಾಂಗ್ರೆಸ್ ನಾಯಕರ ಸಭೆ ಮತ್ತು ಗ್ಯಾರಂಟಿ ಮೂಲಕ ಲೋಕಸಭೆ ಚುನಾವಣೆಗೆ ಹೋಗುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ನವರು ಯಾವ ಹೆಸರಿನಲ್ಲಿ ಹೋಗ್ತಾರೆ ಎಂಬ ಚಿಂತೆ ಇಲ್ಲ ಎಂದರು.

ಬಳ್ಳಾರಿ, ಕೊಪ್ಪಳ ಸೇರಿ ಐದು ಜಿಲ್ಲೆಗಳ ಮುಖಂಡರ ಸಭೆ ಮಾಡುತ್ತೇನೆ. ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ವಿದೇಶ ಪ್ರವಾಸದಿಂದ ವಾಪಸ್ ಬಂದ ನಂತರ ಹೆಚ್ ಡಿ ದೇವೇಗೌಡರ ಅನುಮತಿ ಪಡೆದು, ಆ ವಿಭಾಗಕ್ಕೆ ತಾತ್ಕಾಲಿಕ ಕಾರ್ಯಾಧ್ಯಕ್ಷರ ನೇಮಕ ಮಾಡುತ್ತೇವೆ. ಜನರ ಮನ್ನಣೆ ಗಳಿಸುವ ಕೆಲಸ ಮಾಡುತ್ತೇವೆ. ಯಾರ ಜೊತೆ ಹೊಂದಾಣಿಕೆ ಇಲ್ಲದೇ ಲೋಕಸಭೆ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧೆ ಮಾಡುತ್ತೇವೆ. ರಾಜ್ಯ ಮಟ್ಟದಲ್ಲಿ ಒಂದು ಕಮಿಟಿ ಮಾಡುತ್ತೇವೆ. ವಿಭಾಗವಾರು ಕಮಿಟಿ ಮಾಡಿ ಸಭೆ ನಡೆಸುತ್ತೇವೆ ಎಂದು ತಿಳಿಸಿದರು.

ಜೆಡಿಎಸ್ ಪಕ್ಷ ಸಂಘಟನೆ ಮಾಡುತ್ತೇವೆ. ನಾನು ಹೈದರಾಬಾದ್ ಕರ್ನಾಟಕ ಕಡೆ ಹೆಚ್ಚು ಗಮನ ಕೊಡುತ್ತಿದ್ದೇನೆ. ಅಲ್ಲಿ ಒಳ್ಳೆಯ ವೋಟ್ ಪರ್ಸೆಂಟೇಜ್ ಬಂದಿದೆ.‌ ಬಹಳ ಮುಖ್ಯವಾಗಿ ಮುಸ್ಲಿಂ ಸಮುದಾಯದ ಜತೆ ಸಭೆ ಮಾಡಿದ್ದೇನೆ. ಕಾಂಗ್ರೆಸ್ ನವರು ಹೆಚ್ಚು ಮುಸ್ಲಿಂ ಸಮುದಾಯದ ವೋಟ್ ಪಡೆದ್ರು. ಬಜೆಟ್ ನಲ್ಲಿ 10 ಸಾವಿರ ಕೋಟಿ ಅನುದಾನ ಕೊಡುತ್ತೇವೆ ಅಂದಿದ್ದರು. ಅನುದಾನ ಎಲ್ಲಿ ಹೋಯ್ತು ಎಂದು ಕಾಂಗ್ರೆಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.

ಡಿಜೆ ಹಳ್ಳಿ, ಕೆಜಿ ಹಳ್ಳಿ ಪ್ರಕರಣದ ಮರು ತನಿಖೆ ಮಾಡುವ ಕಾರ್ಯ ಏನಾಯ್ತು, ಅಲ್ಲಿ ನಡೆದಿದ್ದು ಡ್ರಗ್ಸ್ ಮಾಫಿಯಾ ಗಲಾಟೆ. ಗೃಹ ಸಚಿವರೇ ನ್ಯಾಯಾಂಗ ತನಿಖೆಗೆ ಕೊಡಿ ಹೆದರಬೇಡಿ. ಬಿಜೆಪಿಯವರು ಅಲ್ಪಸಂಖ್ಯಾತರ ಓಲೈಕೆ ಮಾಡುತ್ತಿದ್ದಾರೆ ಎನ್ನುತ್ತಾರೆ. ಯಾಕಪ್ಪ ಹಾಗೆ ಹೇಳುತ್ತಿರಾ.. ನಮಗೆ ಏನು ಕೊಟ್ಟಿದ್ದಾರೆ. ಕೇವಲ ಮಾತಿನಲ್ಲಿ ಹೇಳಿದ್ದಾರೆ ಅಷ್ಟೇ ಎಂದು ವಾಗ್ದಾಳಿ ನಡೆಸಿದರು.

ಇದನ್ನೂ ಓದಿ : ಸಾರ್ವಜನಿಕರಿಗೆ ಸಮಸ್ಯೆ ಪರಿಹಾರದ ಜೊತೆ ಜ್ಞಾನ ದಾಸೋಹ: ಬೆಳಗಾವಿ ಡಿಸಿ ಕಾರ್ಯಕ್ಕೆ ಜನ ಮೆಚ್ಚುಗೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.