ETV Bharat / state

ಎರಡು ದಶಕಗಳ ಚುನಾವಣಾ ಇತಿಹಾಸದಲ್ಲೇ ಜೆಡಿಎಸ್​ ಅತ್ಯಂತ ಕಳಪೆ ಸಾಧನೆ!

2004ರಿಂದ ಇದುವರೆಗಿನ ಎರಡು ದಶಕಗಳ ಕರ್ನಾಟಕ ರಾಜ್ಯ ಚುನಾವಣಾ ಇತಿಹಾಸದಲ್ಲಿಯೇ ಜೆಡಿಎಸ್​ ಅತಿ ಕಡಿಮೆ ಸ್ಥಾನಗಳನ್ನು ಪಡೆದಿದೆ.

jds performance in karnataka assembly election 2023
ಜೆಡಿಎಸ್​ಗೆ ಅತಿ ಕಡಿಮೆ ಸ್ಥಾನ
author img

By

Published : May 13, 2023, 5:16 PM IST

Updated : May 14, 2023, 10:02 AM IST

ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ 'ಕಿಂಗ್​ ಮೇಕರ್' ನಿರೀಕ್ಷೆಯಲ್ಲಿದ್ದ ಜೆಡಿಎಸ್ ಬಯಕೆಗೆ ರಾಜ್ಯದ ಮತದಾರ ಪ್ರಭುಗಳು ತಣ್ಣೀರೆರೆಚಿದ್ದಾರೆ. ಈ ಬಾರಿ ಕೂಡ ಅತಂತ್ರ ಫಲಿತಾಂಶ ಬರುತ್ತದೆ ಎಂದು ಕೆಲವು ಚುನಾವಣೋತ್ತರ ಸಮೀಕ್ಷೆಗಳು ಭವಿಷ್ಯ ನುಡಿದಿದ್ದವು. ಅಂತೆಯೇ, ಕಾಂಗ್ರೆಸ್​ ಅಥವಾ ಬಿಜೆಪಿ ಯಾವುದೇ ಪಕ್ಷ ಅಧಿಕಾರಕ್ಕೆ ಬರಬೇಕಾದರೆ ಜೆಡಿಎಸ್​ ಬೆಂಬಲ ಅನಿವಾರ್ಯವಾಗುತ್ತದೆ ಎಂದೇ ಹೇಳಲಾಗುತ್ತಿತ್ತು. ಆದರೆ, ಕಾಂಗ್ರೆಸ್​ಗೆ ಸ್ಪಷ್ಟ ಬಹುಮತವನ್ನು ಜನತೆ ನೀಡಿದ್ದಾರೆ. ಇದೇ ವೇಳೆ ಜೆಡಿಎಸ್​ಗೆ ಕಳೆದ ಬಾರಿಗಿಂತ ಕಡಿಮೆ ಸ್ಥಾನಗಳನ್ನು ನೀಡುವ ಮೂಲಕ ಆಘಾತ​ ನೀಡಿದ್ದಾರೆ.

224 ವಿಧಾನಸಭಾ ಕ್ಷೇತ್ರಗಳ ಪೈಕಿ ಒಟ್ಟು 217 ಕ್ಷೇತ್ರಗಳಲ್ಲಿ ಜೆಡಿಎಸ್​ ತನ್ನ ಅಧಿಕೃತ ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು. ಆರು ಕ್ಷೇತ್ರಗಳಲ್ಲಿ ಸಿಪಿಐ ಮತ್ತು ಆರ್​ಪಿಐ ಅಭ್ಯರ್ಥಿಗಳಿಗೆ ಬಾಹ್ಯ ಬೆಂಬಲ ಘೋಷಿಸಿತ್ತು. ಇತ್ತೀಚೆಗೆ ನಿಧನರಾದ ಕಾಂಗ್ರೆಸ್​ ಕಾರ್ಯಾಧ್ಯಕ್ಷ ಧ್ರುವನಾರಾಯಣ ಪುತ್ರ ದರ್ಶನ ಧ್ರುವನಾರಾಯಣ ಅವರಿಗೆ ಪಕ್ಷ ಬೆಂಬಲ ಪ್ರಕಟಿಸಿತ್ತು. ಆದರೆ, ತಾನು ಸ್ಪರ್ಧಿಸಿದ್ದ 217 ಕ್ಷೇತ್ರಗಳಲ್ಲಿ 19 ಕಡೆ ಮಾತ್ರ ಗೆಲುವು ಸಾಧಿಸುವಲ್ಲಿ ತೆನೆ ಪಕ್ಷ ಶಕ್ತವಾಗಿದೆ. ಕಳೆದ ಬಾರಿ 37 ಕ್ಷೇತ್ರಗಳಲ್ಲಿ ಜೆಡಿಎಸ್​ ಗೆದ್ದು ತನ್ನ ಬಲ ಪ್ರದರ್ಶಿಸಿತ್ತು. ಆದರೆ, 18 ಕ್ಷೇತ್ರಗಳನ್ನು ಕಳೆದುಕೊಂಡು ದಳ ಹೀನಾಯ ಸ್ಥಿತಿಗೆ ಸಿಲುಕಿದೆ.

jds performance in 2023 karnataka assembly election
ಸೋಲು-ಗೆಲುವಿನ ಮಾಹಿತಿ

ಇತ್ತೀಚಿನ ವರ್ಷಗಳಲ್ಲಿ ಜೆಡಿಎಸ್​ ಅನುಭವಿಸಿದ ದೊಡ್ಡ ಹಿನ್ನಡೆಯೂ ಇದೇ ಆಗಿದೆ. 2004ರ ಚುನಾವಣೆಯಲ್ಲಿ ಜೆಡಿಎಸ್​ 58 ಕ್ಷೇತ್ರಗಳಲ್ಲಿ ಗೆಲುವು ಕಂಡಿತ್ತು. 2008ರಲ್ಲಿ 28, 2013ರಲ್ಲಿ 40 ಹಾಗೂ 2018ರಲ್ಲಿ 37 ಸ್ಥಾನಗಳನ್ನು ಪಡೆದಿತ್ತು. ಈ ಬಾರಿ ಚುನಾವಣೆ ಸಂದರ್ಭದಲ್ಲಿ ಮಾಜಿ ಸಿಎಂ ಹೆಚ್​ಡಿ ಕುಮಾರಸ್ವಾಮಿ ಪಕ್ಷವನ್ನು ಅಧಿಕಾರಕ್ಕೆ ತರಬೇಕೆಂದು ವ್ಯಾಪಕ ಪ್ರಚಾರವನ್ನು ಮಾಡಿದ್ದರು. ರೈತರು ಮತ್ತು ನೀರಾವರಿಯನ್ನು ಗುರಿಯಾಗಿ ಇರಿಸಿಕೊಂಡು ಪಂಚರತ್ನ ಯಾತ್ರೆಯನ್ನೂ ಕೈಗೊಂಡಿದ್ದರು. ಆದರೆ, ಮತದಾರರು ಕೈ ಹಿಡಿದಿಲ್ಲ.

ಇದನ್ನೂ ಓದಿ: ಕರ್ನಾಟಕದಲ್ಲಿ ಕಾಂಗ್ರೆಸ್​ ಗೆಲುವಿಗೆ ಈ ಅಂಶಗಳು ಕಾರಣವೇ?

Last Updated : May 14, 2023, 10:02 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.