ಬೆಂಗಳೂರು: ಜೆಡಿಎಸ್ ಶಾಸಕರ ರೆಸಾರ್ಟ್ ವಾಸ್ತವ್ಯ ನಾಲ್ಕನೇ ದಿನಕ್ಕೆ ತಲುಪಿದ್ದು, ಇಂದು ನಡೆಯುವ ವಿಧಾನಮಂಡಲ ಅಧಿವೇಶನಕ್ಕೆ ರೆಸಾರ್ಟ್ನಿಂದಲೇ ಜೆಡಿಎಸ್ ಶಾಸಕರು ಭಾಗಿಯಾಗಲಿದ್ದಾರೆ.
ಹೀಗಾಗಿ ದೇವನಹಳ್ಳಿಯ ಪ್ರೆಸ್ಟೀಜ್ ಗಾಲ್ಫ್ ಶೈರ್ ರೆಸಾರ್ಟ್ ಬಳಿ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದ್ದು, ಪೊಲೀಸ್ ಸಿಬ್ಬಂದಿ ಹಾಗೂ ಖಾಸಗಿ ಸೆಕ್ಯೂರಿಟಿ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ.
ರೆಸಾರ್ಟ್ಗೆ ಖಾಸಗಿ ಬಸ್ ಆಗಮಿಸಿದ್ದು, 9 ಗಂಟೆ ನಂತರ ಈ ಬಸ್ನಲ್ಲಿ ಜೆಡಿಎಸ್ ಶಾಸಕರು ಒಟ್ಟಾಗಿ ಅಧಿವೇಶನಕ್ಕೆ ತೆರಳುತ್ತಾರೆ. ಸಚಿವ ಬಂಡೆಪ್ಪ ಕಾಶಂಪುರ್ ನೇತೃತ್ವದಲ್ಲಿ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.