ETV Bharat / state

ಚರ್ಚೆಗೆ ಸಿಗದ ಅವಕಾಶ: ಸದನದ ಬಾವಿಗಿಳಿದು ಜೆಡಿಎಸ್ ಶಾಸಕರ ಪ್ರತಿಭಟನೆ - ಶಾಸಕ ಶಿವಲಿಂಗೇಗೌಡ ಧರಣಿ

ವಿಧಾನಸಭೆಯಲ್ಲಿ ಕಲಾಪದ ವೇಳೆ ಮಾತನಾಡಲು ಅವಕಾಶ ನೀಡದ ಹಿನ್ನೆಲೆ ಜೆಡಿಎಸ್​ ಶಾಸಕರು ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದ್ದಾರೆ.

Assembly
ವಿಧಾನಸಭೆ
author img

By

Published : Sep 25, 2020, 7:53 PM IST

ಬೆಂಗಳೂರು: ಕಲಾಪದಲ್ಲಿ ಮಾತನಾಡಲು ಅವಕಾಶ ಕೊಡದ ಹಿನ್ನೆಲೆಯಲ್ಲಿ ಜೆಡಿಎಸ್ ಶಾಸಕರು ಸದನದ ಬಾವಿಗಿಳಿದು ಧರಣಿ ನಡೆಸಿದ ಘಟನೆ ವಿಧಾನಸಭೆಯಲ್ಲಿ ಇಂದು ನಡೆಯಿತು.

ಕರ್ನಾಟಕ ಆರ್ಥಿಕ ಹೊಣೆಗಾರಿಕೆ (ತಿದ್ದುಪಡಿ) ವಿಧೇಯಕದ ಕುರಿತು ಚರ್ಚೆ ನಡೆಯುತ್ತಿದ್ದ ವೇಳೆ ತಮಗೂ ಚರ್ಚೆಗೆ ಅವಕಾಶ ನೀಡಬೇಕೆಂದು ಶಾಸಕ ಅನ್ನದಾನಿ, ಶಿವಲಿಂಗೇಗೌಡ ಸೇರಿದಂತೆ ಜೆಡಿಎಸ್​ನ ಶಾಸಕರು ಧರಣಿ ನಡೆಸಿ ತಮಗೂ ಅವಕಾಶ ಕೊಡುವಂತೆ ಒತ್ತಾಯಿಸಿದರು.

ವಿಧಾನಸಭೆ ಕಲಾಪ

ಜೆಡಿಎಸ್​ನವರಿಗೆ ಹಣಕಾಸು ಪರಿಸ್ಥಿತಿ ಬಗ್ಗೆ ಗೊತ್ತಿಲ್ಲವೆಂದು ಹೀಗೆ ಮಾಡುತ್ತಿದ್ದೀರಾ, ನಮಗೂ ಆರ್ಥಿಕ ಸ್ಥಿತಿ ಗತಿಗಳ ಬಗ್ಗೆ ಗೊತ್ತಿದೆ. ಚರ್ಚೆಗೆ ಅವಕಾಶ ಕೊಡಿ ಎಂದು ಶಾಸಕ ಶಿವಲಿಂಗೇಗೌಡ ಪಟ್ಟುಹಿಡಿದರು. ಬಳಿಕ ಶಾಸಕರನ್ನು ಸಮಾಧಾನಪಡಿಸಿದ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು, ತಮಗೂ ಮಾತನಾಡಲು ಅವಕಾಶ ಕೊಡುವುದಾಗಿ ಹೇಳಿದ ನಂತರ ಧರಣಿ ಬಿಟ್ಟು ತಮ್ಮ ಸ್ಥಾನಗಳಿಗೆ ತೆರಳಿದರು.

ನಂತರ ಶಿವಲಿಂಗೇಗೌಡ ತಮ್ಮ ಮಾತು ಮುಂದುವರೆಸಿ, ಈ ವಿಧೇಯಕದ ಬಗ್ಗೆ ಹೆಚ್ಚು ಮಾತನಾಡಬೇಕೆಂದು ರಾತ್ರಿ ಮನೆಯಲ್ಲಿ ಕುಳಿತು ಹೋಂ ವರ್ಕ್ ಮಾಡಿಕೊಂಡು ಬಂದಿದ್ದೆ. ಆದರೆ, ಸಮಯ ಇಲ್ಲವೆಂದು ಹೇಳುತ್ತಿದ್ದಿರಿ. ಐದು ನಿಮಿಷದಲ್ಲಿ ಮುಗಿಸುತ್ತೇನೆ ಎಂದು ಹೇಳಿದರು. ಕೇಂದ್ರ ಸರ್ಕಾರದ ಉದಾರ ನೀತಿ ಇಲ್ಲ. ರಾಜ್ಯ ಸಂಕಷ್ಟಕ್ಕೆ ಸಿಲುಕಿರುವುದರಿಂದ ಹೆಚ್ಚು ನೆರವು ಕೊಡಬೇಕೆಂದು ರಾಜ್ಯ ಸರ್ಕಾರ ಒತ್ತಡ ಹಾಕಬೇಕು. ಬದ್ಧತಾ ವೆಚ್ಚದಲ್ಲಿ ಸರ್ಕಾರ ಬದ್ಧವಾಗಿರಬೇಕು ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.