ಬೆಂಗಳೂರು: ಕಳೆದ ಒಂದು ವಾರದಿಂದ ದೇವನಹಳ್ಳಿ ಪ್ರೆಸ್ಟಿಜ್ ಗಾಲ್ಫ್ ಶೈರ್ ರೆಸಾರ್ಟ್ನಲ್ಲಿರುವ ಜೆಡಿಎಸ್ ಶಾಸಕರು ಇಂದು ರಿಲ್ಯಾಕ್ಸ್ ಮೂಡ್ನಲ್ಲಿದ್ದಾರೆ.
ಇಂದು ಭಾನುವಾರವಾಗಿರುವುದರಿಂದ ನಂದಿ ಬೆಟ್ಟಕ್ಕೆ ಹೋಗಿ ವಿಶ್ರಮಿಸುವ ಸಾಧ್ಯತೆ ಇದೆ. ಅಲ್ಲದೆ ನಿನ್ನೆ ರಾತ್ರಿ ಸಿಎಂ ಕುಮಾರಸ್ವಾಮಿ ರೆಸಾರ್ಟ್ಗೆ ಆಗಮಿಸಿದ್ದು, ಎರಡು ಗಂಟೆಗಳ ಕಾಲ ಸುದೀರ್ಘ ಚರ್ಚೆ ನಡೆಸಿ ಭಯ ಬೀಳದಿರಿ. ಎಲ್ಲಾ ಸರಿ ಹೋಗುತ್ತದೆ ಎಂದು ಭರವಸೆ ನೀಡಿದ್ದಾರೆ ಎನ್ನಲಾಗಿದೆ.
ಇನ್ನು ನಾಳೆ ನಡೆಯಲಿರುವ ಅಧಿವೇಶನಕ್ಕೆ ತೆರಳಲು ಶಾಸಕರು ಸಿದ್ಧತೆ ನಡೆಸಿದ್ದು, ಅಧಿವೇಶನದ ಬಳಿಕ ತಮ್ಮ ತಮ್ಮ ಕ್ಷೇತ್ರಗಳಿಗೆ ಪ್ರಯಾಣ ಬೆಳೆಸುವ ಸಾಧ್ಯತೆ ಇದೆ. ಇಂದು ಕೊನೆ ದಿನ ರೆಸಾರ್ಟ್ನಲ್ಲಿ ಇರಲಿದ್ದಾರೆ. ಹಾಗಾಗಿ ರೆಸಾರ್ಟ್ಗೆ ಹತ್ತಿರವಿರುವ ನಂದಿ ಬೆಟ್ಟಕ್ಕೆ ಹೋಗಿ ಬರುವ ಸಾಧ್ಯತೆ ಇದೆ.
ಕಳೆದ ಆರು ದಿನಗಳಿಂದ ರೆಸಾರ್ಟ್ನಲ್ಲಿ ವಾಸ್ತವ್ಯ ಹೂಡಿರುವ ಶಾಸಕರಿಗೆ ಒಂದೇ ಕಡೆ ಇದ್ದು ಬೇಸರವೆನಿಸಿದ್ದು ಹೊರಗಡೆ ಹೋಗುವ ಪ್ಲಾನ್ ಹಾಕಿದ್ದಾರೆ ಎನ್ನಲಾಗಿದೆ.