ETV Bharat / state

ಕರಾವಳಿ ಮಾಲಿನ್ಯ ಸಮಸ್ಯೆ ತಡೆಗೆ ಸದನ ಸಮಿತಿ ರಚಿಸಲು ಜೆಡಿಎಸ್ ಒತ್ತಾಯ: ಸದನದ ಬಾವಿಗಿಳಿದು ಧರಣಿ - ಬಾವಿಗಿಳಿದು ಧರಣಿ ಪ್ರತಿಭಟಿಸಿದ ಜೆಡಿಎಸ್​ ಸದಸ್ಯರು

ವಿಧಾನ ಪರಿಷತ್​​ನಲ್ಲಿಂದು ಕರಾವಳಿ ಮಾಲಿನ್ಯ ಸಮಸ್ಯೆ ನಿವಾರಣೆ ಕುರಿತಂತೆ ಚರ್ಚೆ ನಡೆಯಿತು. ಈ ವೇಳೆ ಸಚಿವರಿಂದ ಸಮರ್ಪಕ ಉತ್ತರ ಸಿಗದ ಕಾರಣ ಜೆಡಿಎಸ್​​ ಸದಸ್ಯರು ಬಾವಿಗಿಳಿದು ಪ್ರತಿಭಟನೆ ನಡೆಸಿದರು.

JDS members protest in vidhan parishad
ವಿಧಾನ ಪರಿಷತ್​​ನಲ್ಲಿ ಜೆಡಿಎಸ್​ ಸಮಸ್ಯರ ಧರಣಿ
author img

By

Published : Sep 16, 2021, 9:17 PM IST

ಬೆಂಗಳೂರು: ಕರಾವಳಿ ಭಾಗದಲ್ಲಿ ಬದಲಾಗುತ್ತಿರುವ ಜನಜೀವನ, ಅಸಮರ್ಪಕ ಮೂಲಭೂತ ಸೌಕರ್ಯ ಪೂರೈಕೆಯಿಂದ ಆಗುತ್ತಿರುವ ಸಮಸ್ಯೆಯ ಕುರಿತು ವಿಧಾನ ಪರಿಷತ್​​ನಲ್ಲಿ ಸುದೀರ್ಘ ಚರ್ಚೆ ನಡೆಯಿತು.

ನಿಯಮ 330ರ ಅಡಿ ವಿಚಾರ ಪ್ರಸ್ತಾಪಿಸಿದ ಜೆಡಿಎಸ್ ಸದಸ್ಯ ಬಿ.ಎಂ.ಫಾರೂಕ್, ಕರಾವಳಿ ಭಾಗದ ಮಂಗಳೂರಿನ ಉಳ್ಳಾಲ ಮತ್ತು ಸುರತ್ಕಲ್ ಪ್ರದೇಶದಲ್ಲಿ ಅವೈಜ್ಞಾನಿಕ ಹಾಗೂ ಅಸಮರ್ಪಕ ಒಳಚರಂಡಿ ಕ್ರಿಯಾ ಯೋಜನೆಯಿಂದ ಸಮಸ್ಯೆ ಎದುರಾಗಿದೆ. ಜನರು ಇದರಿಂದ ಸಂಕಷ್ಟಕ್ಕೆ ತುತ್ತಾಗುತ್ತಿದ್ದಾರೆ. ಅಗ್ನಿಶಾಮಕ ವ್ಯವಸ್ಥೆ ಸೇರಿದಂತೆ ಹಲವು ಸಮಸ್ಯೆ ಎದುರಾಗಿದೆ. ಇದನ್ನು ಪರಿಹರಿಸದಿದ್ದರೆ ಈ ಭಾಗ ತನ್ನ ವೈಭವ ಕಳೆದುಕೊಳ್ಳಲಿದೆ. ಈ ಕೂಡಲೇ ಸದನ ಸಮಿತಿ ರಚನೆ ಮಾಡಬೇಕು. ಸರ್ಕಾರ ಇದಕ್ಕೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ಮಂಗಳೂರು ಭಾಗದ ಜನರ ಸಮಸ್ಯೆಗೆ ಸರ್ಕಾರ ಕಿವುಡಾಗಬಾರದು- ಎಸ್.ಎಲ್.ಭೋಜೇಗೌಡ

ದಾಸನಾಗು ವಿಶೇಷನಾಗು ಪದವನ್ನು ಹಾಡುವ ಮೂಲಕ ಮಾತು ಆರಂಭಿಸಿದ ಜೆಡಿಎಸ್ ಸದಸ್ಯ ಎಸ್.ಎಲ್.ಭೋಜೇಗೌಡ, ಮಂಗಳೂರು ಭಾಗದ ಜನರ ಸಮಸ್ಯೆಗೆ ಸರ್ಕಾರ ಕಿವುಡಾಗಬಾರದು. ಅಭಿವೃದ್ಧಿ ವಿಚಾರದಲ್ಲಿ ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ್ ಗಂಭೀರ ಚಿಂತನೆ‌ ನಡೆಸಬೇಕು. ಕಲುಷಿತ ವಾತಾವರಣ ಹೆಚ್ಚಾದರೆ ಜಲಚರ, ಪಕ್ಷಿ ಸಂತತಿ ನಾಶವಾಗಲಿದೆ. ಸಚಿವರು ಸ್ಥಳ ಪರಿಶೀಲನೆ ಮಾಡಿ ಎಂದು ಸಚಿವರಿಗೆ ಸಲಹೆ ನೀಡಿದರು.

ವೈಜ್ಞಾನಿಕ ತಳಹದಿ ಇಲ್ಲದೆ ಮಾಡಿದ ಕಾಮಗಾರಿಯಿಂದಾಗಿ ಎಲ್ಲಾ ಅಧ್ವಾನ- ಶ್ರೀಕಂಠೇಗೌಡ

ಬಳಿಕ ಜೆಡಿಎಸ್ ಸದಸ್ಯ ಶ್ರೀಕಂಠೇಗೌಡ ಮಾತನಾಡಿ, ಕರಾವಳಿ ನಿಜಕ್ಕೂ ಆತಂಕದಲ್ಲಿದೆ. 6 ಸಾವಿರ ಕೋಟಿ ರೂ. ಮೊತ್ತದಲ್ಲಿ ಕರಾವಳಿ ಆರ್ಥಿಕ ವಲಯ ಸ್ಥಾಪನೆಯಾದವು. ವಿವಿಧ ಕಾರ್ಖಾನೆ ಬಂದು ಇಲ್ಲಿನ ವಾತಾವರಣ ನಾಶವಾಗಿದೆ. ಉಳ್ಳಾಲ ಹಾಗೂ ಸುರತ್ಕಲ್ ಮಂಗಳೂರಿಗೆ ಪರ್ಯಾಯ ತಾಣವಾಗಿದೆ. ಯುಜಿಡಿ ಕಾಮಗಾರಿಯಿಂದಾಗಿ ಸುರತ್ಕಲ್ ಸುಸ್ಥಿತಿಗೆ ತಲುಪಿದೆ. ಇಲ್ಲಿ ವಾಸಿಸಲು ಜನರಿಗೆ ಸಾಧ್ಯವಾಗಿಲ್ಲ. ವೈಜ್ಞಾನಿಕ ತಳಹದಿ ಇಲ್ಲದೆ ಮಾಡಿದ ಕಾಮಗಾರಿಯಿಂದಾಗಿ ಎಲ್ಲಾ ಅಧ್ವಾನವಾಗಿದೆ. ಶುದ್ಧ ನೀರು, ಗಾಳಿ ಸಿಗದಂತಾಗಿದೆ. ಜನ ಇಲ್ಲದ ಕಡೆ ಮಾಡಬೇಕಾದ ಸ್ಥಳದಲ್ಲಿ ಯುಜಿಡಿ ಪೈಪ್ ಕೊಂಡೊಯ್ದ ಹಿನ್ನೆಲೆ ಜನ ರೋಗ ಬಂದು ಸಾಯುತ್ತಿದ್ದಾರೆ ಎಂದರು.

ಕೋವಿಡ್ ಸಾವು ಹೆಚ್ಚು ಸಂಭವಿಸಿದೆ ಎಂದು ಶ್ರೀಕಂಠೇಗೌಡ ಹೇಳಿದಾಗ ಅದನ್ನು ಸಭಾನಾಯಕ ಕೋಟ ಶ್ರೀನಿವಾಸ ಪೂಜಾರಿ ವಿರೋಧಿಸಿದರು. ಇಲ್ಲಿಗೆ 15 ಜಿಲ್ಲೆಯಿಂದ ರೋಗಿಗಳು ಬಂದಿದ್ದಾರೆ. ಹೆಚ್ಚು ಆಸ್ಪತ್ರೆ, ಮೆಡಿಕಲ್ ಕಾಲೇಜುಗಳಿವೆ. ಇಲ್ಲಿ ಆಕ್ಸಿಜನ್, ಬೆಡ್ ಕೊರತೆಯಿಂದ ಒಂದು ಸಾವು ಆಗಿಲ್ಲ. ರೋಗಿಯನ್ನು ವಾಪಸ್ ಕಳಿಸಿಲ್ಲ. ಅನಗತ್ಯ ಆರೋಪ ಬೇಡ ಎಂದರು.

ಮಾತು ಮುಂದುವರಿಸಿದ ಶ್ರೀಕಂಠೇಗೌಡರು, ಯುಜಿಡಿ ಪೈಪ್​ಲೈನ್​ ಜನರ ಜೀವಕ್ಕೆ ಮಾರಕ. ಕೂಡಲೇ ಉಳ್ಳಾಲದಲ್ಲಿ ಯುಜಿಡಿ ಬೇಡ. ಇಲ್ಲಿ ರಾಜಕೀಯ ಬೇಡ. ಕರಾವಳಿ ಉಳಿವಿಗಾಗಿ ಜಂಟಿ ಸದನ ಸಮಿತಿ ರಚನೆ ಆಗಲಿ ಎಂದರು.

ಅತ್ಯಂತ ಸುಂದರ ತಾಣ ಉಳ್ಳಾಲ- ಬಿ.ಕೆ. ಹರಿಪ್ರಸಾದ್

ಕಾಂಗ್ರೆಸ್ ಸದಸ್ಯ ಬಿ.ಕೆ. ಹರಿಪ್ರಸಾದ್ ಮಾತನಾಡಿ, ಅತ್ಯಂತ ಸುಂದರ ತಾಣ ಉಳ್ಳಾಲ. ಆದರೆ ಹಿಂದಿನ ವೈಭವ ಇಲ್ಲವಾಗಿದೆ. ಬಸವಲಿಂಗಪ್ಪನವರಿಂದ ತಲೆ ಮೇಲೆ ಮಲ ಹೊರುವ ಪದ್ಧತಿ ಮುಗಿಯಿತು. ಇಂತಹ ಸ್ಥಳವನ್ನು ಪ್ರಯೋಗಶಾಲೆ ಮಾಡುವುದು ಬೇಡ. ಸಾಮಾಜಿಕ, ಶೈಕ್ಷಣಿಕ, ಆರ್ಥಿಕ, ಶೈಕ್ಷಣಿಕ ಬದಲಾವಣೆ ಏನಾಗಿದೆ ಎಂಬುದನ್ನು ಅರಿಯಲು ಸದನ ಸಮಿತಿ ರಚಿಸುವುದು ಉತ್ತಮ ಎಂದರು.

ದ.ಕನ್ನಡ ಜಿಲ್ಲೆಯ ಸ್ಥಿತಿ ಆಧರಿಸಿ ಯೋಜನೆ ಜಾರಿಗೆ ತರಬೇಕು- ಪ್ರತಾಪ್ ಸಿಂಹ ನಾಯಕ್

ನಂತರ ಪ್ರತಾಪ್ ಸಿಂಹ ನಾಯಕ್ ಮಾತನಾಡಿ, ನಾನು ಮಂಗಳೂರಿನವನು. ದಕ್ಷಿಣಕನ್ನಡ ಜಿಲ್ಲೆಯಲ್ಲಿ ಎಲ್ಲಾ ವ್ಯವಸ್ಥೆ ಇದೆ. ಇದರಿಂದ ಕೈಗಾರಿಕೆ ಹೆಚ್ಚಿದೆ. ಪ್ರತಿಭಟನೆಗಳೇನು ಕಡಿಮೆ ಆಗಿಲ್ಲ. ಜಿಲ್ಲೆಯ ಧಾರಣಾ ಶಕ್ತಿ ಮೀರಿ ಕೈಗಾರಿಕೆ ಇದೆ ಎಂದಾಗೆಲ್ಲಾ, ಅಭಿವೃದ್ಧಿ ಹೆಸರಿನಲ್ಲಿ ಕೈಗಾರಿಕೆ ತರಲಾಗುತ್ತಿದೆ. ಸ್ಥಳೀಯ ಉದ್ಯೋಗ ಸೃಷ್ಟಿ ಆಗುತ್ತದೆ ಎಂಬ ನಿರೀಕ್ಷೆ ಇದೆ. ಆದರೆ ಎಲ್ಲಾ ಕಡೆ ಆಗುವಂತೆ ಅನ್ಯಾಯ ಆಗಿದೆ. ದಕ್ಷಿಣಕನ್ನಡ ಜಿಲ್ಲೆಯ ಸ್ಥಿತಿ ಆಧರಿಸಿ ಯೋಜನೆ ಜಾರಿಗೆ ತರುವ ಅಗತ್ಯ ಇದೆ. ಸಾಮಾನ್ಯ ವಾತಾವರಣ ಇಲ್ಲಿ ಇರಲ್ಲ ಎನ್ನುವ ಅರಿವು ಸರ್ಕಾರಕ್ಕೆ ಇರಬೇಕು ಎಂದು ಸಲಹೆ ಇತ್ತರು.

ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ್ ಉತ್ತರ:

ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ್ ಉತ್ತರ ನೀಡಿ, ಉಳ್ಳಾಲ ನಗರಕ್ಕೆ ಭೇಟಿ ನೀಡಿ ಅಲ್ಲಿ ಜನರಿಗೆ ಆಗಿರುವ ಸಮಸ್ಯೆಯ ಪರಿಶೀಲನೆ ಮಾಡುತ್ತೇನೆ. ಇಲಾಖೆ ಅಧಿಕಾರಿಗಳ ಜೊತೆ ಚರ್ಚಿಸಿ ಜನರಿಗೆ ತೊಂದರೆ ಆಗದ ರೀತಿ ನಿಯಮಾವಳಿ ಪ್ರಕಾರ ಕಾರ್ಯ ನಿರ್ವಹಿಸುತ್ತೇವೆ. ಒಳಚರಂಡಿ ವ್ಯವಸ್ಥೆ ಅನಿವಾರ್ಯ. ಮನೆಯ ಮೇಲ್ಛಾವಣಿಯ ಮಳೆ ನೀರನ್ನು ಚರಂಡಿಗೆ ಬಿಡುವ ಕಾರ್ಯ ಆಗುತ್ತಿದೆ. ಎಲ್ಲಾ ವಿಷಯವನ್ನೂ ಪರಿಶೀಲಿಸಿ ಕ್ರಮ ಕೈಗೊಳ್ಳುತ್ತೇನೆ. ಸದ್ಯ ನನಗಿರುವ ಮಾಹಿತಿ ಪ್ರಕಾರ ಸಾಕಷ್ಟು ಸುಸಜ್ಜಿತ, ವ್ಯವಸ್ಥಿತವಾಗಿ ಕಾರ್ಯನಿರ್ಹಣೆ ಆಗುತ್ತಿದೆ ಎಂದರು.

ಬಳಿಕ ಮರಿತಿಬ್ಬೇಗೌಡ ಮಾತನಾಡಿ, ಅಗ್ನಿಶಾಮಕ ವ್ಯವಸ್ಥೆ ಹೆಚ್ಚಿಸಿ ಜನರ ಜೀವ ರಕ್ಷಣೆಗೆ ಅವಕಾಶ ಮಾಡಿಕೊಡಿ ಎಂದು ಹೇಳಿದರು. ಇದಕ್ಕೆ ಗೃಹ ಸಚಿವ ಅರಗ ಜ್ಞಾನೇಂದ್ರ ಮಾತನಾಡಿ, ಸಾಕಷ್ಟು ಸುಸಜ್ಜಿತ ಅಗ್ನಿಶಾಮಕ ವ್ಯವಸ್ಥೆ ಇದೆ. ಇನ್ನೊಂದು ಕೇಂದ್ರ ಅಗತ್ಯವಿದ್ದರೆ ವ್ಯವಸ್ಥೆ ಮಾಡುತ್ತೇವೆ ಎಂದರು. ಬಿ.ಕೆ. ಹರಿಪ್ರಸಾದ್, ಬಹುಮಹಡಿ ಕಟ್ಟಡ ಹೆಚ್ಚಾಗುತ್ತಿದ್ದು ಮಂಗಳೂರು ಭಾಗಕ್ಕೆ ಅಗ್ನಿಶಾಮಕ ವ್ಯವಸ್ಥೆ ಬೇಕು ಎಂದಿದ್ದಕ್ಕೆ ವ್ಯವಸ್ಥೆ ಮಾಡುವ ಭರವಸೆಯನ್ನು ಸಚಿವರು ನೀಡಿದರು.

ತಾವು ಕೇಳಿದ ಪ್ರಶ್ನೆಗೆ ಸೂಕ್ತ ಉತ್ತರ ಸಿಕ್ಕಿಲ್ಲ ಎಂದು ಜೆಡಿಎಸ್ ಸದಸ್ಯ ಬಿ.ಎಂ. ಫಾರೂಕ್ ಬೇಸರ ವ್ಯಕ್ತಪಡಿಸಿದರು. ಸದನ ಸಮಿತಿ ರಚಿಸುವ ಕಾರ್ಯ ಮಾಡಲಿ ಎಂದರು. ಇದಕ್ಕೆ ಉತ್ತರಿಸಿದ ಸಚಿವ ಬಸವರಾಜ್, ನಾನು ಸ್ಥಳ ಪರಿಶೀಲನೆ ನಡೆಸಿ ಅಗತ್ಯವಿದ್ದರೆ ಸೂಕ್ತ ಕ್ರಮ ಕೈಗೊಳ್ಳುತ್ತೇನೆ. ನನ್ನ ಮೇಲೆ ವಿಶ್ವಾಸ ಇಡಿ ಎಂದು ಕೇಳಿದರು. ಸದನ ಸಮಿತಿ ಅನಗತ್ಯ. ಸಣ್ಣ ವಿಚಾರ ಇದು. ಸರ್ಕಾರ ಸೂಕ್ತ ಪರಿಶೀಲನೆ ಮಾಡಲಿದೆ ಎಂದು ಹೇಳಿದರು.

ಸದನದ ಬಾವಿಗಿಳಿದು ಜೆಡಿಎಸ್‌ ಪ್ರತಿಭಟನೆ:

ಸಚಿವರ ಉತ್ತರದಿಂದ ಬೇಸರಗೊಂಡ ಜೆಡಿಎಸ್ ಸದಸ್ಯರು ಬಾವಿಳಿದು ಧರಣಿಗೆ ಮುಂದಾದರು. ಸಭಾನಾಯಕ ಕೋಟ ಶ್ರೀನಿವಾಸ ಪೂಜಾರಿ, ಸ್ಥಳೀಯ ಎಂಟು ಶಾಸಕರನ್ನು ಕರೆಸಿ ಸಭೆ ನಡೆಸುತ್ತೇವೆ ಎಂದರು. ಬೈರತಿ ಬಸವರಾಜ್ ಮಾತನಾಡಿ, ಈ ಅಧಿವೇಶನ ಮುಗಿಯುವ ಮುನ್ನವೆ ಸಭೆ ನಡೆಸುತ್ತೇವೆ ಎಂದರು. ಸದನ ಮುಂದುವರಿಸಲು ಮುಂದಾದಾಗ ಪ್ರತಿಪಕ್ಷ ನಾಯಕ ಎಸ್.ಆರ್. ಪಾಟೀಲ್ ಮಾತನಾಡಿ, ಕೂಡಲೇ ಜೆಡಿಎಸ್ ಸದಸ್ಯರು, ತಜ್ಞರು, ಅಧಿಕಾರಗಳ ಜೊತೆ ಸೇರಿ ಒಂದೆರಡು ದಿನದಲ್ಲೇ ಸಭೆ ಕರೆದು ಚರ್ಚಿಸಿ, ಪರಿಹಾರ ಕಂಡುಕೊಳ್ಳಿ ಎಂದು ಸಲಹೆ ಇತ್ತರು. ಜೆಡಿಎಸ್ ಸದಸ್ಯರ ಬಳಿಯೂ ಇದೇ ವಿಚಾರವಾಗಿ ಮನವಿ ಮಾಡಿದರು. ಸ್ಥಳಕ್ಕೆ ಮರಳುವಂತೆ ಮನವಿ ಮಾಡಿದರು.

ಶ್ರೀಕಂಠೇಗೌಡ ಮಾತನಾಡಿ, ಎರಡು ದಿನದಲ್ಲಿ ಸಭೆ ಕರೆದು ಚರ್ಚಿಸದಿದ್ದರೆ ನಮ್ಮ ಹೋರಾಟ ಮುಂದುವರಿಸುತ್ತೇವೆ ಎಂದರು. ಸದನ ಮುಗಿಯುವ ಮುನ್ನ ಸಭೆ ಮಾಡುತ್ತೇನೆ ಎನ್ನುವ ಮಾತಿಗೆ ಬದ್ಧವಾಗಿದ್ದೇನೆ ಎಂದು ಸಚಿವ‌ಬೈರತಿ ತಿಳಿಸಿದರು. ಸಭಾಪತಿಗಳು ಮಧ್ಯಪ್ರವೇಶಿಸಿ ಬುಧವಾರ ಸಭೆ ಕರೆದು ಚರ್ಚಿಸಿ ಎಂದರು. ಗುರುವಾರ ಸಭೆ ನಡೆಸುವ ಭರವಸೆ ನೀಡಿದ ಹಿನ್ನೆಲೆ ಜೆಡಿಎಸ್ ಸದಸ್ಯರು ಧರಣಿ ಹಿಂಪಡೆದರು.

ಇದನ್ನೂ ಓದಿ: ಸ್ವಾತಂತ್ರ್ಯ ಬಂದು 75 ವರ್ಷಗಳಾದ್ರೂ ಬಡವರಿಗೆ ಒಪ್ಪೊತ್ತಿನ ಊಟ ಕೊಡಲು ಸಾಧ್ಯವಾಗ್ತಿಲ್ಲ: ಹೆಚ್‌ಡಿಕೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.