ETV Bharat / state

ಆಶಾ ಕಾರ್ಯಕರ್ತೆ ಮೇಲೆ ಹಲ್ಲೆ ಆರೋಪ: ಬೆಂಗಳೂರಲ್ಲಿ ಜೆಡಿಎಸ್ ಮುಖಂಡ ಪೊಲೀಸ್​ ವಶಕ್ಕೆ ​ - asha worker

ಕೊರೊನಾ ವಿರುದ್ಧ ಹೋರಾಡುತ್ತಿರುವ ವೈದ್ಯಕೀಯ ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತೆಯರ ಮೇಲೆ ಹಲ್ಲೆ ಮಾಡಿದೆರೆ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಸ್ವತಃ ಮುಖ್ಯಮಂತ್ರಿ ಬಿ.ಎಸ್​ ಯಡಿಯೂರಪ್ಪ ಎಚ್ಚರಿಕೆ ನೀಡಿದ್ದಾರೆ. ಆದರೆ ಈ ನಡುವೆ ಬೆಂಗಳೂರಿನ ಲಗ್ಗೆರೆ ಬಳಿ ಜೆಡಿಎಸ್​ ಮುಖಂಡ ಧನಂಜಯ್​ ಆಶಾ ಕಾರ್ಯಕರ್ತೆ ಮೇಲೆ ಹಲ್ಲೆ ಮಾಡಿರುವುದು ಬೆಳಕಿಗೆ ಬಂದಿದ್ದು, ನಂದಿನಿ ಲೇಔಟ್ ಪೊಲೀಸರು ಧನಂಜಯ್​​ನನ್ನು ವಶಕ್ಕೆ ಪಡೆದಿದ್ದಾರೆ.

JDS leader arrested in Bangalore allegedly attack on asha workers
ಆಶಾಕಾರ್ಯಕರ್ತೆಯ ಮೇಲೆ ಹಲ್ಲೆ: ಜೆಡಿಎಸ್ ಮುಖಂಡನ ಬಂಧನ
author img

By

Published : Apr 23, 2020, 7:21 PM IST

ಬೆಂಗಳೂರು: ಸಾದಿಕ್ ಲೇಔಟ್ ಬಳಿ ಆಶಾ ಕಾರ್ಯಕರ್ತೆ ಮೇಲಿನ ಹಲ್ಲೆ ಘಟನೆ ಮಾಸುವ ಮುನ್ನವೇ, ಲಗ್ಗೆರೆಯಲ್ಲಿ ಆಶಾ ಕಾರ್ಯಕರ್ತೆಯ ಮೇಲೆ ಹಲ್ಲೆ ಮಾಡಿರುವ ಆರೋಪ ಪ್ರಕರಣ ಬೆಳಕಿಗೆ ಬಂದಿದೆ.

ಆರೋಪಿಯನ್ನ ನಂದಿನಿ ಲೇಔಟ್ ಪೊಲೀಸರು ಬಂಧಿಸಿದ್ದಾರೆ. ಜೆಡಿಎಸ್ ಮುಖಂಡ ಧನಂಜಯ್ ಬಂಧಿತ ಆರೋಪಿಯಾಗಿದ್ದು, ಲಗ್ಗೆರೆ ಬಳಿ ಇದೇ ಭಾನುವಾರ ಆಸ್ಪತ್ರೆಯಲ್ಲಿ ಊಟ ಹಂಚಲು ಧನಂಜಯ್ ತೆರಳಿದ್ದರು.

ಆಶಾಕಾರ್ಯಕರ್ತೆಯ ಮೇಲೆ ಹಲ್ಲೆ: ಜೆಡಿಎಸ್ ಮುಖಂಡ ವಶಕ್ಕೆ

ಇದೇ ವೇಳೆ ಆಶಾ ಕಾರ್ಯಕರ್ತೆಯರ ಬಳಿ ಸ್ಯಾನಿಟೈಜರ್ ಅನ್ನು ಕಾರ್ಪೊರೇಟರ್​​ ಕೊಟ್ಟಿದ್ದಾರಾ?ಲೋಕಲ್ ಎಂಎಲ್ಎ ಕೊಟ್ಟಿದ್ದಾರಾ? ಎಂದು ಪ್ರಶ್ನೆ ಕೇಳಿ ಸುಮಾರು ಅರ್ಧಗಂಟೆ ವಿಡಿಯೋ ಮಾಡಿಕೊಂಡಿದ್ದ. ಈ ವೇಳೆ ಆಶಾಕಾರ್ಯಕರ್ತೆ ಶಶಿಕಲಾ ಕಾರ್ಪೊರೇಟರ್​ ಕೊಟ್ಟಿಲ್ಲ, ಎಮ್​ಎಲ್​​ಎ ಕೊಟ್ಟಿಲ್ಲ ಸರ್ಕಾರ ಕೊಟ್ಟಿದ್ದು ಎಂದು ಹೇಳಿದ್ದರು.

ಆದರೆ ಧನಂಜಯ್ ತನಗೆ ಬೇಕಾದ ರೀತಿಯಲ್ಲಿ ವಿಡಿಯೋ ಎಡಿಟ್ ಮಾಡಿಕೊಂಡು ಅದನ್ನು ಸೋಶಿಯಲ್ ಮೀಡಿಯಾದಲ್ಲಿ ಅಪ್​​ಲೋಡ್ ಮಾಡಿದ್ದಾರೆ ಎನ್ನಲಾಗ್ತಿದೆ.

ಈ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ನೋಡಿದ ಆಶಾ ಕಾರ್ಯಕರ್ತೆಯ ಮನೆಯವರು ಇದೆಲ್ಲ ನಿಮಗೆ ಏನಕ್ಕೆ ಬೇಕು ಅಂತಾ ರೇಗಾಡಿದ್ದಾರೆ. ಹೀಗಾಗಿ ಶಶಿಕಲಾ ವಿಡಿಯೋ ಡಿಲಿಟ್ ಮಾಡುವಂತೆ ಲಗ್ಗೆರೆ ಜೆಡಿಎಸ್ ಕಚೇರಿಗೆ ಹೋಗಿದ್ದರು. ಈ ವೇಳೆ ವಿಡಿಯೋ ಡಿಲಿಟ್ ಮಾಡುತ್ತೀನಿ ಅಂತಾ ಹೇಳಿ ಕಳುಹಿಸಿದ್ದರೆನ್ನಲಾದ ಧನಂಜಯ್ ವಿಡಿಯೋವನ್ನು ಡಿಲಿಟ್​ ಮಾಡದೆ ಮತ್ತಷ್ಟು ಶೇರ್ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

ಹೀಗಾಗಿ ಮತ್ತೊಮ್ಮೆ ವಿಚಾರಿಸಲು ಮನೆ ಬಳಿ ಹೋದಾಗ ಕಾರ್ಯಕರ್ತೆಗೆ ಅವಾಚ್ಯ ಶಬ್ಧ ಬಳಸಿ ನಿಂದಿಸಿದ್ದಾರೆ. ನಂತರ ಧನಂಜಯ್ ತನ್ನ ಹೆಂಡತಿಯನ್ನು ಕರೆಸಿ ಥಳಿಸುವಂತೆ ಪ್ರಚೋದನೆ‌ ನೀಡಿದ್ದಾರೆ ಎಂದು ಧನಂಜಯ್ ವಿರುದ್ಧ ನಂದಿನಿ ಲೇಔಟ್​​ನಲ್ಲಿ ಶಶಿಕಲಾ ದೂರು ನೀಡಿದ್ದರು. ಶಶಿಕಲಾ ದೂರಿನ ಅನ್ವಯ ಪೊಲೀಸರು ಧನಂಜಯ್ ನನ್ನು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.