ETV Bharat / state

ಜನವರಿ 23 ರಂದು ಜೆಡಿಎಸ್ ಸಮಾವೇಶ - ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು

ಜೆಡಿಎಸ್ ಜನವರಿ 23 ರಂದು ನಗರದ ಅರಮನೆ ಮೈದಾನದಲ್ಲಿ ಬೃಹತ್ ಸಮಾವೇಶ ಹಮ್ಮಿಕೊಂಡಿದೆ. ರಾಜ್ಯದಲ್ಲಿ ಪ್ರಾದೇಶಿಕ ಪಕ್ಷವನ್ನು ಉಳಿಸಿಕೊಳ್ಳಲೇಬೇಕೆಂದು ಪಣತೊಟ್ಟಿರುವ ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ಮತ್ತೆ ಪಕ್ಷ ಸಂಘಟನೆಯಲ್ಲಿ ತೊಡಗಿಕೊಂಡಿದ್ದಾರೆ.

JDS conference
ಜೆಡಿಎಸ್ ಸಮಾವೇಶ
author img

By

Published : Jan 14, 2020, 4:05 PM IST

ಬೆಂಗಳೂರು: ಉಪಚುನಾವಣೆ ನಂತರ ಸೈಲೆಂಟ್ ಆಗಿದ್ದ ಜೆಡಿಎಸ್ ಇದೀಗ ಪಕ್ಷ ಸಂಘಟನೆಯ ಅಖಾಡಕ್ಕಿಳಿದಿದೆ. ರಾಜ್ಯದಲ್ಲಿ ಪ್ರಾದೇಶಿಕ ಪಕ್ಷವನ್ನು ಉಳಿಸಿಕೊಳ್ಳಲೇಬೇಕೆಂದು ಪಣತೊಟ್ಟಿರುವ ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ಮತ್ತೆ ಪುಟಿದೆದ್ದಿದ್ದಾರೆ.

ಜೆಡಿಎಸ್ ಜನವರಿ 23 ರಂದು ನಗರದ ಅರಮನೆ ಮೈದಾನದಲ್ಲಿ ಬೃಹತ್ ಸಮಾವೇಶ ಹಮ್ಮಿಕೊಂಡಿದೆ. ಸಮಾವೇಶದಲ್ಲಿ ಹಾಲಿ ಶಾಸಕರು, ಮಾಜಿ ಶಾಸಕರು, ವಿಧಾನ ಪರಿಷತ್ ಸದಸ್ಯರು, ಸೋತ ಅಭ್ಯರ್ಥಿಗಳು, ಸಂಸದರು, ಮಾಜಿ ಸಂಸದರು ಸೇರಿದಂತೆ ಎಲ್ಲ ಚುನಾಯಿತ ಸದಸ್ಯರು ಪಾಲ್ಗೊಳ್ಳಲಿದ್ದಾರೆ. ಈ ಸಮಾವೇಶದ ನಂತರ ತಾಲೂಕು, ಜಿಲ್ಲಾ ಮಟ್ಟದ ನಾಯಕರ ಸಮಾವೇಶ ನಡೆಯಲಿದೆ.

ಈ ವರ್ಷದ ಮೊದಲ ಕಾರ್ಯಕ್ರಮ ಇದಾಗಿದ್ದು, ಆ ನಂತರ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ನಡೆಸಲು ವರಿಷ್ಠರು ನಿರ್ಧರಿಸಿದ್ದಾರೆ. ಲೋಕಸಭೆ ಹಾಗೂ ವಿಧಾನಸಭಾ ಉಪಚುನಾವಣೆ ಬಳಿಕ ಪಕ್ಷದ ಕಾರ್ಯಚಟುವಟಿಕೆ ಸ್ಥಗಿತವಾಗಿತ್ತು. ಕೇರಳಕ್ಕೆ ಆಯುರ್ವೇದ ಚಿಕಿತ್ಸೆಗೆ ತೆರಳಿದ್ದ ದೇವೇಗೌಡರು ವಾಪಸ್ಸಾಗಿದ್ದು, ಪಕ್ಷ ಸಂಘಟನೆಯಲ್ಲಿ ತೊಡಗಿಕೊಳ್ಳಲು ನಿರ್ಧರಿಸಿದ್ದಾರೆ.

ಕೇರಳ ಮತ್ತು ಕರ್ನಾಟಕದಲ್ಲಿ ಪಕ್ಷ ಪ್ರಬಲವಾಗಿದೆ. ಎರಡೂ ರಾಜ್ಯ ಘಟಕಗಳು ಚುನಾವಣಾ ಆಯೋಗದ ಮಾನ್ಯತೆ ಹೊಂದಿವೆ. ಬೇರೆ ಕಡೆಯೂ ಜೆಡಿಎಸ್ ಪಕ್ಷವಿದೆ. ಆದರೆ, ಪ್ರಬಲವಾಗಿಲ್ಲ. ಇನ್ನು ಮುಂದೆ ಪಕ್ಷದ ಕಾರ್ಯಚಟುವಟಿಕೆಯನ್ನು ನಿರಂತರವಾಗಿ ನಡೆಸುವ ಮೂಲಕ ಪ್ರಾದೇಶಿಕ ಪಕ್ಷ ಉಳಿಸಲು ಪಣತೊಟ್ಟಿರುವ ಗೌಡರು ಸಂಕ್ರಾತಿ ಹಬ್ಬ ಮುಗಿದ ನಂತರ ಕಾರ್ಯಚಟುವಟಿಕೆಯಲ್ಲಿ ತೊಡಗಿಕೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ.

Intro:ಬೆಂಗಳೂರು : ಉಪಚುನಾವಣೆ ನಂತರ ಸೈಲೆಂಟ್ ಆಗಿದ್ದ ಜೆಡಿಎಸ್ ಇದೀಗ ಪಕ್ಷ ಸಂಘಟನೆಯ ಅಖಾಡಕ್ಕಿಳಿದಿದೆ. Body:ರಾಜ್ಯದಲ್ಲಿ ಪ್ರಾದೇಶಿಕ ಪಕ್ಷವನ್ನು ಉಳಿಸಿಕೊಳ್ಳಲೇಬೇಕೆಂದು ಪಣತೊಟ್ಟಿರುವ ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ಮತ್ತೆ ಪುಟಿದೆದ್ದಿದ್ದಾರೆ.
ಜೆಡಿಎಸ್ ಜನವರಿ 23 ರಂದು ನಗರದ ಅರಮನೆ ಮೈದಾನದಲ್ಲಿ ಬೃಹತ್ ಸಮಾವೇಶ ಹಮ್ಮಿಕೊಂಡಿದೆ.
ಸಮಾವೇಶದಲ್ಲಿ ಹಾಲಿ ಶಾಸಕರು, ಮಾಜಿ ಶಾಸಕರು, ವಿಧಾನ ಪರಿಷತ್ ಸದಸ್ಯರು, ಸೋತ ಅಭ್ಯರ್ಥಿಗಳು, ಸಂಸದರು, ಮಾಜಿ ಸಂಸದರು ಸೇರಿದಂತೆ ಎಲ್ಲ ಚುನಾಯಿತ ಸದಸ್ಯರು ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ.
ಈ ಸಮಾವೇಶದ ನಂತರ ತಾಲೂಕು, ಜಿಲ್ಲಾ ಮಟ್ಟದ ನಾಯಕರ ಸಮಾವೇಶ ನಡೆಯಲಿದೆ. ಈ ವರ್ಷದ ಮೊದಲ ಕಾರ್ಯಕ್ರಮ ಇದಾಗಿದ್ದು, ಆ ನಂತರ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ನಡೆಸಲು ವರಿಷ್ಠರು ನಿರ್ಧರಿಸಿದ್ದಾರೆ.
ಲೋಕಸಭೆ ಹಾಗೂ ವಿಧಾನಸಭಾ ಉಪಚುನಾವಣೆ ಬಳಿಕ ಪಕ್ಷದ ಕಾರ್ಯಚಟುವಟಿಕೆ ಸ್ಥಗಿತವಾಗಿತ್ತು. ಕೇರಳಕ್ಕೆ ಆಯುರ್ವೇದ ಚಿಕಿತ್ಸೆಗೆ ತೆರಳಿದ್ದ ದೇವೇಗೌಡರು ವಾಪಸ್ಸಾಗಿದ್ದು, ಪಕ್ಷ ಸಂಘಟನೆಯಲ್ಲಿ ತೊಡಗಿಕೊಳ್ಳಲು ಅವರು ನಿರ್ಧರಿಸಿದ್ದಾರೆ.
ಕೇರಳ ಮತ್ತು ಕರ್ನಾಟಕದಲ್ಲಿ ಪಕ್ಷ ಪ್ರಬಲವಾಗಿದೆ. ಎರಡೂ ರಾಜ್ಯ ಘಟಕಗಳು ಚುನಾವಣಾ ಆಯೋಗದ ಮಾನ್ಯತೆ ಹೊಂದಿವೆ. ಬೇರೆ ಕಡೆಯೂ ಜೆಡಿಎಸ್ ಪಕ್ಷವಿದೆ. ಆದರೆ, ಪ್ರಬಲವಾಗಿಲ್ಲ. ಇನ್ನು ಮುಂದೆ ಪಕ್ಷದ ಕಾರ್ಯಚಟುವಟಿಕೆಯನ್ನು ನಿರಂತರವಾಗಿ ನಡೆಸುವ ಮೂಲಕ ಪ್ರಾದೇಶಿಕ ಪಕ್ಷ ಉಳಿಸಲು ಪಣತೊಟ್ಟಿರುವ ಗೌಡರು ಸಂಕ್ರಾತಿ ಹಬ್ಬ ಮುಗಿದ ನಂತರ ಕಾರ್ಯಚಟುವಟಿಕೆಯಲ್ಲಿ ತೊಡಗಿಕೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ.
ಹಾಗೆಯೇ ರಾಜ್ಯ ವಿಧಾನಸಭೆಗೆ ಚುನಾವಣೆ ನಡೆಯಲು ಮೂರೂವರೆ ವರ್ಷ ಕಾಲಾವಕಾಶವಿದೆ. ಆದರೂ ಈಗಿನಿಂದಲೇ ಚುನಾವಣೆ ಸಿದ್ಧತೆ ಆರಂಭಿಸುವುದು ಸೂಕ್ತ. ಸದ್ಯಕ್ಕೆ ಚುನಾವಣೆ ಇಲ್ಲ ಎಂದು ಮೈ ಮರೆತು ಕೂರುವುದು ಬೇಡ. ಪಕ್ಷ ಸಂಘಟನೆ ಹಾಗೂ ಚುನಾವಣೆಗೆ ಸಿದ್ಧತೆಯನ್ನು ಜತೆ ಜತೆಯಲ್ಲೇ ಮಾಡಬೇಕೆಂದು ದೇವೇಗೌಡರು ಪಕ್ಷದ ಮುಖಂಡರಿಗೆ ಸೂಚಿಸಿದ್ದಾರೆ ಎನ್ನಲಾಗಿದೆ.
Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.