ETV Bharat / state

ಆಗ ಕೋಮುವಾದಿ ಅಂದ್ರು, ಈಗ ಉತ್ತಮ ಅಂತಿದಾರೆ: ಚೆಲುವರಾಯಸ್ವಾಮಿ

ಬಿಜೆಪಿಯನ್ನು ಕೋಮುವಾದಿ ಎಂದು ತೆಗಳಿದವರು. ಈಗ ಉತ್ತಮ ಎಂದು ಹೊಗಳುತ್ತಿರುವುದು ಯಾಕೆ ಅಂತ ತಿಳಿಯುತ್ತಿಲ್ಲ. ಕೇಂದ್ರ, ರಾಜ್ಯದಲ್ಲಿ ಬಿಜೆಪಿ ಅಧಿಕಾರ ಹಿಡಿದಿದೆ ಎಂದು ಭಯ ಪಟ್ಟಿದ್ದಾರೆಯೇ ಎಂದು ಮಾಜಿ ಸಚಿವ ಚೆಲುವರಾಯಸ್ವಾಮಿ ದೇವೇಗೌಡರನ್ನು ಪ್ರಶ್ನಿಸಿದ್ದಾರೆ.

ಮಾಜಿ ಸಚಿವ ಚೆಲುವರಾಯಸ್ವಾಮಿ
author img

By

Published : Aug 25, 2019, 7:07 PM IST

ಬೆಂಗಳೂರು: ನಾನು ಎಂದೂ ಕೋಮುವಾದಿ ಬಿಜೆಪಿ ಜೊತೆ ಸೇರುವುದಿಲ್ಲ. ನಮ್ಮದು ಜಾತ್ಯಾತೀತ ಎಂದು ಹೇಳಿದವರು ಈಗ ಬಿಜೆಪಿ ಉತ್ತಮ ಎನ್ನುತ್ತಿರುವುದು ಯಾಕೆ ಎಂದು ಗೊಂದಲ ಮೂಡುತ್ತಿದೆ ಎಂದು ಮಾಜಿ ಸಚಿವ ಚೆಲುವರಾಯಸ್ವಾಮಿ ಪರೋಕ್ಷವಾಗಿ ದೇವೇಗೌಡರ ಹೇಳಿಕೆಗಳಿಗೆ ವ್ಯಂಗ್ಯವಾಡಿದ್ದಾರೆ.

ಮಾಜಿ ಸಚಿವ ಚೆಲುವರಾಯಸ್ವಾಮಿ

ಸಿದ್ದರಾಮಯ್ಯ ನೇರವಾದಿ ವ್ಯಕ್ತಿತ್ವದವರು. ಒರಟು ಸ್ವಭಾವದವರು. ಆದರೆ, ಬೆನ್ನಿಗೆ ಚೂರಿ ಹಾಕುವವರಲ್ಲ. ಇಂತಹ ಹೇಳಿಕೆಗಳಿಂದ ಜೆಡಿಎಸ್​ ಅಸ್ತಿತ್ವ ಉಳಿಸಿಕೊಳ್ಳುತ್ತಿದೆ ಎಂದು ನೇರವಾಗಿ ದೂರಿದರು.

ಸಿದ್ದರಾಮಯ್ಯ ಮಾತ್ರ ಉತ್ತರ ಕೊಟ್ಟರೆ ಸಾಲದು. ರಾಷ್ಟ್ರೀಯ ಪಕ್ಷವೂ ಪ್ರತಿಕ್ರಿಯಿಸಬೇಕು ಎಂದರು. ಬಿಜೆಪಿಗೆ ವಿಧಾನಸಭೆ ಚುನಾವಣೆಯಲ್ಲಿ ಮೋಸ ಮಾಡಿ ಕಾಂಗ್ರೆಸ್​ ಜೊತೆ ಮೈತ್ರಿ ಮಾಡಿಕೊಂಡಿದ್ದು ಮೋಸ ಅಲ್ವಾ. ಕೇಂದ್ರ, ರಾಜ್ಯದಲ್ಲಿ ಬಿಜೆಪಿ ಅಧಿಕಾರಿ ಹಿಡಿದಿರುವುದು ಭಯ ಮೂಡಿಸಿದೆಯೇ ಎಂದು ಪ್ರಶ್ನಿಸಿದರು.

Intro:newsBody:ಹಿಂದಿನಿಂದ ಚೂರಿ ಹಾಕೋದನ್ನು ಸಿದ್ದರಾಮಯ್ಯ ಮಾಡಲ್ಲ: ಚೆಲುವರಾಯಸ್ವಾಮಿ

ಬೆಂಗಳೂರು: ಸಿದ್ದರಾಮಯ್ಯ ನೇರವಾದಿ, ಯಾವುದನ್ನೂ ಒಳಗೆ ಇಟ್ಟುಕೊಳ್ಳೋದಿಲ್ಲ. ಆದರೆ ಹಿಂದಿನಿಂದ ಚೂರಿ ಹಾಕೋದನ್ನು ಸಿದ್ದರಾಮಯ್ಯ ಮಾಡಲ್ಲ ಎಂದು ಮಾಜಿ ಸಚಿವ ಚೆಲುವರಾಯಸ್ವಾಮಿ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿ, ಸಿದ್ದರಾಮಯ್ಯ ಬ್ಯಾಕ್ ಸ್ಟ್ಯಾಬ್ ಮಾಡೋರಲ್ಲ. ಏನಾದ್ರೂ ಮಾಡಿ ಅಸ್ತಿತ್ವ ಉಳಿಸಿಕೊಳ್ಳುವುದಕ್ಕೆ ಜನತಾ ದಳ ಸ್ಟ್ರಾಟಜಿ ಅಷ್ಟೇ. ಹೇಗಾದ್ರೂ ಮಾಡಿ ಕಾಂಗ್ರೆಸ್ ಅನ್ನು ತೊಂದರೆಗೆ ಈಡುಮಾಡುವುದು ಜೆಡಿಎಸ್ ಲೆಕ್ಕಾಚಾರ. ಈ ಸಂದರ್ಭದಲ್ಲಿ ಕಾಂಗ್ರೆಸ್ ನ ಹಿರಿಯರ ಸಭೆ ಕರೆಯೋದು ಸೂಕ್ತ. ಕೇವಲ ಸಿದ್ದರಾಮಯ್ಯ ಮಾತ್ರ ಇದಕ್ಕೆ ಉತ್ತರ ಕೊಟ್ಟರೆ ಸಾಕಾಗೋದಿಲ್ಲ. ಸಿದ್ದರಾಮಯ್ಯ ವೈರಿ ಅಂತಾದರೆ ಮೊದಲೇ ಹೇಳಬೇಕಿತ್ತು ಸಂಬಂಧ ಬೇಡ ಅಂತ. ಯಾರ್ ಹತ್ರ ದುಡ್ಡು ಇಸ್ಕೊಂಡು ಹಿಂದೆ ಚುನಾವಣೆ ಮಾಡಿದ್ರೋ ಬಿಟ್ಟರೋ ಗೊತ್ತಿಲ್ಲ ಎಂದರು.
25 ಸೀಟು ಡಮ್ಮಿ ಕ್ಯಾಂಡಿಡೇಟ್ ಹಾಕಿಸಿಕೊಂಡು ಹಳೆ ಮೈಸೂರು ಭಾಗದಲ್ಲಿ ಗೆದ್ರಿ. ಆಮೇಲೆ ಕಾಂಗ್ರೆಸ್ ಜೊತೆ ಸರ್ಕಾರ ಮಾಡಿದ್ರಿ, ಅದು ಬಿಜೆಪಿಗೆ ಮಾಡಿದ ಮೋಸ ಅಲ್ವಾ? ಬಿಜೆಪಿಯನ್ನು ಈಗ ನೆನೆಸಿಕೊಳ್ತಿದ್ದೀರಲ್ಲ ಯಾಕೆ? ಕೇಂದ್ರದಲ್ಲಿ, ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿ ಇದೆ ಅನ್ನೋ ಭಯವಾ? ಎಂದರು.
ನಿಮ್ಮ ಮೂರು ಜನ ಶಾಸಕರನ್ನೇ ನಿಮ್ಮ ಬಳಿ ಹಿಡಿದಿಟ್ಟುಕೊಳ್ಳಲು ಆಗಿಲ್ಲ. 80 ಜನ ಶಾಸಕರು ಇರೋ ನಮ್ಮ ಬಗ್ಗೆ ಮಾತನಾಡ್ತೀರಾ? ಜೆಡಿಎಸ್ ನ ಶಾಸಕರು ಮೀಟಿಂಗಿಗೆ ಬರ್ತಿಲ್ಲ. ಇದಕ್ಕೆ ಏನು ಉತ್ತರ ಕೊಡ್ತೀರಾ? ನಿಮಗೆ ಯಾರ ಮೇಲೂ ನಂಬಿಕೆ ಇಲ್ಲ. 120 ಸೀಟು ಜೆಡಿಎಸ್ ಗೆಲ್ಲೋ ತನಕ ಸುಮ್ಮನೆ ಇರಿ ಹಾಗಾದ್ರೆ?ಒಕ್ಕಲಿಗ ಸಮುದಾಯದ ಒಬ್ಬ ವ್ಯಕ್ತಿಯನ್ನಾದ್ರೂ ದೇವೇಗೌಡರ ಕುಟುಂಬ ಬೆಳೆಸಿದೆಯಾ? ರಾಜಕೀಯವಾಗಿ ಒಕ್ಕಲಿಗ ಸಮುದಾಯದ ಒಬ್ಬ ವ್ಯಕ್ತಿಯನ್ನಾದ್ರೂ ಬೆಳೆಸಿದ್ದಾರಾ? ಆದರೂ ಒಕ್ಕಲಿಗ ಸಮುದಾಯ ನಿಮಗೆ ಗೌರವ ಕೊಟ್ಟಿದೆ. ಜೆಡಿಎಸ್ ಜೊತೆ ಸರ್ಕಾರ ಮುಂದುವರೆಸಿದ್ದಕ್ಕೆ ಕಾಂಗ್ರೆಸ್ ಗೆ ಅನ್ಯಾಯವಾಗಿದೆ. ದಿನೇಶ್ ಗುಂಡೂರಾವ್ ಹಿರಿಯ ಕಾಂಗ್ರೆಸ್ ನಾಯಕರ ಸಭೆ ಕರೆದು ಪ್ರತಿತಂತ್ರ ಮಾಡಲೇಬೇಕಿದೆ. ಇಲ್ಲದೇ ಹೋದರೆ ಹಳೆ ಮೈಸೂರು ಭಾಗದಲ್ಲಿ ಇದು ಬೇರೆ ಸ್ವರೂಪ ಪಡೆದುಕೊಳ್ಳುತ್ತದೆ.
ಅಸ್ತಿತ್ವ ಬೇಕಾಗಿದೆ
ಹಳೆ‌ಮೈಸೂರು ಭಾಗದಲ್ಲಿ ಜೆಡಿಎಸ್ ಗೆ ಅಸ್ತಿತ್ವ ಬೇಕಾಗಿದೆ. ಇವರಿಗೆ ಮಂಗಳೂರಲ್ಲಿ ಏನು ಮಾಡುವುದಕ್ಕೆ ಆಗಲ್ಲ. ಬೆಳಗಾವಿಯಲ್ಲಿ ಏನು ಮಾಡುವುದಕ್ಜೆ ಜೆಡಿಎಸ್ ನವರಿಗೆ ಆಗೋದಿಲ್ಲ. ಹೀಗಾಗಿ ಹಳೆ ಮೈಸೂರು ಭಾಗದಲ್ಲಿ ಮಾತ್ರ ಅವರಿಗೆ ಅಸ್ತಿತ್ವ. ನೇರವಾಗಿ ಅವರಿಗೆ ಕಾಂಗ್ರೆಸ್ ಪ್ರತಿಸ್ಪರ್ಧಿಯಾಗಿದೆ. ಹೇಗಾದ್ರೂ ಮಾಡಿ ತಮ್ಮ ಸೀಟು ಉಳಿಸಿಕೊಳ್ಳಬೇಕು ಅನ್ನುವ ಕಾರಣಕ್ಕೆ ಇಂಥ ಸ್ಟ್ರಾಟಜಿ ಮಾಡಿದ್ದಾರೆ ಎಂದರು.Conclusion:news
ETV Bharat Logo

Copyright © 2024 Ushodaya Enterprises Pvt. Ltd., All Rights Reserved.