ETV Bharat / state

ಡಿ.9 ನಂತರ ರಾಜಕೀಯ ಧ್ರುವೀಕರಣ, ಶುದ್ಧೀಕರಣ: ಕುಮಾರಸ್ವಾಮಿ

ಉಪಚುನಾವಣೆ ಪ್ರಚಾರದ ಅಂತಿಮ ದಿನವಾದ ಇಂದು ಕೂಡ ಮಾಜಿ ಸಿಎಂ ಕುಮಾರಸ್ವಾಮಿ ಶಿವಾಜಿನಗರದ ಜೆಡಿಎಸ್​ ಅಭ್ಯರ್ಥಿ ತನ್ವೀರ್​ ಪರ ಮತಯಾಚಿಸಿದರು. ಈ ವೇಳೆ ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.

farmer cm kumarswamy
ಮಾಜಿ ಸಿಎಂ ಕುಮಾರಸ್ವಾಮಿ ಪ್ರಚಾರ
author img

By

Published : Dec 3, 2019, 4:29 PM IST

ಬೆಂಗಳೂರು: ಡಿಸೆಂಬರ್ 9ರ ನಂತರ ರಾಜ್ಯದ ರಾಜಕೀಯದಲ್ಲಿ ಧ್ರುವೀಕರಣದ ಜೊತೆ ಶುದ್ಧೀಕರಣವು ಆಗಲಿದೆ. ಬಿಜೆಪಿ ಅಪಾಯಕಾರಿ ಪಕ್ಷ, ಮತದಾರರು ಎರಡು ಬಾರಿ ಯೋಚಿಸಿ ಮತ ಚಲಾಯಿಸಿ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಹೇಳಿದರು.

ಮಾಜಿ ಸಿಎಂ ಕುಮಾರಸ್ವಾಮಿ ಪ್ರಚಾರ

ಉಪ ಚುನಾವಣೆ ಬಹಿರಂಗ ಪ್ರಚಾರದ ಕೊನೆ ದಿನವಾದ ಇಂದು ಶಿವಾಜಿನಗರದ ಜೆಡಿಎಸ್ ಅಭ್ಯರ್ಥಿ ತನ್ವೀರ್ ಅಹ್ಮದ್ ವುಲ್ಲಾ ಪರ ಸಂಪಂಗಿ ರಾಮನಗರದಲ್ಲಿ
ಭರ್ಜರಿ ಪ್ರಚಾರದ ಜೊತೆಗೆ ಮತದಾರರನ್ನು ಸೆಳೆಯುವ ಪ್ರಯತ್ನ ಮಾಡಿದ್ರು.

ದೇಶದ ಪ್ರಧಾನಿ ವಿದೇಶದಲ್ಲಿಯೇ ಹೆಚ್ಚು ಕಾಲ ಕಳೆಯುತ್ತಾರೆ. ನರೇಂದ್ರ ಮೋದಿ ವಿದೇಶಿ ಪ್ರಧಾನಿಯಾಗಿದ್ದಾರೆ. ಕೇಂದ್ರ ಅವೈಜ್ಞಾನಿಕ ನೀತಿಯಿಂದಾಗಿ ನಿರುದ್ಯೋಗ, ಆರ್ಥಿಕ ಬಿಕ್ಕಟ್ಟು ಸಮಸ್ಯೆಗಳು ದೇಶವನ್ನು ಕಾಡುತ್ತಿವೆ. ಬಿಜೆಪಿ, ಕಾಂಗ್ರೆಸ್​ನಲ್ಲಿ ಸಮರ್ಥ ಅಭ್ಯರ್ಥಿಗಳಿಲ್ಲ ಎಂದು ಹೆಚ್​ಡಿಕೆ ಕಿಡಿಕಾರಿದರು.

ಅಭಿವೃದ್ಧಿಗಾಗಿ ವಿದ್ಯಾವಂತ ಯುವಕ ತನ್ವೀರ್ ಅಹ್ಮದ್ ವುಲ್ಲಾ ಅವರಿಗೆ ಶಿವಾಜಿನಗರದ ಮತದಾರರು ಒಂದು ಅವಕಾಶ ನೀಡಿ. ಅವರು ಮಾದರಿ ಕ್ಷೇತ್ರವನ್ನಾಗಿ ಮಾಡುವ ಯೋಜನೆ ಹೊಂದಿದ್ದಾರೆ ಎಂದು ಕುಮಾರಸ್ವಾಮಿ ಮತಯಾಚಿಸಿದರು.

Intro:ಡಿಸೆಂಬರ್ 9ರಂದು ನಂತರ ರಾಜ್ಯದಲ್ಲಿ ರಾಜಕೀಯ ಧ್ರುವೀಕರಣ ಜೊತೆ ರಾಜಕೀಯ ಶುದ್ಧೀಕರಣವು ಆಗಲಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ. ಉಪ ಚುನಾವಣೆ ಬಹಿರಂಗ ಪ್ರಚಾರಕ್ಕೆ ಇಂದು ಅಂತಿಮ ದಿನವಾಗಿದ್ದು, ಶಿವಾಜಿನಗರದ ಜೆಡಿಎಸ್ ಅಭ್ಯರ್ಥಿ ತನ್ವೀರ್ ಅಹ್ಮದ್ ವುಲ್ಲಾ ಪರ ಸಂಪಂಗಿರಾಮನಗರದಲ್ಲಿ
ಭರ್ಜರಿ ಪ್ರಚಾರ ಮಾಡಿದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಕಾಂಗ್ರೆಸ್ ,ಜೆಡಿಎಸ್ ವಿರುದ್ದ ಮಾತಿನ ಮೂಲಕ ಹಿಗ್ಗಾಮುಗ್ಗಾ ಥಳಿಸಿದರು. ಕಾಂಗ್ರೆಸ್ನವರು ಜೆಡಿಎಸ್ಗೆ ಮತ ಹಾಕಿದರೆ ಪ್ರಯೋಜನವಿಲ್ಲ ಬಿಜೆಪಿಗೆ ಉಪಯೋಗವಾಗುತ್ತದೆ ಎಂದು ಹೇಳುತ್ತಾರೆ.

Body:ಆದರೆ ಮತದಾರರು ಕಾಂಗ್ರೆಸ್ ಹಾಗೂ ಬಿಜೆಪಿ ಎರಡು ಪಕ್ಷಗಳಿಗೆ ಮತ ಹಾಕುವುದರಿಂದ ಏನು ಪ್ರಯೋಜನವಿಲ್ಲ ಜೆಡಿಎಸ್ ಗೆ ಮತ ನೀಡಿದ್ರೆ ರಾಜ್ಯದ ಅಭಿವೃದ್ದಿಯಾಗಲಿದೆ ಎಂದು ಎಚ್ ಡಿಕೆ ಕಾಂಗ್ರೆಸ್ ಹಾಗೂ ಬಿಜೆಪಿಗೆ ಟಾಂಗ್ ನೀಡಿದ್ರು. ಶಿವಾಜಿನಗರಕ್ಕೆ ಉಪಚುನಾವಣೆ ಜನರ ಬಯಕೆಯಿಂದ ಬಂದಿಲ್ಲ. ರೋಷನ್ ಬೇಗ್ ನಿಮ್ಮ ಮತಗಳನ್ನು ಅನರ್ಹ ಮಾಡಿ ಶಿವಾಜಿನಗರಕ್ಕೆ ಚುನಾವಣೆ ಬರುವಂತೆ ಮಾಡಿದ್ದಾರೆ. ಏಳು ಬಾರಿ ಶಿವಾಜಿನಗರದಲ್ಲಿ ಗೆದ್ದಿದ್ದರು ರೋಷನ್ ಬೇಗ್ ಯಾವುದೇ ಅಭಿವೃದ್ಧಿ ಕೆಲಸ ಮಾಡಿಲ್ಲ.

Conclusion:ಅಭಿವೃದ್ಧಿಗಾಗಿ ವಿದ್ಯಾವಂತ ಯುವಕರಾದ ತನ್ವೀರ್ ಅಹ್ಮದ್ ವುಲ್ಲಾ ಅವರಿಗೆ ಶಿವಾಜಿನಗರದ ಮತದಾರರು ಒಂದು ಅವಕಾಶ ನೀಡಿ. ಶಿವಾಜಿನಗರ ವನ್ನು ಮಾದರಿ ಕ್ಷೇತ್ರವನ್ನಾಗಿ ಮಾಡುತ್ತೇವೆ ಎಂದು ಕುಮಾರಸ್ವಾಮಿ ಹೇಳಿದ್ರು. ನಂತರ ಮಾತನಾಡಿದ ತನ್ವೀರ್ ಅಹಮ್ಮದ್ , ಬಡವರ ,ರೈತರ ಪರ ನಿರುದ್ಯೋಗಿ ಯುವಕರ ಪರ ಇರುವುದು ಅಂದ್ರೆ ಅದು ಕುಮಾರಸ್ವಾಮಿ ಅವರು ಮಾತ್ರ, ಈ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ಮಾಡಲು ನಾನು ಶಕ್ತಿ ಮೀರಿ ಪ್ರಯತ್ನ ಮಾಡುತ್ತೇನೆ.ದಯವಿಟ್ಟು ಒಂದು ಅವಕಾಶ ಮಾಡಿಕೊಂಡಿ ಎಂದು ತನ್ವೀರ್ ಮತದಾರರಲ್ಲಿ ಮನವಿ ಮಾಡಿದ್ರು.

ಸತೀಶ ಎಂಬಿ.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.