ETV Bharat / state

ಎಸ್ ಆರ್ ವಿಶ್ವನಾಥ್ ವಿರುದ್ಧ ಜೆಡಿಎಸ್ ಅಭ್ಯರ್ಥಿ ಮುನೇಗೌಡ ಏಕವಚನದಲ್ಲೇ ವಾಗ್ದಾಳಿ : ಆಣೆ ಪ್ರಮಾಣಕ್ಕೆ ಅಹ್ವಾನ - BJP MLA SR Vishwanath

ಕಿಡ್ನಾಪ್ ವಿಡಿಯೋ ಕುರಿತು ಎಂ. ಮುನೇಗೌಡ ಸ್ವತಃ ತಾವೇ ಪ್ರತಿಕ್ರಿಯೆ ನೀಡಿದರು.

JDS candidate M. Munegowda
ಜೆಡಿಎಸ್ ಅಭ್ಯರ್ಥಿ ಎಂ.ಮುನೇಗೌಡ
author img

By

Published : May 4, 2023, 4:31 PM IST

ಬೆಂಗಳೂರು : ಯಲಂಹಕ ಜೆಡಿಎಸ್ ಅಭ್ಯರ್ಥಿ ಎಂ. ಮುನೇಗೌಡ ತಾವೇ ಕಿಡ್ನಾಪ್ ಆಗುವ ಮಾತುಕಥೆ ಒಳಗೊಂಡ ರಹಸ್ಯ ಕಾರ್ಯಚರಣೆ ವಿಡಿಯೋ ವೈರಲ್ ಆಗಿದ್ದು, ಆ ವಿಡಿಯೋ ಕುರಿತು ಪ್ರತಿಕ್ರಿಯೆ ನೀಡಿದ ಮುನೇಗೌಡ ಯಲಹಂಕ ಬಿಜೆಪಿ ಶಾಸಕ ಎಸ್ ಆರ್ ವಿಶ್ವನಾಥ್ ವಿರುದ್ಧ ಏಕವಚನದಲ್ಲಿ ವಾಗ್ಧಾಳಿ ನಡೆಸಿದರು. ವಿಡಿಯೋ ಸತ್ಯಸತ್ಯೆತೆಯ ಬಗ್ಗೆ ಧರ್ಮಸ್ಥಳಕ್ಕೆ ಬಂದು ಆಣೆ ಪ್ರಮಾಣ ಮಾಡುವಂತೆ ಮುನೇಗೌಡ ಆಹ್ವಾನ ಕೊಟ್ಟಿದ್ದಾರೆ.

ಇದನ್ನೂ ಓದಿ : ಬಜರಂಗದಳ ನಿಷೇಧ ಯಾರಿಂದಲೂ ಸಾಧ್ಯವಿಲ್ಲ: ಕಾಂಗ್ರೆಸ್​​ ವಿರುದ್ಧ ಬಿಎಸ್​ ಯಡಿಯೂರಪ್ಪ ಕಿಡಿ

ಈ ಬಗ್ಗೆ ಯಲಹಂಕದಲ್ಲಿ ಪ್ರತಿಕ್ರಿಯೆ ನೀಡಿದ ಅವರು ಎಸ್. ಆರ್. ವಿಶ್ವನಾಥ್ ಒಬ್ಬ ರಣ ಹೇಡಿ, ಆಂಧ್ರದ ರಾಜಕಾರಣವನ್ನು ಇಲ್ಲಿ ಮಾಡುತ್ತಿದ್ದು, ಭಯ ಪಡಿಸಿದರೇ ವಾಪಸ್ ಹೋಗುತ್ತಾರೆ ಎಂದುಕೊಂಡಿದ್ದಾನೆ. ಗಂಡಸರಾಗಿದ್ದಾರೆ ಜನರ ಪ್ರೀತಿ ಗಳಿಸಬೇಕು. ಇದೇ ರೀತಿ ಈ ಹಿಂದೆಯೂ ಕೂಡಾ ಹಲವು ಕುತಂತ್ರ ಮಾಡಿದ್ದಾನೆ. ದಲಿತ ಸಮುದಾಯದ ವಜ್ರೇಶ್ ಕೊಲೆ ಪ್ರಕರಣ, ಜೈಲಿನಲ್ಲಿ ಅನಿಲ್ ರಾಜ್ ಸಾವು ತನಿಖೆ, ಕಡಬಗೆರೆ ಶ್ರೀನಿವಾಸ್ ಮೇಲಿನ ಗುಂಡಿನ ದಾಳಿ ಕೇಸ್ ಏನಾಯಿತು ಎಂದು ಎಸ್ ಆರ್ ವಿಶ್ವನಾಥ್​ಗೆ ಎಂ ಮುನೇಗೌಡ ಪ್ರಶ್ನಿಸಿದರು.

ಇದನ್ನೂ ಓದಿ : ಕಾಂಗ್ರೆಸ್​ ಚುನಾವಣಾ ಪ್ರಣಾಳಿಕೆ ಪ್ರತಿಗೆ ಬೆಂಕಿಯಿಟ್ಟ ಈಶ್ವರಪ್ಪ: ಕೆಎಸ್​​ಇ ಮಾಡಿದ್ದು ಸರಿಯಲ್ಲ ಎಂದು ಖರ್ಗೆ ಗರಂ

ಯಾರೋ ಯುಟ್ಯೂಬ್ ಚಾನಲ್​ ನವರು ಬಂದು ತಮಾಷೆಗೆ ಮಾತನಾಡುತ್ತಿದ್ದರು. ಏನೋ ಐಡಿಯಾ ಕೊಡುತ್ತೇವೆ ಎಂದು ಹೇಳಿದ್ರು. ಆದರೆ ನಾನು ಈ ಬಗ್ಗೆ ತಲೆಕೆಡಿಸಿಕೊಳ್ಳದೆ ಎದ್ದು ನಡೆಯಪ್ಪ ಎಂದು ಕಳಿಸಿದ್ದೆ. ಈ ಸಂದರ್ಭದಲ್ಲಿ ಅವರೇ ಮಾತನಾಡಿರುವ ವಿಡಿಯೋ ರೆಕಾರ್ಡ್​ ಮಾಡಿದ್ದು, ವಿಡಿಯೋದಲ್ಲಿ ನನ್ನ ಧ್ವನಿಯೇ ಇಲ್ಲ. ಎದ್ದು ನಡಿಯಪ್ಪ ಅನ್ನುವ ನನ್ನ ಮಾತಿಗೆ ಬಿಪ್ ಸೌಂಡ್ ಹಾಕಿದ್ದಾರೆ. ಎಂ​ಎಲ್​ಎ ದೊಡ್ಡ ಮೊತ್ತ ಕೊಟ್ಟು ಈ ವಿಡಿಯೋ ಮಾಡಿಸಿದ್ದಾರೆ. ಈ ಬಗ್ಗೆ ಪೊಲೀಸ್ ಠಾಣೆಗೆ ದೂರು ಕೊಟ್ಟಿದ್ದೇವೆ. ಸತ್ಯಾಸತ್ಯತೆಗಳು ಹೊರ ಬರಬೇಕು ಎಂದು ಎಸ್. ಆರ್. ವಿಶ್ವನಾಥ್ ವಿರುದ್ದ ಮುನೇಗೌಡ ಆರೋಪಿಸಿದರು.

ಇದನ್ನೂ ಓದಿ : ವಿಜುಗೌಡ ಪಾಟೀಲ್​ಗೆ ಬಬಲೇಶ್ವರ ಬಿಜೆಪಿ ಟಿಕೆಟ್ ಸಿಕ್ಕಾಗ ಅವರ ಮಗ ಗುಂಡು ಹಾರಿಸಿ ಸಂಭ್ರಮಿಸಿದ್ದರು: ರಾಜು ಆಲಗೂರ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.