ETV Bharat / state

ಕಾಂಗ್ರೆಸ್, ಜೆಡಿಎಸ್ ಭದ್ರಕೋಟೆಯಲ್ಲಿ ಕಮಲ ಅರಳಲಿದೆ: ಸಿಎಂ ಬೊಮ್ಮಾಯಿ

ಚಿಕ್ಕಬಳ್ಳಾಪುರ ಮತ್ತು ಕೋಲಾರ ಭಾಗದ ಪ್ರಭಾವಿ ನಾಯಕರು ಇಂದು ಬಿಜೆಪಿಗೆ ಸೇರ್ಪಡೆ - ಮುಳುಗುತ್ತಿರುವ ಹಡಗನ್ನು ಬಿಟ್ಟು ತೇಲುವ ಹಡಗನ್ನು ಹತ್ತಿ ನೀವೆಲ್ಲಾ ಸರಿಯಾದ ಆಯ್ಕೆ ಮಾಡಿಕೊಂಡಿದ್ದೀರಿ - ಸಿಎಂ ಬೊಮ್ಮಾಯಿ

jds-and-congress-party-leaders-joins-bjp
ಕಾಂಗ್ರೆಸ್, ಜೆಡಿಎಸ್ ಭದ್ರಕೋಟೆಯಲ್ಲಿ ಕಮಲ ಅರಳಲಿದೆ: ಸಿಎಂ ಬೊಮ್ಮಾಯಿ
author img

By

Published : Jan 30, 2023, 5:59 PM IST

Updated : Jan 30, 2023, 7:34 PM IST

ಕಾಂಗ್ರೆಸ್, ಜೆಡಿಎಸ್ ಭದ್ರಕೋಟೆಯಲ್ಲಿ ಕಮಲ ಅರಳಲಿದೆ: ಸಿಎಂ ಬೊಮ್ಮಾಯಿ

ಬೆಂಗಳೂರು: ಕೋಲಾರ, ಚಿಕ್ಕಬಳ್ಳಾಪುರಗಳಲ್ಲಿ ರಾಜಕೀಯ ಬದಲಾವಣೆ ಗಾಳಿ ಬೀಸುತ್ತಿದೆ, ಈ ಎರಡೂ ಕಡೆಯೂ ನಾವೇ ಪ್ರಬಲರು ಅಂತ ಬೀಗುತ್ತಿದ್ದ ಕಾಂಗ್ರೆಸ್, ಜೆಡಿಎಸ್​ಗೆ ಈ ಬಾರಿ ನಿರಾಸೆ ಕಟ್ಟಿಟ್ಟ ಬುತ್ತಿಯಾಗಿದ್ದು, ಮುಳುಗುತ್ತಿರುವ ಹಡಗನ್ನು ಬಿಟ್ಟು ತೇಲುವ ಹಡಗನ್ನು ಹತ್ತಿ ನೀವೆಲ್ಲಾ ಸರಿಯಾದ ಆಯ್ಕೆ ಮಾಡಿಕೊಂಡಿದ್ದೀರಿ. ಪಕ್ಷ ಸೇರಿದ ಎಲ್ಲರನ್ನೂ ಗೌರವದಿಂದ ನಡೆಸಿಕೊಳ್ಳಲಾಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದ್ದಾರೆ.

ಚಿಕ್ಕಬಳ್ಳಾಪುರ ಮತ್ತು ಕೋಲಾರ ಭಾಗದ ಪ್ರಭಾವಿ ನಾಯಕರು ಇಂದು ಬಿಜೆಪಿಗೆ ಸೇರ್ಪಡೆಯಾದರು. ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಕಾರ್ಯಾಲಯದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಚಿವ ಸುಧಾಕರ್ ಸಮ್ಮುಖದಲ್ಲಿ ಒಕ್ಕಲಿಗರ ಸಂಘದ ಪ್ರಧಾನ ಕಾರ್ಯದರ್ಶಿ, ಜೆಡಿಎಸ್ ಮುಖಂಡ ಕೋನಪ್ಪರೆಡ್ಡಿ, ಚಿಂತಾಮಣಿ ಕ್ಷೇತ್ರದ ಜಿ.ಎನ್.ವೇಣುಗೋಪಾಲ್, ವಾಣಿ ಕೃಷ್ಣರೆಡ್ಡಿ, ಬಮೂಲ್ ನಿರ್ದೇಶಕ ಶ್ರೀನಿವಾಸ್, ಜಿ.ಪಂ ಮಾಜಿ ಸದಸ್ಯ ಪಿ.ಎಸ್.ಸುಬ್ಬಾರೆಡ್ಡಿ ಬಿಜೆಪಿ ಸೇರ್ಪಡೆಯಾದರು.

ಈ ವೇಳೆ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಬಿಜೆಪಿ ವಿಶ್ವದಲ್ಲಿಯೇ ಅತಿ ದೊಡ್ಡ ರಾಜಕೀಯ ಪಕ್ಷ, ದೇಶದಲ್ಲಿ ಎಲ್ಲಾ ರಾಜ್ಯಗಳಲ್ಲಿಯೂ ಭವಿಷ್ಯವಿರುವ ಪಕ್ಷ ಬಿಜೆಪಿಯಾಗಿದೆ ಹೀಗಾಗಿ ಉತ್ತಮ ಭವಿಷ್ಯವಿರುವ ರಾಜಕೀಯ ಪಕ್ಷದ ಹಡಗಿನಲ್ಲಿ ಬಂದು ಸೇರಿದ ನಿಮ್ಮ ಪ್ರಯಾಣ ಅತ್ಯಂತ ಯಶಸ್ವಿಯಾಗಲಿದೆ. ಮುಂದಿನ ದಿನಗಳಲ್ಲಿ ಇಡೀ ಕೋಲಾರ ಜಿಲ್ಲೆ ಸಂಪೂರ್ಣವಾಗಿ ಅಭಿವೃದ್ಧಿಯಾಗಲಿದೆ. ಇದರ ಜೊತೆಗೆ ಚಿಕ್ಕಬಳ್ಳಾಪುರ ಜಿಲ್ಲೆಯು ಸಮಗ್ರ ಅಭಿವೃದ್ಧಿಯಾಗಲಿದೆ ಎಂದರು.

ಈ ಬಾರಿ ಬದಲಾವಣೆಯ ಗಾಳಿ ಬೀಸಲಿದೆ: ಸಂಸದ ಮುನಿಸ್ವಾಮಿ, ಸಚಿವರಾದ ಸುಧಾಕರ್, ಮುನಿರತ್ನ, ಜಿಲ್ಲಾಧ್ಯಕ್ಷರು, ಮಂಡಲ ಅಧ್ಯಕ್ಷರು ಮಾರ್ಗದರ್ಶನದಲ್ಲಿ ಈ ಭಾಗದಲ್ಲಿ ಸಂಘಟನಾತ್ಮಕ ಕರ್ತವ್ಯ ನಿರ್ವಹಿಸುತ್ತಿದ್ದು, ಈ ಬಾರಿ ಜಿಲ್ಲೆಯಲ್ಲಿ ದೊಡ್ಡ ಬದಲಾವಣೆ ಆಗಲಿದೆ. ಬಹಳ ವರ್ಷಗಳಿಂದ ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆ ಕಾಂಗ್ರೆಸ್ ಮತ್ತು ಜೆಡಿಎಸ್ ಭದ್ರಕೋಟೆಯಾಗಿದ್ದವು, ಆದರೆ ಈ ಬಾರಿ ಬದಲಾವಣೆಯ ಗಾಳಿ ಬೀಸಲಿದೆ, ಪರಿವರ್ತನೆ ಆಗಲಿದೆ, ಯುವಕರಲ್ಲಿ ಬಹಳ ದೊಡ್ಡ ಬದಲಾವಣೆಯನ್ನು ಈ ಎರಡು ಜಿಲ್ಲೆಗಳಲ್ಲಿ ಕಾಣಬಹುದಾಗಿದೆ ಎಂದು ಹೇಳಿದರು.

ಜನ ಮತ್ತೆ ಬಿಜೆಪಿಗೆ ಮಣೆ ಹಾಕಲಿದ್ದಾರೆ: ಈಗಾಗಲೇ ಕಾಂಗ್ರೆಸ್ ಪಕ್ಷವನ್ನ ಅಧಿಕಾರಕ್ಕೆ ತಂದು ಅವರ ಆಡಳಿತವನ್ನು ಜನತೆ ನೋಡಿ ಆಗಿದೆ. ಅವರ ಮಾತುಗಳಿಗೆ, ಕೃತಿಗಳಿಗೆ ವ್ಯತ್ಯಾಸ ಇಲ್ಲದೆ ಬರಿ ಸುಳ್ಳುಗಳನ್ನ ಹೇಳಿಕೊಂಡು ಸುಳ್ಳಿನ ಮೇಲೆ ತಮ್ಮ ಪಕ್ಷವನ್ನ ರಾಜ್ಯದಲ್ಲಿ ಅಧಿಕಾರಕ್ಕೆ ತರಬೇಕು ಎನ್ನುವ ಚಿಂತನೆಯಲ್ಲಿದ್ದಾರೆ. ಆದರೆ ಜನ ಬಹಳ ಬುದ್ಧಿವಂತರಿದ್ದಾರೆ. ಕಾಂಗ್ರೆಸ್‌ ದುರಾಡಳಿತ, ದೌರ್ಭಾಗ್ಯ ಜನರ ನೆನಪಿನಲ್ಲಿದೆ. ಹೀಗಾಗಿ ಯಾವ ಕಾರಣಕ್ಕೂ ಜನ ಅವರಿಗೆ ಬೆಂಬಲ ಕೊಡುವುದಿಲ್ಲ, ಮತ್ತೆ ಬಿಜೆಪಿಗೆ ಮಣೆ ಹಾಕಲಿದ್ದಾರೆ ಎಂದು ಹೇಳಿದರು.

ಯಾವುದೇ ರೀತಿಯ ಚಿಂತೆ ಬೇಡ: ನೀವು ಇಂದು ಈ ಕುಟುಂಬದ ಸದಸ್ಯರಾಗಿದ್ದೀರಿ, ಅತ್ಯಂತ ಗೌರವದಿಂದ ನಿಮ್ಮನ್ನ ನೋಡಿಕೊಳ್ಳುತ್ತೇವೆ, ಯಾವುದೇ ರೀತಿಯ ಚಿಂತೆ ಬೇಡ ಎನ್ನುವ ಭರವಸೆ ನೀಡುತ್ತಿದ್ದೇನೆ, ಇಂದಿನಿಂದ ನೀವೆಲ್ಲ ನಮ್ಮ ವಿಜಯ ಸಂಕಲ್ಪ ಕಾರ್ಯಕ್ರಮವನ್ನು ನಿಮ್ಮ ಬೂತ್ ನಿಮ್ಮ ನಿಮ್ಮ ಊರಿನಲ್ಲಿ ಯಶಸ್ವಿ ಮಾಡಿ ಮತ್ತು ಸುಧಾಕರ್ ಮುನಿಸ್ವಾಮಿ ಯಾವ ಕಾರ್ಯಕ್ರಮ ಆಯೋಜಿಸುತ್ತಾರೋ ಅವುಗಳನ್ನು ಯಶಸ್ವಿಗೊಳಿಸಲು ಸಹಕಾರ ನೀಡಿ ಎಂದು ಸಿಎಂ ಬೊಮ್ಮಾಯಿ ಮಾರ್ಗದರ್ಶನ ನೀಡಿದರು.

ಕೋಲಾರ, ಚಿಕ್ಕಬಳ್ಳಾಪುರದಲ್ಲಿ ಬಿಜೆಪಿಯ ಕಮಲ ಅರಳಲಿದೆ ನಾನು ಕೂಡ ಚಿಂತಾಮಣಿಗೆ ಬರಲಿದ್ದೇನೆ, ಬೃಹತ್ ರ್ಯಾಲಿಯನ್ನ ಮಾಡೋಣ ಅಲ್ಲಿಯ ಭಾಗದ ಜನರನ್ನ ವಿಶ್ವಾಸಕ್ಕೆ ತೆಗೆದುಕೊಂಡು ನಾವು ನಮ್ಮ ಪಕ್ಷವನ್ನು ಕಟ್ಟಿ ಜಯಶಾಲಿಯನ್ನಾಗಿ ಮಾಡಿ ಕರ್ನಾಟಕದಲ್ಲಿ ಸದೃಢವಾಗಿರುವ, ಜನ ಪರವಾಗಿರುವ, ಅಭಿವೃದ್ಧಿ ಪರವಾಗಿರುವ ಸರ್ಕಾರವನ್ನು ಮತ್ತೊಮ್ಮೆ ರಚಿಸೋಣ ಎಂದು ಸಿಎಂ ಕರೆ ನೀಡಿದರು.

ಇದನ್ನೂ ಓದಿ: ನೆಟ್ಟಾರು ಹತ್ಯೆಗೆ ಪ್ರತೀಕಾರವಾಗಿ ಸುರತ್ಕಲ್​​ ಘಟನೆ ನಡೆದಿದೆ​​ ಎಂದ ಶರಣ್​: ಪಂಪ್​ವೆಲ್ ವಿರುದ್ಧ ಪೊಲೀಸರಿಗೆ ದೂರು ನೀಡಿದ ಫಾಜಿಲ್ ತಂದೆ

Last Updated : Jan 30, 2023, 7:34 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.