ETV Bharat / state

ಜೆಡಿಎಸ್‌ಗೆ ಸಂಘಟನೆಯ 'ತೆನೆ'ಬೇನೆ.. ವರಿಷ್ಠರಿಂದ ಅಂತರ ಕಾಯ್ದುಕೊಳ್ತಿರುವರೇ ಶಾಸಕರು!? - JDS Activists Conference

ಮಾಜಿ ಸಚಿವ ಜಿ ಟಿ ದೇವೇಗೌಡರು ಮೈತ್ರಿ ಸರ್ಕಾರದಲ್ಲಿ ಖಾತೆ ಹಂಚಿಕೆ ಆದಾಗಿನಿಂದಲೂ ನಾಯಕರ ವಿರುದ್ಧ ಮುನಿಸಿಕೊಂಡಿದ್ದರು. ಕಾಂಗ್ರೆಸ್-ಜೆಡಿಎಸ್ ಸರ್ಕಾರ ಪತನಗೊಂಡ ನಂತರ ಜಿ ಟಿ ದೇವೇಗೌಡರು ಪಕ್ಷದಿಂದ ದೂರವೇ ಉಳಿದರು. ಇತ್ತೀಚಿಗೆ ನಡೆದ ವಿಧಾನಪರಿಷತ್ ಚುನಾವಣೆಯಲ್ಲಿ ಜಿಟಿಡಿ ಬಿಜೆಪಿ ಅಭ್ಯರ್ಥಿ ಪರ ಮತ ಚಲಾಯಿಸಿ ಇದೀಗ ಜೆಡಿಎಸ್ ವರಿಷ್ಠರಿಗೆ ಸೆಡ್ಡು ಹೊಡೆದಿದ್ದಾರೆ.

JDS Activists Conference
ಜೆಡಿಎಸ್ ಕಾರ್ಯಕರ್ತರ ಸಮಾವೇಶ
author img

By

Published : Feb 22, 2020, 4:47 PM IST

ಬೆಂಗಳೂರು : ಲೋಕಸಭೆ ಚುನಾವಣೆಯಲ್ಲಿ ಭಾರೀ ಸೋಲಿನ ನಡುವೆಯೂ ಪಕ್ಷವನ್ನ ತಳಮಟ್ಟದಿಂದ ಮತ್ತೆ ಸಂಘಟಿಸಲೇಬೇಕೆಂದು ಪಣತೊಟ್ಟಿರುವ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್ ಡಿ ದೇವೇಗೌಡರು, ಮೈತ್ರಿ ಸರ್ಕಾರ ಪತನ, ಆಪರೇಷನ್ ಕಮಲದ ಅಬ್ಬರದಲ್ಲಿ ಜೆಡಿಎಸ್ ಕಾರ್ಯಕರ್ತರು ಆತ್ಮವಿಶ್ವಾಸ ಕಳೆದುಕೊಳ್ಳಬಾರದೆಂದು ಸಮಾವೇಶ ನಡೆಸಿ ಕಾರ್ಯಕರ್ತರಲ್ಲಿ ವಿಶ್ವಾಸ ತುಂಬಿದ್ದಾರೆ. ಅವರ ಈ ಕೆಲಸಕ್ಕೆ ಕಾರ್ಯಕರ್ತರು ಹಾಗೂ 3ನೇ ಹಂತದ ನಾಯಕರಿಂದ ಸ್ಪಂದನೆ ಸಿಕ್ಕಿದೆ. ಆದರೆ, ಮೈತ್ರಿ ಸರ್ಕಾರ ಪತನದ ನಂತರ ಬಹುತೇಕ ಶಾಸಕರು, ಪಕ್ಷದ ಕಚೇರಿಯತ್ತಲೂ ಸುಳಿದಿಲ್ಲ.

ಅಧಿಕಾರದಲ್ಲಿದ್ದಾಗ ತಮ್ಮನ್ನು ಕಡೆಗಣಿಸಲಾಗಿದೆ. ನಿಗಮ-ಮಂಡಳಿ ಸ್ಥಾನ ನೀಡದೆ ನಿರ್ಲಕ್ಷಿಸಲಾಯಿತು. ಕ್ಷೇತ್ರದ ಅಭಿವೃದ್ಧಿಗೂ ಅನುದಾನ ನೀಡಲು ಒಲವು ತೋರಲಿಲ್ಲವೆಂಬ ಕೊರಗು 2ನೇ ಹಂತದ ಬಹುತೇಕ ನಾಯಕರಲ್ಲಿದೆ. ಈ ಕಾರಣಕ್ಕಾಗಿಯೇ ಮಾಜಿ ಸಿಎಂ ಕುಮಾರಸ್ವಾಮಿ ಅವರ ವಿರುದ್ಧ ಶಾಸಕರು, ವಿಧಾನ ಪರಿಷತ್ ಸದಸ್ಯರು ಅಸಮಾಧಾನ ಹೊರ ಹಾಕಿದ್ದರು. ವಿಧಾನ ಪರಿಷತ್​ನ ಹಿರಿಯ ನಾಯಕ ಬಸವರಾಜ ಹೊರಟ್ಟಿ ಅವರು ಪರಿಷತ್​ನ ಸದಸ್ಯರನ್ನು ಸೇರಿಸಿ ಪ್ರತ್ಯೇಕ ಸಭೆ ನಡೆಸಿ ಮಾಧ್ಯಮಗಳ ಮುಂದೆಯೇ ತಮ್ಮ ಅಸಮಾಧಾನ ಹೊರ ಹಾಕಿದ್ದರು.

ನಂತರ ಜೆಡಿಎಸ್ ವರಿಷ್ಠ ಹೆಚ್ ಡಿ ದೇವೇಗೌಡರು, ಪರಿಷತ್ ಸದಸ್ಯರು ಹಾಗೂ ಶಾಸಕರನ್ನು ತಮ್ಮ ನಿವಾಸಕ್ಕೆ ಕರೆಸಿಕೊಂಡು ಮೈತ್ರಿ ಸರ್ಕಾರವಿದ್ದಾಗ ಆದ ತಪ್ಪುಗಳನ್ನು ಒಪ್ಪಿಕೊಂಡಿದ್ದರು. ಮೈತ್ರಿ ಸರ್ಕಾರದ ಅವಧಿಯಲ್ಲಿ ಇದ್ದ ಪರಿಸ್ಥಿತಿ ಬಗ್ಗೆ ವಿವರಿಸಿ ಸಮಾಧಾನ ಪಡಿಸಿದ್ದರು. ಆದರೂ, ಸಮಾಧಾನಗೊಳ್ಳದ ಕೆಲ ಶಾಸಕರು ಹಾಗೂ ಪರಿಷತ್ ಸದಸ್ಯರು ನಾಯಕರಿಂದ ಹಾಗೂ ಪಕ್ಷದ ಕಾರ್ಯಕ್ರಮಗಳಿಂದ ದೂರ ಉಳಿದಿದ್ದಾರೆ. ಇದು ವರಿಷ್ಠರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.

ಅಸಮಾಧಾನದ ಸ್ಫೋಟ ಮತ್ತೆ ಬಹಿರಂಗ : ಇತ್ತೀಚೆಗೆ ಅರಮನೆ ಮೈದಾನದಲ್ಲಿ ಏರ್ಪಡಿಸಿದ್ದ ಸಮಾವೇಶಕ್ಕೂ ಕೆಲ ಶಾಸಕರು ಗೈರಾಗಿದ್ದರು. ಅದೇ ರೀತಿ ಜೆಡಿಎಸ್ ರಾಷ್ಟ್ರೀಯ ಕಾರ್ಯಕಾರಿಣಿ ಮತ್ತು ಸಮಾವೇಶದಲ್ಲೂ ಬಹುತೇಕ ನಾಯಕರು ಹಾಜರಿರಲಿಲ್ಲ. ಮಾಜಿ ಸಚಿವ ಜಿ ಟಿ ದೇವೇಗೌಡರು ಮೈತ್ರಿ ಸರ್ಕಾರದಲ್ಲಿ ಖಾತೆ ಹಂಚಿಕೆ ಆದಾಗಿನಿಂದಲೂ ನಾಯಕರ ವಿರುದ್ಧ ಮುನಿಸಿಕೊಂಡಿದ್ದರು. ಕಾಂಗ್ರೆಸ್-ಜೆಡಿಎಸ್ ಸರ್ಕಾರ ಪತನಗೊಂಡ ನಂತರ ಜಿ ಟಿ ದೇವೇಗೌಡರು ಪಕ್ಷದಿಂದ ದೂರವೇ ಉಳಿದರು. ಇತ್ತೀಚಿಗೆ ನಡೆದ ವಿಧಾನಪರಿಷತ್ ಚುನಾವಣೆಯಲ್ಲಿ ಜಿಟಿಡಿ ಬಿಜೆಪಿ ಅಭ್ಯರ್ಥಿ ಪರ ಮತ ಚಲಾಯಿಸಿ ಇದೀಗ ಜೆಡಿಎಸ್ ವರಿಷ್ಠರಿಗೆ ಸೆಡ್ಡು ಹೊಡೆದಿದ್ದಾರೆ.

ಪಕ್ಷದ ವಿರುದ್ಧ ಜಿಟಿಡಿ ನಡೆದುಕೊಂಡಿದ್ದರೂ ಕ್ರಮಕೈಗೊಳ್ಳಲು ವರಿಷ್ಠರು ಹಿಂದೇಟು ಹಾಕುತ್ತಿರುವುದೇಕೆ? ಎಂಬ ಪ್ರಶ್ನೆ ಎದ್ದಿದೆ. ಒಂದು ವೇಳೆ ಅವರ ಮೇಲೆ ಕ್ರಮ ಜರುಗಿಸಿದರೆ ಈಗಾಗಲೇ ಅಸಮಾಧಾನಗೊಂಡ ಶಾಸಕರು ತಿರುಗಿ ಬೀಳಬಹುದೆಂಬ ಆತಂಕ ಇದೆ ಎಂದು ಹೇಳಲಾಗುತ್ತಿದೆ. ವಿಧಾನಸೌಧದಲ್ಲಿ ಫೆ.17ರಂದು ಜೆಡಿಎಸ್ ಶಾಸಕಾಂಗ ಸಭೆ ಕರೆಯಲಾಗಿತ್ತು. ಆ ದಿನ ಕುಮಾರಸ್ವಾಮಿ ಅವರು ಕಚೇರಿಯಲ್ಲೇ ಇದ್ದರೂ ಕೆಲವೇ ಮಂದಿ ಶಾಸಕರು ಬಂದು ಭೇಟಿ ಮಾಡಿ ಮಾತನಾಡಿದರು. ಮತ್ತೆ ಕೆಲವರು ಕಾರಿಡಾರ್​ನಲ್ಲಿ ಕಾಲ ಕಳೆದರು. ಇದಾದ ಎರಡು ದಿನಗಳ ನಂತರ ಖಾಸಗಿ ಹೋಟೆಲ್​ನಲ್ಲಿ ಕರೆಯಲಾಗಿದ್ದ ಶಾಸಕಾಂಗ ಪಕ್ಷದ ಸಭೆಗೆ ದೇವೇಗೌಡರೇ ಬಂದಿದ್ದರು. ಆದರೆ, ಆ ಸಭೆಗೂ ಕೆಲ ಶಾಸಕರು ಹಾಗೂ ವಿಧಾನಪರಿಷತ್ ಸದಸ್ಯರು ಗೈರಾಗಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.