ಆನೇಕಲ್(ಪರಪ್ಪನ ಅಗ್ರಹಾರ): ಅಕ್ರಮ ಆಸ್ತಿಗಳಿಕೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಜೈಲುಶಿಕ್ಷೆ ಅನುಭವಿಸುತ್ತಿರುವ ದಿ. ಜಯಲಲಿತಾ ಅವರ ಸಾಕುಮಗ ವಿ.ಎನ್. ಸುಧಾಕರನ್ ಶನಿವಾರ ಬಿಡುಗಡೆಯಾಗುವ ಸಾಧ್ಯತೆ ಇದೆ.
ಚಿನ್ನಮ್ಮ ಶಶಿಕಲಾ ಬಿಡುಗಡೆ ಸಂದರ್ಭದಲ್ಲಿ ಬೆಂಗಳೂರು ವಿಶೇಷ ನ್ಯಾಯಾಲಯ ವಿಧಿಸಿದ್ದ ಮೊತ್ತ 10 ಕೋಟಿ ಪಾವತಿಸದ ಕಾರಣಕ್ಕೆ ಒಂದು ವರ್ಷ ಸೆರೆವಾಸ ಅನುಭವಿಸುವಂತಾಗಿತ್ತು. ಮುಂದಿನ ಶನಿವಾರಕ್ಕೆ ಒಂದು ವರ್ಷದ ಶಿಕ್ಷೆಯ ಗಡುವು ಮುಗಿಯುವುದರಿಂದ ಬಿಡುಗಡೆಗೆ ಸಿದ್ಧತೆ ನಡೆದಿದೆ.
ದಸರಾ ನಿಮಿತ್ತ ಇಂದು ಮತ್ತು ನಾಳೆ ಸರ್ಕಾರಿ ಕಚೇರಿಗಳು ರಜೆಯಲ್ಲಿದ್ದು, ಶನಿವಾರ ಬಿಡುಗಡೆಯಾಗುವ ನಿರೀಕ್ಷೆ ಇದೆ. ಅದಲ್ಲದೆ, ಹತ್ತು ಸಾವಿರ ಜುಲ್ಮಾನೆ ಬಾಕಿ ಇದ್ದು ಮೊನ್ನೆ ವಿಶೇಷ ನ್ಯಾಯಾಲಯಕ್ಕೆ ಪಾವಿತಿಸಿರುವ ಹಿನ್ನೆಲೆಯಲ್ಲಿ ಸುಧಾಕರನ್ ಶಿಕ್ಷೆ ಶನಿವಾರಕ್ಕೆ ಅಂತ್ಯವಾಗುತ್ತದೆ.
ಶನಿವಾರ ನ್ಯಾಯಾಲಯದ ಆದೇಶ ಪ್ರತಿ ಜೈಲು ಅಧಿಕಾರಿಗಳಿಗೆ ತಲುಪಲಿದೆ. ಬಿಡುಗಡೆಯ ಪ್ರಕ್ರಿಯೆಗಳು ಮುಗಿಯುವಷ್ಟರಲ್ಲಿ ಸಂಜೆಯಾಗಬಹುದು ಎಂಬುದು ಸುಧಾಕರ್ ಸಂಬಂಧಿಗಳ ಅಭಿಪ್ರಾಯವಾಗಿದೆ.