ಬೆಂಗಳೂರು : ನಾಳೆ (ಶನಿವಾರ) ಇಸ್ರೋ ನಿರ್ಮಿತ ಆದಿತ್ಯ-ಎಲ್ 1 ಬಾಹ್ಯಾಕಾಶ ನೌಕೆ ಆಂಧ್ರಪ್ರದೇಶದ ಶ್ರೀಹರಿಕೋಟಾದಿಂದ ಉಡಾವಣೆಯಾಗಲಿದೆ. ಈ ಕುರಿತು ಈಟಿವಿ ಭಾರತಕ್ಕೆ ಜವಾಹರಲಾಲ್ ನೆಹರು ತಾರಾಲಯದ ನಿರ್ದೇಶಕ ಪ್ರಮೋದ್ ಜಿ.ಗಲಗಲಿ ಮಾಹಿತಿ ಹಂಚಿಕೊಂಡಿದ್ದಾರೆ.
ಆದಿತ್ಯ-ಎಲ್1 ಬಾಹ್ಯಾಕಾಶ ನೌಕೆ ಭೂಮಿಯನ್ನು ಹಲವಾರು ಬಾರಿ ಹಲವಾರು ಕಕ್ಷೆಗಳಲ್ಲಿ ಸುತ್ತುತ್ತಾ, ಕ್ರಮೇಣವಾಗಿ ದೂರ ಸರಿಯುತ್ತಾ ಭೂಮಿಯ ಗುರುತ್ವ ಪ್ರಭಾವದಿಂದಾಚೆ ಸಾಗಲಿದೆ. ಮುಂದೆ ಸುಮಾರು 4 ತಿಂಗಳ ಕಾಲದ ಪಯಣದಲ್ಲಿ ಭೂಮಿಯಿಂದ ಸುಮಾರು 15 ಲಕ್ಷ ಕಿ.ಮೀ ಗಳಷ್ಟು ದೂರದಲ್ಲಿ ಬಾಹ್ಯಾಕಾಶದಲ್ಲಿರುವ ಎಲ್ 1 ಬಿಂದು ತಲುಪುತ್ತದೆ. ಆ ಬಿಂದುವಿನಲ್ಲಿ ಭೂಮಿಯ ಗುರುತ್ವ ಪ್ರಭಾವ ಮತ್ತು ಸೂರ್ಯನ ಗುರುತ್ವ ಪ್ರಭಾವಗಳು ಸಮತೋಲನಗೊಳ್ಳುತ್ತವೆ. ಆದಿತ್ಯ-ಎಲ್ 1 ಯೋಜನೆಯಲ್ಲಿ ಈ ಬಿಂದುವನ್ನು ಕೇಂದ್ರೀಕರಿಸಿ ಸೂರ್ಯನ ಸುತ್ತ ಪರಿಭ್ರಮಿಸಲು ಯೋಜಿಸಲಾಗಿದೆ.
ಈ ನಿರ್ದಿಷ್ಟ ಸ್ಥಾನದಲ್ಲಿರಿಸಿದ ಉಪಗ್ರಹವು ಸಾಕಷ್ಟು ಪ್ರಮಾಣದಲ್ಲಿ ಸೌರಕಿರಣಗಳು ಹಾಗೂ ಕಣಗಳನ್ನು ಸಂಗ್ರಹಿಸಿ ತನ್ಮೂಲಕ ಸೂರ್ಯನ ಕೊರೋನ, ಹೊರವಲಯ ಮತ್ತು ಎಲ್ 1 ಸ್ಥಳದಲ್ಲಿರುವ ಕ್ಷೇತ್ರಗಳಲ್ಲಿ ಹೊರಹೊಮ್ಮುವ ಕಾಂತೀಯ ಕುರಿತಾದ ಅಪಾರ ದತ್ತಾಂಶವನ್ನು ಒದಗಿಸಲಿದೆ. ಇವುಗಳ ಅಧ್ಯಯನದಿಂದ ನಮ್ಮ ಸಮೀಪದ ನಕ್ಷತ್ರವಾದ ಸೂರ್ಯನನ್ನು ಇನ್ನೂ ಉತ್ತಮವಾಗಿ, ಸಮಗ್ರವಾಗಿ ಅರ್ಥಮಾಡಿಕೊಳ್ಳುವುದು ಸಾಧ್ಯವಾಗುತ್ತದೆ.
-
Here is the brochure: https://t.co/5tC1c7MR0u
— ISRO (@isro) September 1, 2023 " class="align-text-top noRightClick twitterSection" data="
and a few quick facts:
🔸Aditya-L1 will stay approximately 1.5 million km away from Earth, directed towards the Sun, which is about 1% of the Earth-Sun distance.
🔸The Sun is a giant sphere of gas and Aditya-L1 would study the… pic.twitter.com/N9qhBzZMMW
">Here is the brochure: https://t.co/5tC1c7MR0u
— ISRO (@isro) September 1, 2023
and a few quick facts:
🔸Aditya-L1 will stay approximately 1.5 million km away from Earth, directed towards the Sun, which is about 1% of the Earth-Sun distance.
🔸The Sun is a giant sphere of gas and Aditya-L1 would study the… pic.twitter.com/N9qhBzZMMWHere is the brochure: https://t.co/5tC1c7MR0u
— ISRO (@isro) September 1, 2023
and a few quick facts:
🔸Aditya-L1 will stay approximately 1.5 million km away from Earth, directed towards the Sun, which is about 1% of the Earth-Sun distance.
🔸The Sun is a giant sphere of gas and Aditya-L1 would study the… pic.twitter.com/N9qhBzZMMW
ನೌಕೆಯ ಮೂಲಕ ಏಳು ಪೇ ಲೋಡ್‌ಗಳು (ಉಪಕರಣಗಳು) ಎಲ್ 1 ಬಿಂದುವನ್ನು ತಲುಪಿ ಸೂರ್ಯನ ಕುರಿತು ಸಮಗ್ರ ಅಧ್ಯಯನ ನಡೆಸಲಿದೆ. "ಅಸ್ಪ್ಸ್" ಎನ್ನುವ ಪೇ ಲೋಡ್ ಅನ್ನು ಅಹಮದಾಬಾದ್‌ನ ಭೌತಿಕ ಸಂಶೋಧನಾ ಪ್ರಯೋಗಾಲಯದಲ್ಲಿ ಸಿದ್ಧಪಡಿಸಲಾಗಿದ್ದು, ಸೌರಮಾರುತ ಮತ್ತು ಶಕ್ತಿಯುತ ಕಣಗಳು ಹಾಗು ಅವುಗಳ ಚಲನಶಕ್ತಿಯ ವ್ಯಾಪಕತೆಯನ್ನು ಅಧ್ಯಯನ ಮಾಡಲಿದೆ.
"ಪಾಪ" ಅನ್ನು ವಿಕ್ರಮ್ ಸಾರಾಭಾಯ್ ಬಾಹ್ಯಾಕಾಶ ಕೇಂದ್ರ ತಿರುವನಂತಪುರಂನಲ್ಲಿ ಸಿದ್ದಪಡಿಸಲಾಗಿದೆ. "ಸೋಲೆಸ್ಸ್" ಮತ್ತು ಅತಿಶಕ್ತಿಯ "ಎಲ್ 1 ಕಕ್ಷೀಯ ಕ್ಷ- ಕಿರಣ ರೋಹಿತಮಾಪಕ" (ಹೆಲ್ 1 ಓಎಸ್) ಸೌರಜ್ವಾಲೆಗಳ ಚಲನಶಕ್ತಿಯ ವ್ಯಾಪಕತೆಯನ್ನು ಅಧ್ಯಯನ ಮಾಡತ್ತದೆ. ಈ ಎರಡೂ ಪೇ ಲೋಡ್‌ಗಳನ್ನು ಬೆಂಗಳೂರಿನ ಯು.ಆರ್.ರಾವ್ ಉಪಗ್ರಹ ಕೇಂದ್ರದಲ್ಲಿ ಸಿದ್ಧಪಡಿಸಲಾಗಿದೆ.
"ರೋಡ್ಆರ್ ಕೋಡೆಡ್" ಪೇ ಲೋಡ್ ಕರೋನ ದ್ರವ್ಯ ಉತ್ಸರ್ಜನಾ ಕ್ರಿಯಾತ್ಮಕತೆಯ ಅಧ್ಯಯನ ಮಾಡಲಿದೆ. ಇದನ್ನು ಇಸ್ರೋದ ಸಹಯೋಗದೊಂದಿಗೆ ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್- ಆಫ್ ಆಸ್ಟೋಫಿಸಿಕ್ಸ್‌ನಲ್ಲಿ ರೂಪುಗೊಳಿಸಲಾಗಿದ್ದು, ಬೆಂಗಳೂರಿನ ಕ್ರೆಸ್ಟ್ ಸಂಸ್ಥೆಯಲ್ಲಿ ಒಗ್ಗೂಡಿಸಲಾಗಿದೆ.
ಅಲ್ಲದೆ, ಸೋಲಾರ್ ಅಲ್ವಾವಯಲೆಟ್ ಇಮೇಜಿಂಗ್ ಟೆಲಿಸ್ಕೊಪ್ ಸೂರ್ಯನ ಪ್ರಭಾವಲಯ ಮತ್ತು ವರ್ಣಗೋಳವನ್ನು ಚಿತ್ರಿಸುತ್ತದೆ ಹಾಗು ಸೌರಪ್ರದೀಪನದ ಏರುಪೇರುಗಳನ್ನು ಅತಿನೇರಳೆ ಕಿರಣಗಳ ಮೂಲಕ ಮಾಪನ ಮಾಡುತ್ತದೆ. ಇದನ್ನು ಐಯುಸಿಎಎ ಸಂಸ್ಥೆಯಲ್ಲಿ ಇಸ್ರೋದ ಸಹಯೋಗದೊಂದಿಗೆ ಸಿದ್ಧಪಡಿಸಲಾಗಿದೆ. "ಕಾಂತತ್ವಮಾಪಕ" ಎಲ್1 ಸ್ಥಳದಲ್ಲಿನ ಕಾಂತಕ್ಷೇತ್ರವನ್ನು ಅಳೆಯುವ ಕ್ಷಮತೆಯನ್ನು ಹೊಂದಿದೆ. ಈ ಪೇ ಲೋಡ್ ಅನ್ನು ಬೆಂಗಳೂರಿನ ಎಲೆಕ್ಟೋ ಆಪ್ಟಿಕ್ಸ್ ಸಿಸ್ಟಮ್ಸ್ ಪ್ರಯೋಗಾಲಯದಲ್ಲಿ ಸಿದ್ಧಪಡಿಸಲಾಗಿದೆ ಎಂದು ಪ್ರಮೋದ್ ವಿವರಿಸಿದರು.
ಇದನ್ನೂ ಓದಿ : ಆದಿತ್ಯ ಎಲ್-1 ಸಿದ್ಧತೆ ಪೂರ್ಣ... ಭರದಿಂದ ಸಾಗಿದ ರಾಕೆಟ್ ಜೋಡಣೆ ಕಾರ್ಯ...