ಬೆಂಗಳೂರು: ಸಾರ್ವಜನಿಕರಿಗೆ ಹತ್ತಿರವಾಗಲು ಪೊಲೀಸ್ ಇಲಾಖೆ ಇದೇ 28ರಂದು ಜನಸಂಪರ್ಕ ದಿನ ಎಂಬ ಕಾರ್ಯಕ್ರಮವನ್ನು ಆಯೋಜಿಸಿದೆ. ಈ ಕಾರ್ಯಕ್ರಮದಲ್ಲಿ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್, ಹೆಚ್ಚುವರಿ ಪೊಲೀಸ್ ಆಯುಕ್ತರುಗಳು, ಡಿಸಿಪಿಗಳು ಭಾಗಿಯಾಗಲಿದ್ದಾರೆ.
ನಾಳೆ ಬೆಳಗ್ಗೆ 11ಗಂಟೆಯಿಂದ ಮಧ್ಯಾಹ್ನ 1ಗಂಟೆಯವರೆಗೆ ಬೆಂಗಳೂರಿನ ಹಿರಿಯ ಅಧಿಕಾರಿಗಳು ಈ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಕಾರ್ಯಕ್ರಮದಲ್ಲಿ ಸಾರ್ವಜನಿಕರು ಯಾವುದೇ ದೂರುಗಳು, ಪ್ರಶ್ನೆಗಳು ಅಥವಾ ಕಳಕಳಿಯನ್ನು ಚರ್ಚಿಸಲು ಇಲ್ಲಿ ಮುಕ್ತವಾದ ಅವಕಾಶ ಇರುತ್ತದೆ. ಕೆಲವರಿಗೆ ಪೊಲೀಸರೆಂದರೇ ಭಯ, ಇನ್ನು ಕೆಲವರಿಗೆ ಠಾಣೆಗೆ ತೆರಳಲು ಕಷ್ಡವಾಗುವ ಕಾರಣ ಪುಲಕೇಶಿನಗರ ಹಾಗೂ ಮಲ್ಲೇಶ್ವರಂ ಠಾಣೆಯಲ್ಲಿ ಖುದ್ದಾಗಿ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಇರಲಿದ್ದಾರೆ.
-
ನಿಮ್ಮ ಪ್ರಶ್ನೆ ಮತ್ತು ಅಹವಾಲುಗಳನ್ನು ನಮ್ಮೊಂದಿಗೆ ಹಂಚಿಕೊಳ್ಳಿ! “ಮಾಸಿಕ ಜನ ಸಂಪರ್ಕ ದಿವಸ”, ಬಿಸಿಪಿಯ ಉಪಕ್ರಮ.
— Kamal Pant, IPS (@CPBlr) November 27, 2020 " class="align-text-top noRightClick twitterSection" data="
ದಿನಾಂಕ 28ನೇ ನವೆಂಬರ್ 2020, ಶನಿವಾರ ಬೆಳಿಗ್ಗೆ 11:00 ಗಂಟೆಯಿಂದ ಮಧ್ಯಾಹ್ನ 01:00 ಗಂಟೆಯವರೆಗೆ. pic.twitter.com/5ZhA7EYg1b
">ನಿಮ್ಮ ಪ್ರಶ್ನೆ ಮತ್ತು ಅಹವಾಲುಗಳನ್ನು ನಮ್ಮೊಂದಿಗೆ ಹಂಚಿಕೊಳ್ಳಿ! “ಮಾಸಿಕ ಜನ ಸಂಪರ್ಕ ದಿವಸ”, ಬಿಸಿಪಿಯ ಉಪಕ್ರಮ.
— Kamal Pant, IPS (@CPBlr) November 27, 2020
ದಿನಾಂಕ 28ನೇ ನವೆಂಬರ್ 2020, ಶನಿವಾರ ಬೆಳಿಗ್ಗೆ 11:00 ಗಂಟೆಯಿಂದ ಮಧ್ಯಾಹ್ನ 01:00 ಗಂಟೆಯವರೆಗೆ. pic.twitter.com/5ZhA7EYg1bನಿಮ್ಮ ಪ್ರಶ್ನೆ ಮತ್ತು ಅಹವಾಲುಗಳನ್ನು ನಮ್ಮೊಂದಿಗೆ ಹಂಚಿಕೊಳ್ಳಿ! “ಮಾಸಿಕ ಜನ ಸಂಪರ್ಕ ದಿವಸ”, ಬಿಸಿಪಿಯ ಉಪಕ್ರಮ.
— Kamal Pant, IPS (@CPBlr) November 27, 2020
ದಿನಾಂಕ 28ನೇ ನವೆಂಬರ್ 2020, ಶನಿವಾರ ಬೆಳಿಗ್ಗೆ 11:00 ಗಂಟೆಯಿಂದ ಮಧ್ಯಾಹ್ನ 01:00 ಗಂಟೆಯವರೆಗೆ. pic.twitter.com/5ZhA7EYg1b
ಮುರುಗನ್ ಹೆಚ್ಚುವರಿ ಆಯುಕ್ತರು ಪುಲಕೇಶಿನಗರ, ಬಾಣಸವಾಡಿ ಠಾಣೆ, ಸೌಮೇಂದ್ರ ಮುಖರ್ಜಿ ಹನುಮಂತ ನಗರ ಪೊಲೀಸ್ ಠಾಣೆ, ಬ್ಯಾಟರಾಯನಪುರ, ಸಂದೀಪ್ ಪಾಟೀಲ್ ಸಿಸಿಬಿ ಕಚೇರಿ, ಎಂಎನ್ ಅನುಚೇತ್ ಅಶೋಕನಗರ, ಇಶಾಪಂತ್ ಪುಲಕೇಶಿನಗರ, ಹೀಗೆ ಆಯ್ಕೆ ಠಾಣೆಗಳಲ್ಲಿ ಹಿರಿಯಾಧಿಕಾರಿಗಳು ಖುದ್ದಾಗಿ ಇದ್ದು ಜನರ ಸಮಸ್ಯೆ ಆಲಿಸಲಿದ್ದಾರೆ. ಇಲ್ಲಿ ಯಾರು ಬೇಕಾದರು ಬಂದು ಮುಕ್ತವಾಗಿ ಹಿರಿಯ ಅಧಿಕಾರಿಗಳ ಜೊತೆ ತಮ್ಮ ತೊಂದರೆಗಳನ್ನು ಹೇಳಿಕೊಳ್ಳಬಹುದು.