ETV Bharat / state

ಪಾದರಾಯನಪುರ ಗಲಭೆ ಸಮರ್ಥಿಸಿಕೊಂಡ ಶಾಸಕ: ಮಾಧ್ಯಮದವರ ಪ್ರಶ್ನೆಗೆ ಜಮೀರ್ ಗರಂ - ಜೆ.ಜೆ ನಗರ ಠಾಣಾ ವ್ಯಾಪ್ತಿ

ಪಾದರಾಯನಪುರ 57 ಜನ ಹೋಟೆಲ್ ಕ್ವಾರಂಟೈನ್ ಅಗಬೇಕು ಎಂದು ಅಧಿಕಾರಿಗಳು ಹೇಳಿದ್ದರು. ನಾನು ಅವರ ಬಳಿ ಮಾತನಾಡಿ, ರಾತ್ರಿ ಬೇಡ ಬೆಳಗ್ಗೆ ಹೋಗಿ, ಅಲ್ಲಿ ಭಯದ ವಾತವಾರಣ ಸೃಷ್ಟಿಯಾಗುತ್ತೆ. ಅಲ್ಲಿರುವವರು ಮುಗ್ಧರು ಹಾಗೂ ಬಡವರು ಎಂದು ಹೇಳಿದ್ದರೂ ಕೂಡ ಏಕಾಏಕಿ ರಾತ್ರಿ ಕಾರ್ಯಾಚರಣೆಗೆ ಅಧಿಕಾರಿಗಳು ಹೋಗಿದ್ದರು ಎಂದು ಶಾಸಕ ಜಮೀರ್ ಅಹ್ಮದ್​ ಪಾದರಾಯನಪುರದ ಗಲಭೆಯನ್ನು​​ ಸಮರ್ಥಿಸಿಕೊಂಡಿದ್ದಾರೆ.

ಶಾಸಕ ಜಮೀರ್
ಶಾಸಕ ಜಮೀರ್
author img

By

Published : Apr 20, 2020, 1:17 PM IST

ಬೆಂಗಳೂರು: ಪಾದರಾಯನಪುರ ಘಟನಾ ಸ್ಥಳಕ್ಕೆ ಶಾಸಕ ಜಮೀರ್ ಅಹ್ಮದ್​ ಭೇಟಿಯಾಗಿ ಸ್ಥಳದ ಪರಿಶೀಲಿಸಿದರು. ಬಳಿಕ ಮಾಧ್ಯಮದ ಪ್ರಶ್ನೆಗಳಿಗೆ ಸಿಡಿಮಿಡಿಗೊಂಡು ಅಲ್ಲಿಂದ ಕಾಲ್ಕಿತ್ತರು.

ಜೆ.ಜೆ. ನಗರ ಠಾಣಾ ವ್ಯಾಪ್ತಿಯ ಬಳಿ ಮಾಧ್ಯಮಗಳೊಂದಿಗೆ ಮಾತಡಿನಾಡಿದ ಅವರು, ನಿನ್ನೆರಾತ್ರಿ ನಡೆದ ಗಲಾಟೆಯನ್ನು ನಾನು ಖಂಡಿಸುತ್ತೇನೆ, ಗಲಾಟೆ ಆಗಬಾರದಿತ್ತು. ಪಾದರಾಯಪುರಕ್ಕೆ ಶನಿವಾರ ಬಿಬಿಎಂಪಿ ಕಮಿಷನರ್ ಬಂದು ಅಲ್ಲಿನ 57 ಜನ ಹೋಟೆಲ್ ಕ್ವಾರಂಟೈನ್ ಅಗಬೇಕು ಎಂದು ಹೇಳಿದ್ದರು. ನಾನು ಅವರ ಬಳಿ ಮಾತನಾಡಿ, ರಾತ್ರಿ ಹೋದರೆ ಅಲ್ಲಿ ಭಯದ ವಾತವಾರಣ ಸೃಷ್ಟಿಯಾಗುತ್ತೆ. ಹಾಗಾಗಿ ಬೆಳಗ್ಗೆ ಸ್ಥಳಕ್ಕೆ ಹೋಗೋಣ ಎಂದಿದ್ದೆ. ಅಲ್ಲಿರುವವರು ಮುಗ್ಧರು ಹಾಗೂ ಬಡವರು ಎಂದು ಹೇಳಿದ್ದರೂ ಕೂಡ ಏಕಾಏಕಿ ರಾತ್ರಿ ಕಾರ್ಯಾಚರಣೆಗೆ ತೆರಳಿದ್ದಾರೆ ಎನ್ನುವ ಮೂಲಕ ಜಮೀರ್ ಗಲಾಟೆಯನ್ನು​​ ಸಮರ್ಥಿಸಿಕೊಂಡಿದ್ದಾರೆ.

ಮಾಧ್ಯಮಗೊಳೊಂದಿಗೆ ಮಾತನಾಡಿದ ಶಾಸಕ ಜಮೀರ್​​ ಅಹ್ಮದ್​​ ಖಾನ್​

ಪರೋಕ್ಷವಾಗಿ ಜಮೀರ್ ಅಹ್ಮದ್​ ಗಲಾಟೆ ಮಾಡಿದವರಿಗೆ ಸಹಕರಿಸುತ್ತಿದ್ದಾರೆ ಎಂಬ ಹೇಳಿಕೆಗೆ ಸಿಡಿಮಿಡಿಗೊಂಡರು. ಮಾಧ್ಯಮದವರ ಪ್ರಶ್ನೆಗೆ ಉತ್ತರಿಸದೇ ಅಲ್ಲಿಂದ ಕಾಲ್ಕಿತ್ತರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.