ಹುಬ್ಬಳ್ಳಿ: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದಲ್ಲಿ ಎಫ್ಐಆರ್ ದಾಖಲಾಗದಿದ್ದರೂ ಎಸ್ಐಟಿ ಮೂಲಕ ತನಿಖೆ ನಡೆಸುವ ಅಧಿಕಾರ ಸರ್ಕಾರಕ್ಕೆ ಇದೆ ಎಂದು ಸಚಿವ ಜಗದೀಶ್ ಶೆಟ್ಟರ್ ಹೇಳಿದರು.
ನಗರದಲ್ಲಿನ ಗ್ಲಾಸ್ ಹೌಸ್ ಕಾಮಗಾರಿ ವೀಕ್ಷಣೆ ನಂತರ ಮಾತನಾಡಿದ ಅವರು, ಷಡ್ಯಂತ್ರ ನಡೆದಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಎಸ್ಐಟಿ ತನಿಖೆಯಿಂದ ನಿಜಾಂಶ ಹೊರ ಬರಲಿದೆ. ಅದಕ್ಕೂ ಮುನ್ನ ಷಡ್ಯಂತ್ರ ಯಾರು ಮಾಡಿದ್ದಾರೆ ಎಂದು ಹೇಗೆ ಹೇಳಲಿ ಎಂದರು.
ಓದಿ: ದೂರು ತೆಗೆದುಕೊಳ್ಳುವ ಬಗ್ಗೆ ಎಸ್ಐಟಿ ಮುಖ್ಯಸ್ಥರು ತೀರ್ಮಾನಿಸುತ್ತಾರೆ: ಸಚಿವ ಬೊಮ್ಮಾಯಿ
ಇನ್ನು ರಾಮನಗರದ ಹರಿಜನ ಸ್ಕೂಲ್ ಗೊಂದಲದ ಬಗ್ಗೆ ಮಾತಾನಾಡಿ, ಸೊಸೈಟಿ ಈಗಾಗಲೇ ಡಾಕ್ಯುಮೆಂಟ್ಸ್ ನೀಡಿ ಕಾನೂನು ಪ್ರಕಾರವೇ ನಾವು ಒತ್ತುವರಿ ಮಾಡಿಕೊಂಡಿದ್ದೇವೆ ಎಂದು ಹೇಳಿದ್ದಾರೆ. ನಾನು ಎರಡು ಕಡೆಯಿಂದ ನೋಡಿದ್ದೇನೆ. ಇವರ ನಡವೆ ಮಕ್ಕಳಿಗೆ ತೊಂದ್ರೆ ಆಗಬಾರದು. ಅದಕ್ಕೆ ಸಂಬಂಧಿಸಿದಂತೆ ಒಂದು ಪರ್ಯಾಯ ವ್ಯವಸ್ಥೆ ಮಾಡುತ್ತೇನೆ ಎಂದರು.