ETV Bharat / state

ಬೆಂಗಳೂರಿಗೆ ಉಪರಾಷ್ಟ್ರಪತಿ ಜಗದೀಪ್ ಧನ್ಕರ್ ಭೇಟಿ: ಪರ್ಯಾಯ ಸಂಚಾರ ಮಾರ್ಗ ಬಳಸಲು ಸಾರ್ವಜನಿಕರಿಗೆ ಸೂಚನೆ

ಇಂದು ಬೆಂಗಳೂರಿಗೆ ಆಗಮಿಸುವ ಉಪರಾಷ್ಟ್ರಪತಿ ಜಗದೀಪ್ ಧನ್ಕರ್​ ನಾಳೆ ಡಾ ಎಂ ಎಸ್ ರಾಮಯ್ಯ ಅವರ ಜನ್ಮಶತಮಾನೋತ್ಸವದಲ್ಲಿ ಭಾಗವಹಿಸಲಿದ್ದಾರೆ.​

Vice President Jagadeep Dhankar
ಉಪರಾಷ್ಟ್ರಪತಿ ಜಗದೀಪ್ ಧನ್ಕರ್
author img

By

Published : Feb 28, 2023, 1:20 PM IST

Updated : Feb 28, 2023, 2:04 PM IST

ಬೆಂಗಳೂರು: ಇಂದು ಬೆಂಗಳೂರಿಗೆ ಉಪರಾಷ್ಟ್ರಪತಿ ಜಗದೀಪ್ ಧನ್ಕರ್ ಭೇಟಿ ನೀಡಲಿರುವ ಹಿನ್ನೆಲೆಯಲ್ಲಿ ನಗರದ ಹಲವು ರಸ್ತೆಗಳಲ್ಲಿ ಸಂಚಾರ ನಿರ್ಬಂಧ ವಿಧಿಸಿ ಬೆಂಗಳೂರು ಸಂಚಾರಿ ಪೊಲೀಸರು ಪ್ರಕಟಣೆ ಹೊರಡಿಸಿದ್ದಾರೆ‌. ಇಂದು ಸಂಜೆ 4 ರಿಂದ 6ರವರೆಗೆ ಕೆಲ ರಸ್ತೆಗಳಲ್ಲಿ ಸಂಚಾರ ದಟ್ಟಣೆ ಹೆಚ್ಚಾಗುವ ಸಾಧ್ಯತೆಯಿದ್ದು, ಸಾರ್ವಜನಿಕರು ಸಹಕರಿಸುವಂತೆ ಮನವಿ ಮಾಡಲಾಗಿದೆ.

ನಗರದ ಓಲ್ಡ್ ಏರ್​ಪೋರ್ಟ್ ರಸ್ತೆ, ಇನ್​ಫ್ಯಾಂಟ್ರಿ ರಸ್ತೆ, ರಾಜಭವನ ರಸ್ತೆ, ಕಬ್ಬನ್ ರಸ್ತೆ, ಕ್ವೀನ್ಸ್ ರಸ್ತೆ ಹಾಗೂ ಎಂ.ಜಿ. ರಸ್ತೆಗಳಲ್ಲಿ ಇಂದು ಸಂಜೆ 4 ರಿಂದ 6ರವರೆಗೆ ಸಂಚಾರ ದಟ್ಟಣೆ ಏರ್ಪಡುವ ಸಾಧ್ಯತೆ ಇರುವುದರಿಂದ ಈ ರಸ್ತೆಗಳನ್ನು ಬಳಸದೇ ಬೇರೆ ಮಾರ್ಗದಲ್ಲಿ ಸಂಚರಿಸಲು ಸೂಚಿಸಲಾಗಿದೆ.

Traffic Advisory
ಮಾರ್ಗ ಬದಲಾವಣೆ

ನಾಳೆ ಎಂ.ಎಸ್. ರಾಮಯ್ಯನಗರದ ಜ್ಞಾನ ಗಂಗೋತ್ರಿ ಕ್ಯಾಂಪಸ್​ನಲ್ಲಿ ನಡೆಯಲಿರುವ ಗೋಕುಲ ಶಿಕ್ಷಣ ಪ್ರತಿಷ್ಠಾನದ ಸಂಸ್ಥಾಪಕರಾದ ದಿವಂಗತ ಡಾ.ಎಂ.ಎಸ್. ರಾಮಯ್ಯರ ಜನ್ಮಶತಮಾನೋತ್ಸವದಲ್ಲಿ ಉಪರಾಷ್ಟ್ರಪತಿ ಜಗದೀಪ್ ಧನ್ಕರ್ ಭಾಗಿಯಾಗಲಿದ್ದಾರೆ.

ತಮಿಳುನಾಡಿನ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿರುವ ಉಪರಾಷ್ಟ್ರಪತಿ: ಉಪರಾಷ್ಟ್ರಪತಿ ಜಗದೀಪ್​ ಧನ್ಕರ್​ ಮೊದಲ ಬಾರಿಗೆ ಇಂದು ತಮಿಳುನಾಡಿಗೆ ಭೇಟಿ ನೀಡಿದ್ದು, ಚೆನ್ನೈ ವಿಮಾನ ನಿಲ್ದಾಣದಲ್ಲಿ ಇಳಿದ ಉಪರಾಷ್ಟ್ರಪತಿಯನ್ನು ತಮಿಳುನಾಡಿನ ರಾಜ್ಯಪಾಲ ಆರ್.ಎನ್.ರವಿ, ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಮತ್ತು ಇತರ ಗಣ್ಯರು ಬರಮಾಡಿಕೊಂಡರು. ತಮಿಳುನಾಡಿಗೆ ಭೇಟಿ ನೀಡಿರುವ ಉಪರಾಷ್ಟ್ರಪತಿ ಜಗದೀಪ್​ ಧನ್ಕರ್​ ಅವರು ಇತ್ತೀಚೆಗೆ ನಿರ್ಮಿಸಲಾದ ಸುಧಾ ಮತ್ತು ಶಂಕರ್ ಇನ್ನೋವೇಶನ್ ಹಬ್‌ನಲ್ಲಿರುವ ಐಐಟಿ ಮದ್ರಾಸ್ ಸೆಂಟರ್ ಫಾರ್ ಇನ್ನೋವೇಶನ್ (CFI) ನ ಹೊಸ ಲ್ಯಾಬ್​ ಒಂದನ್ನು ಇಂದು ಉದ್ಘಾಟಿಸಿದ್ದಾರೆ.

ತಮಿಳುನಾಡಿನಿಂದ ಕರ್ನಾಟಕಕ್ಕೆ ಆಗಮನ: ಈ ಕೇಂದ್ರವು ವಿದ್ಯಾರ್ಥಿಗಳು ಮತ್ತು ಸಂಶೋಧಕರ ನಾವೀನ್ಯತೆ ಮತ್ತು ಉದ್ಯಮಶೀಲತೆ (I&E) ಚಟುವಟಿಕೆಗಳನ್ನು ಬೆಂಬಲಿಸಲು ಮತ್ತು ಪ್ರೋತ್ಸಾಹಿಸಲು ಸಮರ್ಪಿಸಲಾಗಿದೆ. ಲ್ಯಾಬ್​ ಉದ್ಘಾಟಿಸಿದ ನಂತರ ಇನ್ನೋವೇಶನ್​ ಸೆಂಟರ್​ನ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ್ದಾರೆ. ಈ ಕಾರ್ಯಕ್ರಮದ ನಂತರ ನಾಳೆ ಡಾ.ಎಂ.ಎಸ್. ರಾಮಯ್ಯರ ಜನ್ಮಶತಮಾನೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಲು ತಮಿಳುನಾಡಿನಿಂದ ಇಂದು ಸಂಜೆ ಕರ್ನಾಟಕಕ್ಕೆ ಆಗಮಿಸಲಿದ್ದಾರೆ.

ಇದನ್ನೂ ಓದಿ: ಉಸಿರಿರುವ ತನಕ ನಿಮ್ಮ ಸೇವೆ ಮಾಡುವೆ: ಶಿಗ್ಗಾಂವಿ ಜನರಿಗೆ ಸಿಎಂ ಬೊಮ್ಮಾಯಿ ಭರವಸೆ

Last Updated : Feb 28, 2023, 2:04 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.