ETV Bharat / state

ಕಾಂಗ್ರೆಸ್​ ಸೇರಿದ ಜಗದೀಶ್ ಶೆಟ್ಟರ್.. 150 ಸ್ಥಾನ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ ಖರ್ಗೆ - ಜಗದೀಶ್ ಶೆಟ್ಟರ್ ಕಾಂಗ್ರೆಸ್​ ಪಕ್ಷ ಸೇರ್ಪಡೆ

ಕೊನೆಗೂ ಮಾಜಿ ಸಿಎಂ ಜಗದೀಶ್​ ಶೆಟ್ಟರ್​ ಕಾಂಗ್ರೆಸ್ ಸೇರಿದ್ದಾರೆ.​ ಅವರ ಸೇರ್ಪಡೆಯಿಂದ ಕಾಂಗ್ರೆಸ್​ ಬಲ ಹೆಚ್ಚಿದೆ ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

jagadish shettar joins congress party
ಕಾಂಗ್ರೆಸ್​ ಸೇರಿದ ಜಗದೀಶ್ ಶೆಟ್ಟರ್
author img

By

Published : Apr 17, 2023, 9:27 AM IST

Updated : Apr 17, 2023, 10:10 AM IST

ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ

ಬೆಂಗಳೂರು : ಮಾಜಿ ಸಿಎಂ ಜಗದೀಶ್ ಶೆಟ್ಟರ್ ಸೇರ್ಪಡೆಯಿಂದ ಉತ್ತರ ಕರ್ನಾಟಕ ಭಾಗದಲ್ಲಿ ಕಾಂಗ್ರೆಸ್ ಬಲವನ್ನು ಇನ್ನಷ್ಟು ಹೆಚ್ಚಿಸಲು ಸಹಕಾರ ಆಗಲಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತಿಳಿಸಿದ್ದಾರೆ.

ಬೆಂಗಳೂರಿನ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ಜಗದೀಶ್ ಶೆಟ್ಟರ್ ಅವರು ಕಾಂಗ್ರೆಸ್ ಪಕ್ಷ ಸೇರಬೇಕು ಎಂಬ ಆಶಯದೊಂದಿಗೆ ಪಕ್ಷದ ಸದಸ್ಯತ್ವವನ್ನು ಇಂದು ಸ್ವೀಕರಿಸಿದ್ದಾರೆ. ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹಾಗೂ ಮಾಜಿ ಸಂಸದ ಅಮರ್ ಸಿಂಗ್ ಪಾಟೀಲ್ ಪಕ್ಷ ಸೇರುತ್ತಿರುವುದು ಹೆಮ್ಮೆಯ ಸಂಗತಿ. ನಮ್ಮ ಪಕ್ಷದ ನೀತಿ ಹಾಗೂ ಐಡಿಯಾಲಜಿಗಳ ಅರಿವು ಶೆಟ್ಟರ್​ಗೆ ಇದೆ. ಅವರು ಬಿಜೆಪಿಯಲ್ಲಿ ಇದ್ದು, ಅಲ್ಲಿನ ಕಾರ್ಯನಿರ್ವಹಣೆ ಹೇಗೆ ನಡೆಸಿದ್ದಾರೆ ಎನ್ನುವುದು ನಿಮಗೆ ಗೊತ್ತು. ಇಂದು ತಮ್ಮ ಸ್ವಾಭಿಮಾನವನ್ನು ಕಾಪಾಡಿಕೊಳ್ಳುವ ಸಲುವಾಗಿ ಕಾಂಗ್ರೆಸ್​ನ ಐಡಿಯಾಲಜಿಯನ್ನು ಒಪ್ಪಿ ಸೇರ್ಪಡೆ ಆಗುತ್ತಿದ್ದಾರೆ. ಈವರೆಗೆ ತಮ್ಮ ಶಕ್ತಿಯನ್ನು ಬಳಸಿ ಬಿಜೆಪಿಯ ಏಳಿಗೆಗೆ ಶ್ರಮಿಸಿದ್ದರು ಎಂದರು.

ಇದನ್ನೂ ಓದಿ : ಬಿಜೆಪಿ ತೊರೆದ ಸೋಲಿಲ್ಲದ ಸರದಾರ: ಜಗದೀಶ್ ಶೆಟ್ಟರ್ ನಡೆದು ಬಂದ ಹಾದಿಯ ಹಿನ್ನೋಟ..

ಇಂದು ಶೆಟ್ಟರ್​ ಕಾಂಗ್ರೆಸ್ ಪಕ್ಷ ಸೇರುವ ಮೂಲಕ ಅವರು ಮಾತ್ರವಲ್ಲ, ಆ ಭಾಗದಲ್ಲಿನ ಕಾಂಗ್ರೆಸ್ ಶಕ್ತಿಯನ್ನು ಸಹ ಹೆಚ್ಚಿಸಿದ್ದಾರೆ. ಶೆಟ್ಟರ್ ತಂದೆ ಸಹ ರಾಜ್ಯ ರಾಜಕಾರಣದಲ್ಲಿ ಸಾಕಷ್ಟು ಸಮಯ ರಾಜಕಾರಣ ಮಾಡಿದ್ದರು. ಅತಿ ದೊಡ್ಡ ಶಿಕ್ಷಣ ಸಂಸ್ಥೆಯನ್ನು ಸಹ ಹೊಂದಿದ್ದಾರೆ ಎಂದು ಹೇಳಿದರು.

ನಾವು ಸರ್ಕಾರದಲ್ಲಿದ್ದಾಗ ಅವರು ಪ್ರತಿಪಕ್ಷದಲ್ಲಿ ಇರುತ್ತಿದ್ದರು. ಅವರು ಅಧಿಕಾರದಲ್ಲಿದ್ದಾಗ ನಾವು ಪ್ರತಿಪಕ್ಷದಲ್ಲಿ ಇರುತ್ತಿದ್ದೆವು. ನಮ್ಮ ನಡುವೆ ಸಿಕ್ಕಾಟ ಇದ್ದೇ ಇರುತ್ತಿತ್ತು. ಆದರೆ, ಶೆಟ್ಟರ್ ಒಬ್ಬ ಸಜ್ಜನ ರಾಜಕಾರಣಿ ಆಗಿದ್ದು, ಅವಕಾಶ ಮಾಡಿಕೊಟ್ಟಿರಲಿಲ್ಲ. ರಾಹುಲ್ ಗಾಂಧಿ ರಾಜ್ಯದಲ್ಲಿ 150 ಸ್ಥಾನ ಗಳಿಸಬೇಕು ಎಂಬ ಗುರಿ ನೀಡಿದ್ದಾರೆ. ಇದೀಗ ಜಗದೀಶ್ ಶೆಟ್ಟರ್ ಸೇರ್ಪಡೆ ನಂತರ ನಮಗೆ ಅದು ಸುಲಭ ಎಂಬ ಅರಿವು ಹಾಗೂ ಖಚಿತತೆ ಮೂಡಿದೆ. ಹುಬ್ಬಳ್ಳಿ-ಧಾರವಾಡ ಸೆಂಟ್ರಲ್​ ಕ್ಷೇತ್ರದಲ್ಲಿ ಅವರು ಗೆದ್ದೇ ಗೆಲ್ಲುತ್ತಾರೆ. ಇದರ ಜೊತೆಗೆ ಆ ಭಾಗದ ಉತ್ತರ, ದಕ್ಷಿಣ ಪೂರ್ವ, ಪಶ್ಚಿಮ ಕ್ಷೇತ್ರಗಳನ್ನು ಸಹ ಗೆಲ್ಲಿಸಿಕೊಂಡು ಬರುತ್ತಾರೆ ಎಂಬ ವಿಶ್ವಾಸ ಇದೆ ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದರು.

ಇದನ್ನೂ ಓದಿ : ಶೆಟ್ಟರ್ ರಾಜೀನಾಮೆಯಿಂದ ನಷ್ಟವಿಲ್ಲ.. ಪಕ್ಷಕ್ಕೆ ಜೀರ್ಣಿಸಿಕೊಳ್ಳುವ ಶಕ್ತಿಯಿದೆ: ಸಿಎಂ ಬೊಮ್ಮಾಯಿ

ಶೆಟ್ಟರ್​ ಅವರು ವಿಶೇಷವಾಗಿ ಸಭ್ಯ ವ್ಯಕ್ತಿತ್ವ ಹೊಂದಿದ್ದು, ವಿನಯವಾಗಿ ಮಾತನಾಡುತ್ತಾರೆ. ಹಾಗಾಗಿ, ನಾನು ಚುನಾವಣೆಗೆ ಅವರನ್ನು ಸ್ವಾಗತಿಸುತ್ತಿದ್ದೇನೆ. ಅವರು ನಮ್ಮ ಪಕ್ಷದ ಮುಂದಿನ ಕೆಲಸ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಾರೆ. ಧಾರವಾಡದ ಉತ್ತರ, ಪೂರ್ವ, ಮಧ್ಯ ಎಲ್ಲಾ ಕಡೆ ಕೂಡ ಸಕ್ರಿಯವಾಗಿರುತ್ತಾರೆ ಎಂದರು.

ಇದನ್ನೂ ಓದಿ : ವಿಧಾನಸಭೆ ಚುನಾವಣೆ 2023.. ರಾಮನಗರದಲ್ಲಿ ಇಂದು ಘಟಾನುಘಟಿಗಳಿಂದ ನಾಮಪತ್ರ ಸಲ್ಲಿಕೆ

Last Updated : Apr 17, 2023, 10:10 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.