ETV Bharat / state

ನಾನು ಯಾರಿಗೂ ನೋವು ಮಾಡಿಲ್ಲ, ಒಂದು ವೇಳೆ ಆಗಿದ್ರೆ ಶಾಸಕರಲ್ಲಿ ಕ್ಷಮೆ ಕೇಳುವೆ: ರೇವಣ್ಣ

ನನ್ನ ಇಲಾಖೆಗೆ ಸಂಬಂಧಿಸಿದ ಕೆಲಸ ಮಾತ್ರ ನಾನು ಮಾಡಿದ್ದೇನೆ, ಬೇರೇನೂ ಮಾಡಿಲ್ಲ. ನನ್ನ ಇಲಾಖೆಗೆ ಸಂಬಂಧಪಟ್ಟ ಬೆಂಗಳೂರು ರಸ್ತೆಯ ಅಭಿವೃದ್ಧಿ ವಿಚಾರದಲ್ಲಷ್ಟೇ ನಾನು ಕೆಲಸ ಮಾಡಿದ್ದೇನೆ ಹೊರತು ಕೆಆರ್​ಐಡಿಎಲ್​ಗಾಗಲಿ, ಬಿಬಿಎಂಪಿಗಾಗಲಿ ನನಗೆ ಗುತ್ತಿಗೆ ಕೊಡಬೇಕು ಎಂದಿಲ್ಲ ಮತ್ತು ನಾನು ಬೇರೆ ಇಲಾಖೆಯಲ್ಲಿ ಹಸ್ತಕ್ಷೇಪ ಮಾಡಿಲ್ಲ ಎಂದು ಸಚಿವ ಹೆಚ್.ಡಿ.ರೇವಣ್ಣ ಸ್ಪಷ್ಟನೆ ನೀಡಿದ್ದಾರೆ.

ಅತೃಪ್ತರಿಗೆ ನೋವಾಗಿದ್ರೆ ಕ್ಷಮೆ ಕೇಳ್ತೇನೆ: ಹೆಚ್ ಡಿ ರೇವಣ್ಣ
author img

By

Published : Jul 17, 2019, 5:05 PM IST

ಬೆಂಗಳೂರು: ನಾನು ನನ್ನ ಇಲಾಖೆ ಬಿಟ್ಟು ಯಾವುದೇ ಇಲಾಖೆಯ ಕೆಲಸಕ್ಕೆ ಕೈ ಹಾಕಿಲ್ಲ. ನಾನು ಯಾರಿಗೂ ನೋವು ಮಾಡಿಲ್ಲ. ಒಂದು ವೇಳೆ ನೋವು ಅಗಿದ್ದಲ್ಲಿ ಕ್ಷಮೆ ಕೇಳುತ್ತೇನೆ ಎಂದು ಸಚಿವ ಹೆಚ್.ಡಿ.ರೇವಣ್ಣ ಹೇಳಿದ್ದಾರೆ.

ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಂದೆ-ತಾಯಿ ಹಾಗೂ ದೇವರ ಆಶೀರ್ವಾದದಿಂದ ನಾನು ಈ ಸ್ಥಾನದಲ್ಲಿದ್ದೇನೆ. ನಮ್ಮ ಕುಟುಂಬದಲ್ಲಿ ಯಾವುದೇ ಒಡಕು ಇಲ್ಲ. ಡಿಸಿಎಂ ಸ್ಥಾನದ ಆಕಾಂಕ್ಷಿ ಅಲ್ಲ. ಈ ಬೆಳವಣಿಗೆ ಬಗ್ಗೆ ಗೊತ್ತಿಲ್ಲ ಎಂದರು. ಹಾಗೂ ನನ್ನ ಇಲಾಖೆಗೆ ಸಂಬಂಧಿಸಿದ ಕೆಲಸ ಮಾತ್ರ ನಾನು ಮಾಡಿದ್ದೇನೆ, ಬೇರೇನೂ ಮಾಡಿಲ್ಲ. ನನ್ನ ಇಲಾಖೆಗೆ ಸಂಬಂಧಪಟ್ಟ ಬೆಂಗಳೂರು ರಸ್ತೆಯ ಅಭಿವೃದ್ಧಿ ವಿಚಾರದಲ್ಲಷ್ಟೇ ನಾನು ಕೆಲಸ ಮಾಡಿದ್ದೇನೆ ಹೊರತು ಕೆಆರ್​ಐಡಿಎಲ್​ಗಾಗಲಿ, ಬಿಬಿಎಂಪಿಗಾಗಲಿ ನನಗೆ ಗುತ್ತಿಗೆ ಕೊಡಬೇಕು ಎಂದಿಲ್ಲ ಮತ್ತು ನಾನು ಬೇರೆ ಇಲಾಖೆಯಲ್ಲಿ ಹಸ್ತಕ್ಷೇಪ ಮಾಡಿಲ್ಲ. ವಸತಿ ಇಲಾಖೆ ಕಾರ್ಯದರ್ಶಿಯನ್ನು ಯಾರ್ ಹಾಕಿದಾರೋ ಗೊತ್ತಿಲ್ಲ. ಆ ಬಗ್ಗೆ ರಿಯಾಕ್ಟ್ ಮಾಡಲ್ಲ. ಕಾರ್ಯದರ್ಶಿ ನೇಮಕ ಸಿಎಂ ಮಾಡೋದು, ಅವರನ್ನ ಕೇಳಿ ಎಂದರು.

ಸಚಿವ ಹೆಚ್.ಡಿ.ರೇವಣ್ಣ

ನಂತರ ಬೆಂಗಳೂರಿನ ಕಾಮಗಾರಿಯಲ್ಲಿ ಬೆಂಗಳೂರು ಶಾಸಕರ ಕಡೆಗಣನೆ ಆರೋಪಕ್ಕೆ ಸ್ಪಷ್ಟನೆ ನೀಡಿದ ಅವರು, ಬೆಂಗಳೂರು-ಹೊಸೂರು ರಸ್ತೆ ಟ್ರಾಫಿಕ್ ನಿವಾರಿಸುವ ಹಿನ್ನೆಲೆಯಲ್ಲಿ 2004ರಲ್ಲಿ ಸಭೆ ನಡೆಸಿದ್ದೆ. ನಗರದಲ್ಲಿ ಎಲಿವೇಟೆಡ್ ಕಾರಿಡಾರ್ ನಿರ್ಮಾಣಕ್ಕೆ ಕೇಂದ್ರ ಸರ್ಕಾರ 200 ಕೋಟಿ, ರಾಜ್ಯದ 100 ಕೋಟಿ, ಕಾರ್ಪೋರೇಟ್ ಸಂಸ್ಥೆಗಳಿಂದ 100 ಕೋಟಿ ನೀಡುವುದು ಎಂದು 2004ರ ಸಭೆಯಲ್ಲಿ ನಿರ್ಧಾರವಾಗಿತ್ತು. ಯೋಜನೆಗೆ ಕೇಂದ್ರ ಸರ್ಕಾರವಾಗಲಿ, ಕಾರ್ಪೋರೇಟ್ ಸಂಸ್ಥೆಗಳಾಗಲಿ ಹಣ ನೀಡಲಿಲ್ಲ. ಕೊನೆಗೆ ಗುತ್ತಿಗೆದಾರರೇ ಹಣ ಹೊಂದಿಕೆ ಮಾಡಿದ್ದರು. ಆದರೆ ಅಷ್ಟರಲ್ಲಿ ನಾನು ಅಧಿಕಾರ ಕಳೆದುಕೊಂಡೆ ಎಂದರು.

Intro:ನನ್ನ ಇಲಾಖೆ ಬಿಟ್ಟು ಬೇರೆ ಇಲಾಖೆಗೆ ಕೈ ಹಾಕಿಲ್ಲ- ಅತೃಪ್ತರಿಗೆ ನೋವಾಗಿದ್ರೆ ಕ್ಷಮೆ ಕೇಳ್ತೇನೆ- ಹೆಚ್ ಡಿ ರೇವಣ್ಣ

ಬೆಂಗಳೂರು- ಬೆಂಗಳೂರಿನ ಕಾಮಗಾರಿಯಲ್ಲಿ ಬೆಂಗಳೂರು ಶಾಸಕರ ಕಡೆಗಣನೆ ಆರೋಪಕ್ಕೆ ಲೋಕೋಪಯೋಗಿ ಸಚಿವ ಹೆಚ್ ಡಿ ರೇವಣ್ಣ ಸ್ಪಷ್ಟನೆ ನೀಡಿ ಬೆಂಗಳೂರು ಹೊಸೂರು ರಸ್ತೆ ಟ್ರಾಫಿಕ್ ನಿವಾರಿಸುವ ಹಿನ್ನಲೆಯಲ್ಲಿ 2004 ರಲ್ಲಿ ಸಭೆ ನಡೆಸಿದ್ದೆ. ನಗರದಲ್ಲಿ ಎಲಿವೇಟೆಡ್ ಕಾರಿಡಾರ್ ನಿರ್ಮಾಣಕ್ಕೆ ಕೇಂದ್ರ ಸರ್ಕಾರ 200 ರೂ ಕೋಟಿ, ರಾಜ್ಯದ 100 ಕೋಟಿ, ಕಾರ್ಪೋರೇಟ್ ಸಂಸ್ಥೆಗಳಿಂದ 100 ಕೋಟಿ ನೀಡುವುದು ಎಂದು 2004 ರ ಸಭೆಯಲ್ಲಿ ನಿರ್ಧಾರವಾಗಿತ್ತು. ಆದರೆ ಕೇಂದ್ರ, ಕಾರ್ಪೋರೆಟ್ ಸಂಸ್ಥೆಗಳು ಹಣ ನೀಡಲಿಲ್ಲ.
ಕೊನೆಗೆ ಗುತ್ತಿಗೆದಾರರೇ ಹಣ ಹೊಂದಿಕೆ ಮಾಡಿದ್ದರು.
ಆದರೆ ಅಷ್ಟರಲ್ಲಿ ನಾನು ಅಧಿಕಾರ ಕಳೆದುಕೊಂಡೆ.ಈಗ ಅದೇ ಕಾಮಗಾರಿ 17 ಸಾವಿರ ಕೋಟಿ ಆಗಿದೆ. 2013 ರಲ್ಲಿ ಕ್ಯಾಬಿನೆಟ್ ನಿರ್ಣಯ ಮಾಡಿ ಕೆಆರ್ ಡಿಎಲ್ ಕೊಟ್ರು. ಆದರೆ ಕೆಆರ್ ಡಿಎಲ್ ನಾಲ್ಕು ವರ್ಷದಲ್ಲಿ ಏನೂ ಮಾಡಿಲ್ಲ. ನಾನು ಮತ್ತೆ ಸಚಿವನಾದ ಮೇಲೆ ಕೈಗೆತ್ತಿಕೊಂಡೆ
ಕ್ಯಾಬಿನೆಟ್ ಮುಂದೆ ತಂದು ನಾನು ಮಾಡಿಸುತ್ತಿದ್ದೇನೆ. ಇದು ಬೆಂಗಳೂರು ಶಾಸಕರಿಗೆ ಗೊತ್ತಿಲ್ಲ ಎನ್ನುವುದು ಸುಳ್ಳು. ಮುಖ್ಯಮಂತ್ರಿ ನೇತೃತ್ವದಲ್ಲಿ ಎರಡು ಬಾರಿ ಕೃಷ್ಣಾದಲ್ಲಿ ಸಭೆ ನಡೆಸಲಾಗಿದೆ. ಅಲ್ಲಿಗೆ ಮುನಿರತ್ನ ಅವರೂ ಬಂದಿದ್ರು ಎಂದರು.

ನನ್ನ ಇಲಾಖೆಗೆ ಸಂಬಂಧಿಸಿದ ಕೆಲಸ ಮಾತ್ರ ನಾನು ಮಾಡಿದ್ದೇನೆ , ಬೇರೇನೂ ಮಾಡಿಲ್ಲ.
ನನ್ನ ಇಲಾಖೆಗೆ ಸಂಬಂಧಪಟ್ಟ ಬೆಂಗಳೂರು ರಸ್ತೆ ಯ ಅಭಿವೃದ್ಧಿ ವಿಚಾರದಲ್ಲಷ್ಟೇ ನಾನು ಕೆಲ್ಸ ಮಾಡಿದ್ದೇನೆ ಹೊರತು ಕೆಆರ್ ಐಡಿಎಲ್ ಗಾಗಲೀ, ಬಿಬಿಎಂಪಿಗಾಗಲಿ ನನಗೆ ಗುತ್ತಿಗೆ ಕೊಡಬೇಕು ಎಂದಿಲ್ಲ ಎಂದರು.
ನಾನು ಬೇರೆ ಇಲಾಖೆಯಲ್ಲಿ ಹಸ್ತಕ್ಷೇಪ ಮಾಡಿಲ್ಲ.ವಸತಿ ಇಲಾಖೆ ಕಾರ್ಯದರ್ಶಿಯನ್ನು ಯಾರ್ ಹಾಕಿದಾರೋ ಗೊತ್ತಿಲ್ಲ.
ಆ ಬಗ್ಗೆ ರಿಯಾಕ್ಟ್ ಮಾಡಲ್ಲ. ಕಾರ್ಯದರ್ಶಿ ನೇಮಕ ಸಿಎಂ ಮಾಡೋದು ,ಅವರನ್ನ ಕೇಳಿ ಎಂದರು.
ನಾನು ಯಾರಿಗೂ ಅನ್ಯಾಯ ಮಾಡಿಲ್ಲ‌. ಅನ್ಯಾಯ ಮಾಡಿದ್ರೆ ತಾಯಿ ಮಹಾಲಕ್ಷ್ಮಿ ನೋಡಿಕೊಳ್ತಾರೆ ಎಂದರು.
ಅಲ್ಲದೆ ನಾರಾಯಣ ಗೌಡ ಆಗಲಿ, ವಿಶ್ವನಾಥ್ ಆಗಲಿ ರಾಜಿನಾಮೆ ಕೊಡಲು ನಾನು ಕಾರಣ ಅಲ್ಲ. ನನ್ನಿಂದ ಬೇಸರವಾಗಿದ್ರೆ ಕ್ಷಮೆ ಕೇಳುತ್ತೇನೆ. ತಂದೆ ತಾಯಿ ಹಾಗೂ ದೇವರ ಆಶೀರ್ವಾದದಿಂದ ನಾನು ಈ ಸ್ಥಾನದಲ್ಲಿದ್ದೇನೆ. ನಮ್ಮ ಕುಟುಂಬದಲ್ಲಿ ಯಾವುದೇ ಒಡಕು ಇಲ್ಲ. ಡಿಸಿಎಂ ಸ್ಥಾನದ ಆಕಾಂಕ್ಷಿ ಅಲ್ಲ, ಈ ಬೆಳವಣಿಗ ಬಗ್ಗೆ ಗೊತ್ತಿಲ್ಲ ಎಂದರು.

ಕುಮಾರಸ್ವಾಮಿಯವರು ಒಂದು ವರ್ಷದಲ್ಲಿ ಪಟ್ಟ ಕಷ್ಟ ಅಷ್ಟಿಷ್ಟಲ್ಲ. ರಾತ್ರಿ ಹಗಲು ಬಡವರಿಗಾಗಿ ಕೆಲಸ ಮಾಡಿದ್ದಾರೆ. ಅವರ ಕೆಲಸ ನೋಡಿದ್ರೆ ಹೊಟ್ಟೆ ಉರಿಯುತ್ತೆ ಎಂದರು.

ಸೌಮ್ಯಶ್ರೀ
Kn_Bng_01_Revanna_PC_7202707Body:..Conclusion:..
ETV Bharat Logo

Copyright © 2024 Ushodaya Enterprises Pvt. Ltd., All Rights Reserved.