ಬೆಂಗಳೂರು: ಬೆಂಗಳೂರಿನ ರಾಜಮಹಲ್ ಹೋಟೆಲ್ನಲ್ಲಿ ಐಟಿ ದಾಳಿ ಪ್ರಕರಣ ಸಂಬಂಧ ಹಣದ ಹಿಂದೆ ಪ್ರಭಾವಿ ವ್ಯಕ್ತಿಗಳ ಸುಳಿವು ಸಿಕ್ಕಿರುವ ಬಗ್ಗೆ ಐಟಿ ಇಲಾಖೆಯ ಡಿಜಿ ಬಾಲಕೃಷ್ಣನ್ ಮಾಹಿತಿ ನೀಡಿದ್ದಾರೆ. ರಾಜ್ ಮಹಲ್ ಹೋಟೆಲ್ನಲ್ಲಿ ಹಣವಿರುವ ಖಚಿತ ಮಾಹಿತಿ ಹಿನ್ನೆಲೆ ದಾಳಿ ನಡೆಸಲಾಗಿತ್ತು.
ಸುಮಾರು 1.67 ಕೋಟಿ ರೂ. ಹಣ ಸೀಜ್ ಮಾಡಲಾಗಿದೆ. ಬೆಂಗಳೂರು, ಹುಬ್ಬಳ್ಳಿ ಏರ್ ಫೊರ್ಟ್ ಸೇರಿದಂತೆ ಕರ್ನಾಟಕದ ಹಲವು ಭಾಗಗಳಲ್ಲಿ ದಾಳಿ ನಡೆಸಲಾಗಿದ್ದು, ಮಹತ್ವದ ದಾಖಲಾತಿಗಳನ್ನು ವಶಕ್ಕೆ ಪಡೆಯಲಾಗಿದೆ.
ಇನ್ನು ರಾಜ್ ಮಹಲ್ ಹೋಟೆಲ್ನಲ್ಲಿ ಸಿಕ್ಕ ಹಣ ರಾಜಕೀಯ ಮುಖಂಡರೊಬ್ಬರಿಗೆ ಸೇರಿದ ವಿಚಾರವಾಗಿ, ಪ್ರಾಥಮಿಕ ತನಿಖೆ ವೇಳೆ ಸೀಜ್ ಆದ ಹಣದ ಹಿಂದೆ ಪ್ರಭಾವಿಯ ಕೈವಾಡವಿರುವ ಸುಳಿವು ಸಿಕ್ಕಿದೆ. ರಾಜಮಹಲ್ ಹೋಟೆಲ್ನಲ್ಲಿ ಸಿಕ್ಕ ಹಣಕ್ಕೆ ಯಾವುದೇ ದಾಖಲಾತಿಗಳಿಲ್ಲ. ತನಿಖೆ ನಡೀತಿದೆ ಅಂತ ಐಟಿ ಇಲಾಖೆ ಡಿಜಿ ಬಾಲಕೃಷ್ಣನ್ ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿದ್ದಾರೆ.
ಇನ್ನು ಡಿ.ಕೆ. ಶಿವಕುಮಾರ್ ಹಾಗೂ ಆಪ್ತರ ಮನೆ ಮೇಲೆ ಐಟಿ ದಾಳಿ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಾತನಾಡಿರುವ ಬಾಲಕೃಷನ್, ಡಿಕೆಶಿ ವಿರುದ್ಧದ ಮೂರು ಪ್ರಕರಣಗಳನ್ನು ಕೋರ್ಟ್ ರದ್ದು ಗೊಳಿಸಿರುವ ವಿಚಾರ, ಈ ಬಗ್ಗೆ ಈಗಾಗಲೇ ಮೇಲ್ಮನವಿ ಸಲ್ಲಿಸಲಾಗಿದೆ. ಈ ವಿಚಾರ ನ್ಯಾಯಾಲಯದಲ್ಲಿರುವ ಹಿನ್ನೆಲೆ, ಅಲ್ಲಿಯೇ ಎಲ್ಲಾ ಪ್ರಕ್ರಿಯೆಗಳನ್ನು ನಡೆಸಲಾಗುತ್ತೆ ಅಂತ ಐಟಿ ಇಲಾಖೆಯ ಡಿಜಿ ಬಾಲಕೃಷ್ಣನ್ ಹೇಳಿದ್ದಾರೆ.