ಬೆಂಗಳೂರು: ತೆರಿಗೆ ವಂಚನೆ ಆರೋಪದ ಮೇಲೆ ಬೆಂಗಳೂರಿನ ವಸಂತ ನಗರದಲ್ಲಿರುವ ಫೆದರ್ ಲೈಟ್ ಕಂಪನಿ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಇಂದು ಬೆಳಗ್ಗೆ ರಾಜ್ಯಾದ್ಯಂತ ಫೆದರ್ ಲೈಟ್ ಕಂಪನಿಯ 20 ಶಾಖೆಗಳ ಮೇಲೆ ಐಟಿ ದಾಳಿ ನಡೆಸಿರುವ ಮಾಹಿತಿ ಸಿಕ್ಕಿದೆ.
ಫೆದರ್ ಲೈಟ್ ಕಂಪನಿ ಫರ್ನೀಚರ್ ತಯಾರಿಕಾ ಕಂಪನಿ ಆಗಿದೆ. ಮೈಸೂರು ರಸ್ತೆಯಲ್ಲಿರುವ ಫೆದರ್ ಲೈಟ್ ಕಂಪನಿಯ ಫ್ಯಾಕ್ಟರಿ ಮೇಲೆ ಐಟಿ ದಾಳಿ ನಡೆಸಿ ಪರಿಶೀಲನೆ ನಡೆಸುತ್ತಿದೆ.
ಕೋಟ್ಯಂತರ ರೂಪಾಯಿ ತೆರಿಗೆ ವಂಚನೆ ಆರೋಪ ಹಿನ್ನೆಲೆ ಈ ದಾಳಿ ನಡೆಸಿದ್ದು, ದಾಳಿಗೆ ಸುಮಾರು 80ಕ್ಕೂ ಅಧಿಕ ವಾಹನಗಳನ್ನು ಐಟಿ ಬಳಕೆ ಮಾಡಿಕೊಂಡಿದೆ.