ದೊಡ್ಡಬಳ್ಳಾಪುರ: ಮಾಜಿ ಕೇಂದ್ರ ಸಚಿವ ಆರ್.ಎಲ್.ಜಾಲಪ್ಪರ ಮಗ ರಾಜೇಂದ್ರ ಅವರ ಮನೆಯಲ್ಲಿ ಐಟಿ ಅಧಿಕಾರಿಗಳು ವಿಚಾರಣೆಯನ್ನು ಮುಂದುವರೆಸಿದ್ದು, ಸದಸ್ಯರು ನೀಡುವ ಹೇಳಿಕೆಗಳನ್ನು ದಾಖಲು ಮಾಡಿಕೊಳ್ಳಲು ಮತ್ತೊಂದು ಪ್ರಿಂಟರ್ ತರಿಸಿದ್ದಾರೆ.
ದೊಡ್ಡಬಳ್ಳಾಪುರ ನಗರದ ಸೋಮೇಶ್ವರ ಬಡಾವಣೆಯಲ್ಲಿ ವಾಸವಾಗಿರುವ ಆರ್.ಎಲ್.ಜಾಲಪ್ಪನವರ ಮಗ ಜೆ.ರಾಜೇಂದ್ರ ಕುಮಾರ್ ಮನೆಯಲ್ಲಿ ಐಟಿ ಅಧಿಕಾರಿಗಳು ಕಾರ್ಯಾಚರಣೆ ಮುಂದುವರೆಸಿದ್ದು, ಕುಟುಂಬದ ಸದಸ್ಯರನ್ನು ಒಟ್ಟಿಗೆ ವಿಚಾರಣೆಗೊಳಪಡಿಸಿದ್ದಾರೆ. ಈ ಸಂಬಂಧ ಹೊರಗಿನಿಂದಲೇ ತಿಂಡಿ ಹಾಗೂ ವಾಟರ್ ಬಾಟಲ್ಗಳನ್ನು ತರಿಸಿದ್ದಾರೆ.
ರಾಜೇಂದ್ರ, ಅವರ ಪತ್ನಿ ಸುಜಾತ, ರಾಕೇಶ್ರನ್ನ ಸ್ಥಳದಲ್ಲೇ ವಿಚಾರಣೆ ನಡೆಸುತ್ತಿದ್ದು, ದೊರೆತ ದಾಖಲೆಗಳ ಜೊತೆ ಹೇಳಿಕೆಗಳ ವಿಚಾರಣೆಯನ್ನು ದಾಖಲಿಸಿಕೊಳ್ಳಲು ಮತ್ತೊಂದು ಪ್ರಿಂಟರ್ನ್ನು ಅಧಿಕಾರಿಗಳು ತರಿಸಿಕೊಂಡಿದ್ದಾರೆ ಎನ್ನಲಾಗುತ್ತಿದೆ.
ಮನೆಗೆ ಬಂದ ಮತ್ತೊಬ್ಬ ಐಟಿ ಅಧಿಕಾರಿ:
ತೀರ್ವ ವಿಚಾರಣೆ ಅಗತ್ಯವಿರುವ ಹಿನ್ನೆಲೆಯಲ್ಲಿ ಮತ್ತಷ್ಟು ಅಧಿಕಾರಿಗಳು ರಾಜೇಂದ್ರ ಮನೆಗೆ ಬರುತ್ತಿದ್ದು, ಇಂದು ಮತ್ತೊಬ್ಬ ಐಟಿ ಮಹಿಳಾ ಅಧಿಕಾರಿ ಕಾರಿನಲ್ಲಿ ರಾಜೇಂದ್ರ ನಿವಾಸಕ್ಕೆ ಆಗಮಿಸಿದ್ದಾರೆ.