ಬೆಂಗಳೂರು : ಉತ್ತರಪ್ರದೇಶದ ಮಾದರಿಯಲ್ಲೇ ರಾಜ್ಯದಲ್ಲೂ ಜನಸಂಖ್ಯೆ ನಿಯಂತ್ರಣ ಕಾಯ್ದೆ ಅಗತ್ಯವಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ಹೇಳಿದ್ದಾರೆ.
ಹೆಚ್ಚುತ್ತಿರುವ ಜನಸಂಖ್ಯೆಯನ್ನು ನಿಯಂತ್ರಿಸಲು ಕರ್ನಾಟಕವು ಅಸ್ಸೋಂ ಮತ್ತು ಉತ್ತರಪ್ರದೇಶದ ಮಾದರಿಯಲ್ಲಿ ಹೊಸ ಜನಸಂಖ್ಯಾ ನೀತಿ ತರಲು ಇದು ಸಕಾಲ. ಸೀಮಿತ ನೈಸರ್ಗಿಕ ಸಂಪನ್ಮೂಲಗಳು ಲಭ್ಯವಿರುವುದರಿಂದ ಜನಸಂಖ್ಯೆ ಸ್ಫೋಟವಾದರೆ ಪ್ರತಿಯೊಬ್ಬ ನಾಗರಿಕನ ಅಗತ್ಯಗಳನ್ನು ಪೂರೈಸುವುದು ಕಷ್ಟ ಎಂದು ಸಿ ಟಿ ರವಿ ಟ್ವೀಟ್ ಮಾಡಿದ್ದಾರೆ. ಈ ಮೂಲಕ ಜನಸಂಖ್ಯೆ ನಿಯಂತ್ರಣ ಕಾನೂನು ತರುವಂತೆ ರಾಜ್ಯ ಸರ್ಕಾರಕ್ಕೆ ಪರೋಕ್ಷ ಒತ್ತಾಯ ಮಾಡಿದ್ದಾರೆ.
-
It is high time Karnataka brings in a new population policy on the lines of Assam and Uttar Pradesh to control its growing population.
— C T Ravi 🇮🇳 ಸಿ ಟಿ ರವಿ (@CTRavi_BJP) July 13, 2021 " class="align-text-top noRightClick twitterSection" data="
With the limited natural resources available, it will be difficult to meet the needs of every citizen if there is a population explosion.
">It is high time Karnataka brings in a new population policy on the lines of Assam and Uttar Pradesh to control its growing population.
— C T Ravi 🇮🇳 ಸಿ ಟಿ ರವಿ (@CTRavi_BJP) July 13, 2021
With the limited natural resources available, it will be difficult to meet the needs of every citizen if there is a population explosion.It is high time Karnataka brings in a new population policy on the lines of Assam and Uttar Pradesh to control its growing population.
— C T Ravi 🇮🇳 ಸಿ ಟಿ ರವಿ (@CTRavi_BJP) July 13, 2021
With the limited natural resources available, it will be difficult to meet the needs of every citizen if there is a population explosion.
ಓದಿ : ಬಡತನ ನಿರ್ಮೂಲನೆಗೆ ಜನಸಂಖ್ಯೆ ನಿಯಂತ್ರಣ ಅಗತ್ಯ, ಯುಪಿ ನಡೆ ಸ್ವಾಗತಾರ್ಹ: ಕೇಂದ್ರ ಸಚಿವ ಅಠಾವಳೆ
ಜನಸಂಖ್ಯೆ ನಿಯಂತ್ರಣ ಕಾಯ್ದೆ ಅಗತ್ಯವಿದೆ ಎಂದು ಕೇಂದ್ರ ಸಚಿವ ರಾಮದಾಸ್ ಅಠಾವಳೆ ಇತ್ತೀಚೆಗಷ್ಟೇ ರಾಜ್ಯಕ್ಕೆ ಭೇಟಿ ನೀಡಿದ್ದ ವೇಳೆ ಹೇಳಿದ್ದರು. ಯುಪಿ ನಡೆ ಸ್ವಾಗತಾರ್ಹ, ದೇಶಾದ್ಯಂತ ಇಂತಹ ಕಾನೂನು ಅಗತ್ಯವಿದೆ ಎಂದಿದ್ದರು. ಇದರ ಬೆನ್ನಲ್ಲೇ ಇದೀಗ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ಅದೇ ನಿಲುವನ್ನು ವ್ಯಕ್ತಪಡಿಸಿದ್ದಾರೆ.