ಬೆಂಗಳೂರು : ಮಾಜಿ ಡಿಸಿಎಂ ಪರಮೇಶ್ವರ್ ಮೇಲೆ ಐಟಿ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಪರಂ ಆಪ್ತರಿಗೆ ನೋಟಿಸ್ ಜಾರಿ ಮಾಡಿದ್ದಾರೆ. ಸದ್ಯ ಮುನಿರಾಮಯ್ಯ, ಶಿವಕುಮಾರ್ ಎಂಬುವರು ಐಟಿ ಮುಂದೆ ಹಾಜರಾಗಿ ವಿಚಾರಣೆ ಎದುರಿಸುತ್ತಿದ್ದಾರೆ.
ಐಟಿ ಅಧಿಕಾರಿಗಳು ಈಗಾಗ್ಲೇ ಪರಮೇಶ್ವರ್ ಮನೆ, ಕಚೇರಿ, ಶಿಕ್ಷಣ ಸಂಸ್ಥೆಗಳ ಮೇಲೆ ದಾಳಿ ನಡೆಸಿ ಹಲವಾರು ಮಾಹಿತಿ ಕಲೆ ಹಾಕಿ ಸಿಕ್ಕ ದಾಖಲಾತಿಗೆ ಉತ್ತರ ನೀಡುವಂತೆ ಪರಮೇಶ್ವರ್ ಆಪ್ತರಿಗೆ ನೋಟಿಸ್ ನೀಡಿದ್ರು. ಹೀಗಾಗಿ ಹಲವು ಮಾಹಿತಿಗಳನ್ನ ಸದ್ಯ ಐಟಿ ಅಧಿಕಾರಿಗಳು ಕಲೆ ಹಾಕಿ ವಿಚಾರಣೆ ಚುರುಕುಗೊಳಿಸಿದ್ದಾರೆ.
ನಾಳೆ ಪರಮೇಶ್ವರ್ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ಐಟಿ ನೋಟಿಸ್ ಜಾರಿಮಾಡಲಾಗಿದೆ. ನಾಳೆ ಪರಮೇಶ್ವರ್ ವಿಚಾರಣೆಗೆ ಹಾಜರಾಗಲಿದ್ದಾರೆ. ಪರಮೇಶ್ವರ್ ಅವರ ವಿಚಾರಣೆ ನಡೆಸಿದ ನಂತರ ಪ್ರಾಥಮಿಕ ವರದಿಯನ್ನ ಸಿದ್ದಮಾಡಲಿರೋ ಐಟಿ ಅದನ್ನ ಇಡಿಗೆ ಹಸ್ತಾಂತರಿಸಲಿದೆ. ಒಂದು ವೇಳೆ ಕಾಳ ಧನ ಅಂದ್ರೆ ಮನಿ ಲಾಂಡ್ರಿಂಗ್ ಸಂಬಂಧ ಇದ್ರೆ ಇಡಿ ಪ್ರಕರಣ ದಾಖಲಿಸಿಕೊಂಡು ಜಿ.ಪರಮೇಶ್ವರ್, ಆನಂದ್ ಹಾಗೂ ಆಪ್ತರ ವಿಚಾರಣೆ ನಡೆಸುವ ಸಾಧ್ಯತೆ ಇದೆ.