ಬೆಂಗಳೂರು : ವಿಧಾನಸಭಾ ಚುನಾವಣೆಯಲ್ಲಿ ಬಳಸಲು ಅಕ್ರಮವಾಗಿ ಸಂಗ್ರಹಿಸಿರುವ ಹಣದ ಮೇಲೆ ಕಣ್ಣಿಟ್ಟಿರುವ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ಎರಡನೇ ದಿನವೂ ದಾಳಿ ಮುಂದುವರೆಸಿದ್ದಾರೆ. ಮಾಜಿ ಮುಖ್ಯಮಂತ್ರಿ ಎಸ್ .ಎಂ. ಕೃಷ್ಣ ಸಹೋದರಿ ಎಸ್.ಎಂ. ಸುನಿತಾ ಅವರ ಮನೆಯಲ್ಲಿಯೂ ಆದಾಯ ತೆರಿಗೆ ಅಧಿಕಾರಿಗಳಿಂದ ಪರಿಶೀಲನೆ ನಡೆದಿದೆ.
ಕೋರಮಂಗಲದ ಮೊದಲನೇ ಹಂತದಲ್ಲಿರುವ ಭಾಗ್ಮನೆ ಹೆಸರಿನ ಎಸ್.ಎಂ. ಕೃಷ್ಣ ಸಹೋದರಿ ಮನೆ, ಬಾಗ್ಮನೆ ಬಿಲ್ಡರ್ ಕಚೇರಿಗಳು ಟ್ರಾನ್ ಇನ್ಸೈನಿಯಾ ಅಪಾರ್ಟ್ಮೆಂಟ್ ಗಳಲ್ಲಿ ಪರಿಶೀಲನೆ ನಡೆಯುತ್ತಿದೆ. ಮನೆಯಲ್ಲಿ ಕಡತಗಳ ಪರಿಶೀಲನೆ ನಡೆಯುತ್ತಿದೆ.
ಕಾಂಗ್ರೆಸ್ ಅಭ್ಯರ್ಥಿಯೊಬ್ಬರ ಆಪ್ತನಾಗಿರುವ ಬಿಲ್ಡರ್, ರಿಯಲ್ ಎಸ್ಟೇಟ್ ಉದ್ಯಮಿ ಹರಿರೆಡ್ಡಿ ಎಂಬುವರ ಬನಶಂಕರಿಯ ನಿವಾಸದಲ್ಲಿ ಶೋಧ ನಡೆಸಲಾಗಿದೆ. ಮೂರು ಕಾರುಗಳಲ್ಲಿ ಬಂದಿರುವ ಅಧಿಕಾರಿಗಳು ನಿನ್ನೆ ಸಂಜೆಯಿಂದಲೂ ಹರಿರೆಡ್ಡಿ ಮನೆಯಲ್ಲಿ ತಪಾಸಣೆ ನಡೆಸಿ ಮನೆಯಿಂದ ಕೆಲ ದಾಖಲೆಗಳು, ಪ್ರಿಂಟರ್ ಸಮೇತ ವಾಪಸಾಗಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ : ಗುರು-ಶಿಷ್ಯನ ಮಧ್ಯೆ ನೇರಾನೇರ ಫೈಟ್: ಯಾರಾಗುತ್ತಾರೆ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದ ಅಧಿಪತಿ?