ಬೆಂಗಳೂರು: ನನ್ನ ಮನೆಗೆ ಬೆಂಕಿ ಹಚ್ಚಿದವರಿಗೆ ಕಾಂಗ್ರೆಸ್ ಟಿಕೆಟ್ ನೀಡಲು ಮುಂದಾಗಿದೆ. ಇದರಿಂದ ಬೇಸರಗೊಂಡು ಪಕ್ಷದ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ ಎಂದು ಮಾಜಿ ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿ ತಿಳಿಸಿದ್ದಾರೆ. ಬೆಂಗಳೂರಿನ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ನಾನು ಇದುವರೆಗೂ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ನೀಡಿಲ್ಲ.
ಆದರೆ, ಪಕ್ಷೇತರವಾಗಿ ಸ್ಪರ್ಧಿಸಲು ತೀರ್ಮಾನಿಸಿದ್ದೇನೆ. ನನಗೆ ಇವತ್ತು ಅನ್ಯಾಯವಾಗಿದೆ. ನನಗೆ ತುಂಬಾ ನೋವಾಗಿದೆ. ಕಾಂಗ್ರೆಸ್ನವರು ಬೆಂಕಿ ಹಚ್ಚಿದವರಿಗೆ ಟಿಕೆಟ್ ಕೊಡಿಸ್ತಿದ್ದಾರೆ. ಪಕ್ಷದ ಕೆಲ ನಾಯಕರು ಟಿಕೆಟ್ ಕೊಡಿಸುತ್ತಿದ್ದಾರೆ. ನಾನೊಬ್ಬ ಸಂಭಾವಿತ ಮನುಷ್ಯ. ಯಾರಿಗೆ ಅನ್ಯಾಯ ಆಗಿದೆ, ನೋವಾಗಿದೆ ಗೊತ್ತಾಗಿದೆ. ನನ್ನ ಕ್ಷೇತ್ರದ ಜನರ ಸಭೆ ಕರೆದಿದ್ದೇನೆ. ಅವರ ಅಭಿಪ್ರಾಯದಂತೆ ನಾನು ನಿರ್ಧಾರ ಮಾಡ್ತೇನೆ ಎಂದರು.
ನನಗೆ ಮತ ಹಾಕುವವರು ಕ್ಷೇತ್ರದ ಜನ. ಅವರೇ ವೋಟು ಹಾಕಿ ಗೆಲ್ಲಿಸುವವರು. ನಾನು ಕಾಂಗ್ರೆಸ್ನಲ್ಲೇ ಇದ್ದೇನೆ. ಕಾಂಗ್ರೆಸ್ ಸದಸ್ಯತ್ವಕ್ಕೆ ರಾಜೀನಾಮೆ ಕೊಟ್ಟಿಲ್ಲ. ಬಹಳ ಹೆಚ್ಚಿನ ಮತಗಳಿಂದ ಗೆದ್ದವನು ನಾನು. ನನಗೆ ಯಾರು ಟಿಕೆಟ್ ತಪ್ಪಿಸಿದ್ದಾರೆ ನೀವೇ ಯೋಚಿಸಿ. ದೊಡ್ಡ ನಾಯಕರು ಟಿಕೆಟ್ ತಪ್ಪಿಸಿದ್ದಾರೆ. ಸಿಎಲ್ಪಿ ಲೀಡರ್ ನನ್ನ ಪರವಾಗಿಯೇ ಇದ್ದಾರೆ. ಜಮೀರಣ್ಣ ಕೂಡ ನನ್ನ ಪರವಾಗಿಯೇ ಇದ್ದಾರೆ. ಆದರೆ, ಹಿರಿಯರೊಬ್ಬರು ಟಿಕೆಟ್ ತಪ್ಪಿಸಿದ್ದಾರೆ ಎಂದರು.
ನಾನು ಇನ್ನೂ ಸಿಗುತ್ತೆ ಅಂತ ಕಾದು ಕೂರಲೇ. ಯಾವ ನಿರೀಕ್ಷೆ ಇಟ್ಕೊಂಡು ಕುಳಿತು ಕೊಳ್ಳಲಿ. ಆದರೆ, ನಾನಿನ್ನೂ ಪಕ್ಷಕ್ಕೆ ರಾಜೀನಾಮೆ ಕೊಟ್ಟಿಲ್ಲ. ರಾಜೀನಾಮೆ ಕೊಟ್ಟರೆ ಪಕ್ಷದ ಕತೆ ಮುಗಿಯುತ್ತೆ. ನನಗೆ ಟಿಕೆಟ್ ಸಿಗುವ ವಿಶ್ವಾಸ ಹೋಗಿದೆ. ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತೇನೆ. ಜನರೇ ನನ್ನನ್ನು ಗೆಲ್ಲಿಸ್ತಾರೆ ಎಂದರು.
ನಾನು ಯಾರು ಏನು ಅಂತಾ ಹೇಳಲ್ಲ. ಮನೆಗೆ ಬೆಂಕಿ ಇಟ್ಟವರ ಪರವಾಗಿದ್ದಾರೆ. ಆಗಲೂ ನನ್ನ ಪರ ಅವರು ನಿಲ್ಲಲಿಲ್ಲ. ಅವರೇ ನನಗೆ ಟಿಕೆಟ್ ತಪ್ಪಿಸಿದ್ದು. ಯಾರು ಅನ್ನೋದು ನಿಮಗೆ ಗೊತ್ತಿದೆ. ನಾನು ಯಾರ ಹೆಸರನ್ನೂ ಹೇಳಲ್ಲ. ಮೇಲೆ ದೇವರಿದ್ದಾನೆ, ನೋಡಿಕೊಳ್ತಾನೆ. ಯಾರು ಅನ್ಯಾಯ ಮಾಡಿದ್ದಾರೆ ನೋಡಿಕೊಳ್ತಾನೆ. ನನಗೆ ಅನ್ಯಾಯವಾಗಿದೆ. ನನ್ನ ಜನ ಕೈಹಿಡಿತಾರೆ. ನನಗೆ ದುಃಖವಾಗ್ತಿದೆ, ಹೇಳೋಕೆ ಆಗಲ್ಲ ಎಂದು ವಿವರಿಸಿದರು.
ಕಾಂಗ್ರೆಸ್ 3ನೇ ಪಟ್ಟಿಯಲ್ಲಿ ನನ್ನ ಹೆಸರು ಬಂದಿಲ್ಲ. ಇದರಿಂದ ನನಗೆ ತುಂಬಾ ದುಃಖವಾಗಿದೆ. ಹಾಲಿ ಶಾಸಕ ನಾನು, ನನಗೆ ಟಿಕೆಟ್ ಕೊಟ್ಟಿಲ್ಲ. ಅತಿ ಹೆಚ್ಚು ಅಂತರದಿಂದ ನಾನು ಗೆದ್ದಿದ್ದೆ. ಆದರೂ ನನಗೆ ಟಿಕೆಟ್ ನೀಡಿಲ್ಲ. ನಾನು ಎಲ್ಲ ಸಮುದಾಯದವರ ಜೊತೆ ಚೆನ್ನಾಗಿದ್ದೇನೆ. ಹಿಂದೂ- ಮುಸ್ಲಿಂ ಅಣ್ಣ ತಮ್ಮಂದಿರಂತೆ ಇದ್ದಾರೆ. ನಮ್ಮ ಕ್ಷೇತ್ರದಲ್ಲಿ ಎಲ್ಲ ಸಮುದಾಯದ ಜೊತೆ ನಾನು ಚನ್ನಾಗಿ ಇದ್ದೇನೆ. ಯಾರೋ ಮೌಲಾನ ಟಿಕೆಟ್ ಕೊಡಬೇಡಿ ಅಂತ ಹೇಳಿದ್ದಾರೆ ಅಂತಾರೆ. ಬೇರೆ ಪಕ್ಷದಲ್ಲಿ ಇದ್ದವನನ್ನು ಕರೆದು ಈ ರೀತಿ ಮಾಡಬಾರದಿತ್ತು. ನನಗೆ ಆದ ಹಾಗೆ ಯಾರಿಗೂ ಆಗಬಾರದು. ಬಹಳ ನೋವಿನಿಂದ ಹೇಳುತ್ತಿದ್ದೇನೆ. ಬಿಜೆಪಿಯಿಂದ ನನಗೆ ಯಾವುದೇ ಆಹ್ವಾನ ಬಂದಿಲ್ಲ. ಜೆಡಿಎಸ್ನಿಂದ ನಮ್ಮ ಲೀಡರ್ಗಳಿಗೆ ಮಾತ್ರ ಕರೆ ಬಂದಿದೆ, ಅಷ್ಟೇ ಎಂದರು.
ಇದನ್ನೂ ಓದಿ: ಕಾಂಗ್ರೆಸ್ನಲ್ಲಿ ಎಲ್ಲವೂ ಉತ್ತಮವಾಗಿದೆ.. ಪಕ್ಷವನ್ನು ಬೆಳೆಸಲು ಶ್ರಮಿಸುತ್ತೇನೆ: ಜಗದೀಶ್ ಶೆಟ್ಟರ್