ETV Bharat / state

ಡಿಕೆಶಿ ವಿರುದ್ಧ ಹವಾಲಾ ಆರೋಪ.. ಐಟಿ ಕೇಸ್‌ ವಜಾಗೊಳಿಸಲು ಕೊರ್ಟ್‌ಗೆ ಸಚಿವರ ಮನವಿ - kannada news

ಡಿ.ಕೆ.ಶಿವಕುಮಾರ
author img

By

Published : Apr 29, 2019, 10:36 PM IST

ಬೆಂಗಳೂರು : ಸಚಿವ ಡಿಕೆಶಿ ವಿರುದ್ದ ಐಟಿ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪ ಮುಕ್ತಗೊಳಿಸುವಂತೆ ಸಚಿವ ಡಿಕೆಶಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ಜನಪ್ರತಿನಿಧಿ ‌ವಿಶೇಷ ನ್ಯಾಯಾಲಯದಲ್ಲಿ ನಡೆಯಿತು.

ಅರ್ಜಿ ವಿಚಾರಣೆ ಹಿನ್ನೆಲೆ ಡಿಕೆಶಿ ಹಾಗೂ ರಾಜೆಂದ್ರ, ಅಂಜನೇಯ, ಹನುಮಂತಯ್ಯ ನ್ಯಾಯಾಲಯಕ್ಕೆ ಹಾಜರಾಗಿದ್ರು‌. ‌ಡಿಕೆಶಿವಕುಮಾರ್‌ ಪರ ವಾದ ಮಂಡಿಸಿದ ವಕೀಲರು, ಐಟಿ ಸಲ್ಲಿಸಿರುವ ದೂರಿನಲ್ಲಿ ಹವಾಲಾ ಆರೋಪ ಮಾಡಿದೆ. ಈ ಪ್ರಕರಣದಲ್ಲಿ ಆರೋಪ ಮುಕ್ತಗೊಳಿಸುವಂತೆ ಡಿಕೆಶಿ ಅರ್ಜಿ ಸಲ್ಲಿಸಿದ್ದರು.

ಐಟಿ ಇಲಾಖೆ ದಾಖಲು ಮಾಡಿರುವ ದೂರಿನಲ್ಲಿ ಹುರುಳಿಲ್ಲ. ಐಟಿ ಕಾಯ್ದೆ 276(c) ಹಾಗು 277 ಸೆಕ್ಷನ್ ಅಡಿ ದಾಖಲು ಮಾಡಲು ಸಾಧ್ಯವಿಲ್ಲ. ಆರ್ಥಿಕ ವರ್ಷ ಮುಗಿಯುವ ಮುನ್ನವೇ ಡಿಕೆಶಿ ವಿರುದ್ದ ದೂರು ದಾಖಲಾಗಿದೆ. ಐಟಿ ಡೆಪ್ಯುಟಿ ಡೈರೆಕ್ಟರ್ ಸಲ್ಲಿಸಿರುವ ದೂರು ಕಾನೂನು ಬಾಹಿರ. ಐಟಿ ಡೆಪ್ಯುಟಿ ಡೈರೆಕ್ಟರ್ ನೇರವಾಗಿ ನ್ಯಾಯಾಲಯದ ಮೆಟ್ಟಿಲು ಹತ್ತಿದ್ದಾರೆ. ಒಮ್ಮೆ ಐಟಿ ದಾಳಿ ನಡೆಸಿದಾಗ ದಾಳಿಗೆ ತುತ್ತಾದ ವ್ಯಕ್ತಿ ಅದೇ ಫೈನಾನ್ಶಿಯಲ್ ಇಯರ್‌ನಲ್ಲಿ ಟ್ಯಾಕ್ಸ್ ಪೇ ಮಾಡಬೇಕು.

ಒಂದು ವೇಳೆ ಮಾಡಿಲ್ಲ ಅಂತಾ ಯಾವುದೇ ಮಾಹಿತಿ ಬಂದಲ್ಲಿ ಮೊದಲು ಟ್ಯಾಕ್ಸ್ ಕಟ್ಟದ ವ್ಯಕ್ತಿಗೆ ನೋಟಿಸ್ ನೀಡಬೇಕು. ಆ ನೋಟಿಸ್ ಆಧಾರದ ಮೇಲೆ ಆತನ ಹೇಳಿಕೆ ಪಡೆಯಬೇಕು. ಅದಾದ ನಂತರ ಫೈನಾನ್ಶಿಯಲ್ ಇಯರ್‌ನಲ್ಲಿ ಎಷ್ಟು ಟ್ಯಾಕ್ಸ್ ಮಾಡಿದ್ದಾರೆ. ಈ ಎಲ್ಲಾ ಹೇಳಿಕೆಯನ್ನ ವ್ಯಕ್ತಿಯ ಬಳಿ ಕೇಳಬೇಕು. ಒಂದು ವೇಳೆ ಏನಾದರೂ ಟ್ಯಾಕ್ಸ್ ಕಟ್ಟಿಲ್ಲ ಎಂದಾದಲ್ಲಿ ಅದಕ್ಕೆ ಅವರ ಉತ್ತರ ತಿಳಿದುಕೊಳ್ಳಬೇಕು.

ಆದರೆ, ಇಲ್ಲಿ ಯಾವುದೇ ಉತ್ತರ ತಿಳಿದುಕೊಳ್ಳದೆ ಫೈನಾನ್ಶಿಯಲ್ ಇಯರ್‌ನಲ್ಲಿ ಟ್ಯಾಕ್ಸ್ ಕಟ್ಟಿದ್ದಾರಾ ಇಲ್ಲವಾ ? ಎಂದು ಕೇಳದೆ ಐಟಿ ಡೆಪ್ಯುಟಿ ಡೈರೆಕ್ಟರ್ ಇದನ್ನೆಲ್ಲಾ ಪರಿಗಣಿಸದೆ ಆರ್ಥಿಕ‌ ವರ್ಷದ ಮುಗಿಯದೆ, ನೇರವಾಗಿ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ಇದು ಅಕ್ಷಮ್ಯ ಅಪರಾಧ. ಇಲ್ಲಿ ಹೇಳಿಕೆ ದಾಖಲಿಸಿಕೊಳ್ಳಬೇಕಾದ ಅಧಿಕಾರಿಯೇ ಜಡ್ಜ್ ಆಗಿ ವರ್ತಿಸಿದ್ದಾರೆ. ಈ ಹಿನ್ನೆಲೆ ಈ‌ ಪ್ರಕರಣವನ್ನ ಕೈ ಬಿಡಬೇಕು ಎಂದು ಡಿಕೆಶಿ ಪರ ವಕೀಲರು ವಾದ ಮಾಡಿದ್ರು‌. ಇನ್ನು ಹೆಚ್ಚಿನ ವಿಚಾರಣೆಗಾಗಿ ನಾಳೆಗೆ ಅರ್ಜಿ ಮುಂದೂಡಿಕೆಯಾಗಿದೆ.

Intro:ಡಿಕೆಶಿ ವಿರುದ್ದ ಐಟಿ ದಾಳಿ ಪ್ರಕರಣ
ಆರ್ಥಿಕ ವರ್ಷ ಮುಗಿಯುವ ಮುನ್ನವೇ ಡಿಕೆಶಿ ವಿರುದ್ದ ದೂರು ವಕೀಲರ ವಾದ ನಾಳೆಗೆ ಅರ್ಜಿ‌ಮುಂದೂಡಿಕೆ

ಭವ್ಯ

ಡಿಕೆಶಿ ವಿರುದ್ದ ಐಟಿ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ
ಆರೋಪ ಮುಕ್ತಗೊಳಿಸುವಂತೆ ಸಚಿವ ಡಿಕೆಶಿ ಸಲ್ಲಿಸಿದ್ದ ಅರ್ಜಿ ಇಂದು ಜನಪ್ರತಿನಿಧಿ‌ನ್ಯಾಯಲಯದ ವಿಶೇಷ ನ್ಯಾಯಲಯದಲ್ಲಿ ನಡೆದಿದೆ. ಇನ್ನು ಅರ್ಜಿ ವಿಚಾರಣೆ ಹಿನ್ನೆಲೆ ಕೋರ್ಟ್ ಗೆ ಡಿಕೆಶಿ ಹಾಗೂ , ರಾಜೆಂದ್ರ ಅಂಜನೇಯಹನುಮಂತಾಯ್ಯ ನ್ಯಾಯಲಯಕ್ಕೆ ಹಾಜರಾಗಿದ್ರು‌.‌

ಇನ್ನು ಡಿಕೆ ಪರ ವಾದ ಮಾಡಿದ ವಕೀಲರು
ಐಟಿ ಸಲ್ಲಿಸಿರುವ ದೂರಿನಲ್ಲಿ ಹವಾಲ ಆರೋಪ ಮಾಡಿದೆ
ಈ ಪ್ರಕರಣದಲ್ಲಿ ಆರೋಪ ಮುಕ್ತಗೊಳಿಸುವಂತೆ ಡಿಕೆಶಿ ಅರ್ಜಿ ಸಲ್ಲಿಸಿದ್ದಾರೆ.ಐಟಿ ಇಲಾಖೆ ದಾಖಲು ಮಾಡಿರುವ ದೂರಿನಲ್ಲಿ ಉರುಳಿಲ್ಲ. ಐಟಿ ಕಾಯ್ದೆ 276(c) ಹಾಗು 277 ಸೆಕ್ಷನ್ ಅಡಿ ದಾಖಲು ಮಾಡಲು ಸಾಧ್ಯವಿಲ್ಲ.

ಆರ್ಥಿಕ ವರ್ಷ ಮುಗಿಯುವ ಮುನ್ನವೇ ಡಿಕೆಶಿ ವಿರುದ್ದ ದೂರು ದಾಖಲಾಗಿದೆ.ಐಟಿ ಡೆಪ್ಯೂಟಿ ಡೈರೆಕ್ಟರ್ ಸಲ್ಲಿಸಿರುವ ದೂರು ಕಾನೂನು ಬಾಹಿರ.ಐಟಿ ಡೆಪ್ಯೂಟಿ ಡೈರೆಕ್ಟರ್ ನೇರವಾಗಿ ನ್ಯಾಯಾಲಯದ ಮೆಟ್ಟಿಲು ಹತ್ತಿದ್ದಾರೆ.ಒಮ್ಮೆ ಐಟಿ ದಾಳಿ ನಡೆಸಿದಾಗ ದಾಳಿಗೆ ತುತ್ತಾದ ವ್ಯಕ್ತಿ ಅದೇ ಫೈನಾನ್ಶಿಯಲ್ ಇಯರ್ ನಲ್ಲಿ ಟ್ಯಾಕ್ಸ್ ಪೇ ಮಾಡಬೇಕು.. ಒಮ್ಮೆ ಮಾಡಿಲ್ಲ ಅಂತ ಯಾವುದೇ ಮಾಹಿತಿ ಬಂದಲ್ಲಿಮೊದಲು ಟ್ಯಾಕ್ಸ್ ಕಟ್ಟದ ವ್ಯಕ್ತಿಗೆ ನೋಟಿಸ್ ನೀಡಬೇಕು.. ಆ ನೋಟಿಸ್ ಆಧಾರದ ಮೇಲೆ ಆತನ ಹೇಳಿಕೆ ಪಡೆಯಬೇಕು..ಅದಾದ ನಂತರ ಫೈನಾನ್ಶಿಯಲ್ ಇಯರ್ ನಲ್ಲಿ ಎಷ್ಟು ಟ್ಯಾಕ್ಸ್ ಮಾಡಿದ್ದಾರೆ.. ಈ ಎಲ್ಲಾ ಹೇಳಿಕೆಯನ್ನ ವ್ಯಕ್ತಿಯ ಬಳಿ ಕೇಳಬೇಕು..ಒಂದು ವೇಳೆ ಏನಾದರೂ ಟ್ಯಾಕ್ಸ್ ಕಟ್ಟಿಲ್ಲ ಎಂದಾದಲ್ಲಿ ಅದಕ್ಕೆ ಅವರ ಉತ್ತರ ತಿಳಿದುಕೊಳ್ಳಬೇಕು..ಇಲ್ಲಿ ಯಾವುದೇ ಉತ್ತರ ತಿಳಿದುಕೊಳ್ಳದೆ..ಫೈನಾನ್ಶಿಯಲ್ ಇಯರ್ ನಲ್ಲಿ ಟ್ಯಾಕ್ಸ್ ಕಟ್ಟಿದ್ದಾರಾ ಇಲ್ಲವ ಎಂದು ಕೇಳದೆ ಐಟಿ ಡೆಪ್ಯೂಟಿ ಡೈರೆಕ್ಟರ್ ಇದನ್ನೆಲ್ಲಾ ಪರಿಗಣಿಸದೆ.. ಆರ್ಥಿಕ‌ ವರ್ಷದ ಮುಗಿಯದೆ, ನೇರವಾಗಿ ನ್ಯಾಯಲಯದ ಮೆಟ್ಟಿಲತ್ತಿದ್ದಾರೆ..ಇದು ಅಕ್ಷಮ್ಯ ಅಪರಾಧ
ಹೇಳಿಕೆ ದಾಖಲಿಸುವ ಮುನ್ನವೇ ಒಬ್ಬ ವ್ಯಕ್ತಿಯನ್ನ ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವ ಹಾಗಿಲ್ಲ.ಇಲ್ಲಿ ಹೇಳಿಕೆ ದಾಖಲಿಸಿಕೊಳ್ಳಬೇಕಾದ ಅಧಿಕಾರಿಯೇ ಜಡ್ಜ್ ಆಗಿ ವರ್ತಿಸಿದ್ದಾರೆ..
ಈ ಹಿನ್ನೆಲೆ ಈ‌ ಪ್ರಕರಣವನ್ನ ಕೈ ಬಿಡಬೇಕು ಎಂದು ಡಿಕೆಶಿ ಪರ ವಕೀಲರ ವಾದ ಮಾಡಿದ್ರು‌. ಇನ್ನು ಹೆಚ್ಚಿನ ವಿಚಾರಣೆಗಾಗಿ ನಾಳೆಗೆ ಅರ್ಜಿ ಮುಂದೂಡಿಕೆ ಯಾಗಿದೆBody:KN_BNG_08-29-DK-7204498-BHAVYAConclusion:KN_BNG_08-29-DK-7204498-BHAVYA
ETV Bharat Logo

Copyright © 2025 Ushodaya Enterprises Pvt. Ltd., All Rights Reserved.