ETV Bharat / state

'ಅಬಕಾರಿ ಇಲಾಖೆಯಲ್ಲಿ ಅಕ್ರಮ ನಡೆದಿಲ್ಲ, ಹತ್ತು ಆಡಿಯೋ ಬಿಡುಗಡೆ ಮಾಡಿದರೂ ಹೆದರಲ್ಲ' - ಸಚಿವ ಗೋಪಾಲಯ್ಯ

ಶೋಚನೀಯ ಸ್ಥಿತಿಗೆ ತಲುಪಿರುವ ಕಾಂಗ್ರೆಸ್​ ಮಾಡುತ್ತಿರುವ ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂದು ಸಚಿವ ಗೋಪಾಲಯ್ಯ ಅವರು ಪ್ರಿಯಾಂಕ್​ ಖರ್ಗೆ ಆರೋಪಕ್ಕೆ ಪ್ರತಿಕ್ರಿಯಿಸಿದರು.

Excise Department Minister K Gopaliah
ಅಬಕಾರಿ ಇಲಾಖೆ ಸಚಿವ ಕೆ ಗೋಪಾಲಯ್ಯ
author img

By

Published : Feb 28, 2023, 7:34 PM IST

ಬೆಂಗಳೂರು: ಕಾಕಂಬಿ ರಫ್ತಿಗೆ ಅವಕಾಶ ಕೊಡುವ ಮೂಲಕ‌ ಅಬಕಾರಿ ಇಲಾಖೆಯಲ್ಲಿ 200 ಕೋಟಿ ರೂ ಅಕ್ರಮ ಮಾಡಲಾಗಿದೆ ಎನ್ನುವುದು ನಿರಾಧಾರ ಆರೋಪ. ಇಲಾಖೆಯಲ್ಲಿ ಯಾವುದೇ ಅಕ್ರಮ ನಡೆದಿಲ್ಲ. ಇಂತಹ ಹತ್ತು ಆಡಿಯೋ ಬಿಡುಗಡೆ ಮಾಡಿದರೂ ನಾನು ಹೆದರುವುದಿಲ್ಲ ಎಂದು ಅಬಕಾರಿ ಇಲಾಖೆ ಸಚಿವ ಕೆ.ಗೋಪಾಲಯ್ಯ ಕಾಂಗ್ರೆಸ್ ನಾಯಕ ಪ್ರಿಯಾಂಕ್ ಖರ್ಗೆಗೆ ತಿರುಗೇಟು ನೀಡಿದ್ದಾರೆ.

ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಇವತ್ತು ನನ್ನ ಮೇಲೆ, ಮುಖ್ಯಮಂತ್ರಿಯವರ ಮೇಲೆ ಹಾಗೂ ನಮ್ಮ ರಾಷ್ಟ್ರೀಯ ಮುಖಂಡರ ಮೇಲೆ ಆರೋಪ ಮಾಡಿದ್ದಾರೆ. ಇದನ್ನು ನೋಡಿದರೆ ಕಾಂಗ್ರೆಸ್ ಇವತ್ತು ಬಹಳ ಶೋಚನೀಯ ಸ್ಥಿತಿಗೆ ಬಂದು ತಲುಪಿದಂತಿದೆ ಎಂದು ಟೀಕಿಸಿದರು.

ಕೇನ್ ರಿಸೋರ್ಸ್ ಕಂಪನಿಗೆ ಟೆಂಡರ್ ನೀಡಲು ನಮ್ಮ ಇಲಾಖೆಗೆ ಸಿಎಂ ಆಗಲೀ, ಅವರ ಮನೆಯವರಾಗಲೀ ಅಥವಾ ಇನ್ಯಾರೂ ಕೂಡಾ ನಮಗೆ ಒತ್ತಡ ಹಾಕಿಲ್ಲ. ನಿಯಮದ ಪ್ರಕಾರವೇ ಟೆಂಡರ್ ನೀಡಿದ್ದೇವೆ. ಚುನಾವಣೆ ಸಮಯದಲ್ಲಿ ಸುಮ್ಮನೆ ಆರೋಪ ಮಾಡುತ್ತಿದ್ದಾರೆ. ನಿಮ್ಮ ಬಳಿ ದಾಖಲೆ ಇದ್ದರೆ ನೀಡಿ, ಇಂತಹ ಹತ್ತು ಆಡಿಯೋ ಬಿಡುಗಡೆ ಮಾಡಿದರೂ ನಾನು ಹೆದರೋದಿಲ್ಲ. ಯಾರೋ ನನ್ನ ಬಳಿ ಬರೋದಕ್ಕೆ ಪ್ರಯತ್ನ ಮಾಡಿದ್ದರು. ಆದರೆ ನಾನು ಅದಕ್ಕೆ ಸೊಪ್ಪು ಹಾಕಿಲ್ಲ. ಹೀಗಾಗಿ ಈಗ ಸುಳ್ಳು ಆರೋಪ ಮಾಡಿದ್ದಾರೆ ಎಂದರು.

ಇಡೀ ದೇಶದಲ್ಲಿ ಕಾಂಗ್ರೆಸ್ ಹತಾಶೆ ಸ್ಥಿತಿಗೆ ತಲುಪಿದೆ. ನನಗೆ ಅಬಕಾರಿ ಖಾತೆ ಕೊಟ್ಟಾಗ ಟ್ಯಾಕ್ಸ್ ಸಂಗ್ರಹ ಮಾಡಲು ಗುರಿ ನೀಡಿದ್ದಾರೆ. ಅದಕ್ಕಿಂತ ಹೆಚ್ಚಾಗಿ ಅಬಕಾರಿ ಇಲಾಖೆಯಿಂದ ತೆರಿಗೆ ಸಂಗ್ರಹ ಮಾಡಿದ್ದೇವೆ. ಸುಮಾರು ಏಳೆಂಟು ತಿಂಗಳ ಮೊದಲೇ ಆ ಕಂಪನಿಗೆ ಅನುಮತಿ ಕೊಟ್ಟಿದ್ದೇವೆ. ಸಿಎಂ ಸೇರಿದಂತೆ ಯಾವ ಅಧಿಕಾರಿಗಳೂ ನನ್ನ ಮೇಲೆ ಒತ್ತಡ ಹಾಕಿಲ್ಲ. ಕೆ.ಎಸ್ ರಿಸೋರ್ಸ್ ಪ್ರೈ ಲಿಮಿಟೆಡ್ ಪೋರ್ಟ್​ಗೆ ಅನುಮತಿಯನ್ನು ಈ ಮೊದಲೇ ನೀಡಿದ್ದೇವೆ. ಇದಕ್ಕೆ ಯಾರೂ ಒತ್ತಡ ಹಾಕಿಲ್ಲ.

ಚುನಾವಣೆ ಸಂದರ್ಭದಲ್ಲಿ ಯಾರೋ ದಾರಿಯಲ್ಲಿ ಮಾತನಾಡಿರುವ ಆಡಿಯೋ ಬಿಡುಗಡೆ ಮಾಡಿದ್ದಾರೆ. ದಾಖಲೆ ಇದ್ದರೆ ತೆಗೆದುಕೊಂಡು ಬನ್ನಿ, ಸಿಎಂ ಮೇಲೆ ಆರೋಪ ಮಾಡುವುದು ತಪ್ಪು, ಸಿಎಂ ಜೊತೆಗೆ ಕೇಂದ್ರ ಸಚಿವರ ಮೇಲೆ ಪ್ರಿಯಾಂಕ್ ಖರ್ಗೆ ಆರೋಪ ಮಾಡಿರುವುದು ದುರದೃಷ್ಟಕರ. ರಫ್ತು ಮಾಡುವ ಸಂದರ್ಭದಲ್ಲಿ ಯಾವುದೇ ಟ್ಯಾಕ್ಸ್ ಬಂದರೂ ಅದು ಕೇಂದ್ರ ಸರ್ಕಾರಕ್ಕೆ ಹೋಗುತ್ತದೆ ಎಂದು ಕಾಕಂಬಿ ರಫ್ತಿಗೆ ಅವಕಾಶ ಕೊಡುವ ಮೂಲಕ‌ ಅಬಕಾರಿ ಇಲಾಖೆಯಲ್ಲಿ 200 ಕೋಟಿ ಅಕ್ರಮ ಮಾಡಲಾಗಿದೆ ಎನ್ನುವ ಪ್ರಿಯಾಂಕ್ ಖರ್ಗೆ ಆರೋಪಕ್ಕೆ ಸ್ಪಷ್ಟೀಕರಣ ನೀಡಿದರು.

ಇದನ್ನೂ ಓದಿ: 'ಸಿಬಿಐ ಬಂಧನ ಪ್ರಶ್ನಿಸಿ ಹೈಕೋರ್ಟ್​ಗೆ ಹೋಗಿ': ಡಿಸಿಎಂ ಸಿಸೋಡಿಯಾಗೆ ಸುಪ್ರೀಂ ಸೂಚನೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.