ಬೆಂಗಳೂರು: ನಗರದ ಸಪ್ತಗಿರಿ ಹಾಗೂ ಬಿಜಿಎಸ್ ಆಸ್ಪತ್ರೆ, ವಿದ್ಯಾಸಂಸ್ಥೆ ಮೇಲೆ ಬೆಳ್ಳಂಬೆಳಗ್ಗೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಕೋಟ್ಯಂತರ ರೂಪಾಯಿ ತೆರಿಗೆ ವಂಚನೆ ಆರೋಪ ಹಿನ್ನೆಲೆ ದಾಳಿ ಮಾಡಲಾಗಿದ್ದು, ಅಧಿಕಾರಿಗಳು ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ.
ಓದಿ:ಮಂಗಳೂರಲ್ಲಿ ಇಬ್ಬರು ಉದ್ಯಮಿಗಳಿಗೆ ಐಟಿ ಶಾಕ್
ಈ ಬಗ್ಗೆ ಸಾರ್ವಜನಿಕರಿಂದ ದೂರು ಬಂದ ಹಿನ್ನೆಲೆ ಐಟಿ ಅಧಿಕಾರಿಗಳು ದಾಳಿ ಮಾಡಿದ್ದಾರೆ ಎನ್ನಲಾಗ್ತಿದೆ.
ಆದಿಚುಂಚನಗಿರಿ ಮಠಕ್ಕೆ ಆಗಮಿಸಿದ್ದ ಐಟಿ ಅಧಿಕಾರಿಗಳು:
ವಿಜಯನಗರದ ಆದಿಚುಂಚನಗಿರಿ ಮಠಕ್ಕೆ ಬಂದ ಐಟಿ ಅಧಿಕಾರಿಗಳು, ಕೆಲ ಮಾಹಿತಿ ಪಡೆದು ಕುಂಬಳಗೋಡಿನ ವಿದ್ಯಾಸಂಸ್ಥೆಗೆ ತೆರಳಿದರು.
ರಾಮನಗರದ ಕುಂಬಳಗೋಡಿನ ಆದಿಚುಂಚನಗಿರಿ ಶಾಖಾ ಮಠಕ್ಕೆ ಮೂರು ಕಾರುಗಳಲ್ಲಿ ಐಟಿ ಅಧಿಕಾರಿಗಳು ಬಂದಿದ್ದು, ನಿರ್ಮಾಲಾನಂದ ಶ್ರೀಗಳಿಂದ ಕೆಲ ಮಾಹಿತಿ ಪಡೆದಿದ್ದಾರೆ. ಸದ್ಯಕ್ಕೆ ಶ್ರೀಗಳ ಜೊತೆಗಿನ ಐಟಿ ಅಧಿಕಾರಿಗಳ ಮಾತುಕತೆ ಮುಗಿದಿದ್ದು, ಅಧಿಕಾರಿಗಳು ಮಾಹಿತಿ ಕಲೆಹಾಕುತ್ತಿದ್ದಾರೆ.
ದೇವನಹಳ್ಳಿಯಲ್ಲಿ ಐಟಿ ದಾಳಿ:
ದೇವನಹಳ್ಳಿ ಪಟ್ಟಣದ ಪ್ರಸನ್ನಹಳ್ಳಿ ಬಳಿ ಇರೋ ಆಕಾಶ್ ಮೆಡಿಕಲ್ ಕಾಲೇಜು ಹಾಗೂ ಆಸ್ಪತ್ರೆಯ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಉದ್ಯಮಿ ಮುನಿರಾಜು ಎಂಬುವರಿಗೆ ಸೇರಿದ ಕಾಲೇಜು ಹಾಗೂ ಆಸ್ಪತ್ರೆ ಮೇಲೆ ದಾಳಿ ಮಾಡಲಾಗಿದೆ.
ಐಟಿ ಅಧಿಕಾರಿಗಳು ಮಾಲೀಕ ಮುನಿರಾಜು ಅವರನ್ನ ವಿಚಾರಣೆ ಮಾಡುತ್ತಿದ್ದು, 14 ಜನ ಅಧಿಕಾರಿಗಳ ತಂಡದಿಂದ ದಾಳಿ ಮಾಡಲಾಗಿದೆ. ಆಸ್ಪತ್ರೆ, ಮೆಡಿಕಲ್ ಕಾಲೇಜು, ಇಂಟರ್ ನ್ಯಾಷನಲ್ ಸ್ಕೂಲ್ನ್ನು ಮುನಿರಾಜು ಹೊಂದಿದ್ದಾರೆ. 25 ಎಕರೆ ಪ್ರದೇಶದಲ್ಲಿ ಆಕಾಶ್ ಗ್ರೂಪ್ನ ವಿವಿಧ ಕಟ್ಟಡಗಳು ತಲೆ ಎತ್ತಿವೆ. ಇನ್ನೂ ಐಟಿ ದಾಳಿ ಮುಂದುವರೆದಿದೆ.