ಬೆಂಗಳೂರು: ರಾಜ್ಯದ ನೆರೆಹಾವಳಿಯಿಂದ ಶಾಲಾ ಮಕ್ಕಳ ಪಠ್ಯ ಪುಸ್ತಕಗಳು ಹಾನಿಯಾಗಿದ್ದು, ಇದಕ್ಕಾಗಿ ಮಕ್ಕಳಿಗೆ ಪರ್ಯಾಯ ವ್ಯವಸ್ಥೆ ಮಾಡುವ ಕುರಿತು ಸಾರ್ವಜನಿಕ ಶಿಕ್ಷಣ ಇಲಾಖೆ ಆಯಾ ಜಿಲ್ಲಾ ಉಪ ನಿರ್ದೇಶಕರಿಗೆ ಸೂಚನೆ ನೀಡಲಾಗಿದೆ.
![issue-text-books-to-flood-area-childrens](https://etvbharatimages.akamaized.net/etvbharat/prod-images/4128928_thumb.png)
ಅತಿವೃಷ್ಟಿಯಿಂದ ರಾಜ್ಯದ ಹಲವಾರು ಜಿಲ್ಲೆಗಳು ಪ್ರವಾಹಕ್ಕೆ ತುತ್ತಾಗಿವೆ. ಇದರಿಂದ ಶಾಲಾ ಮಕ್ಕಳ ಶಿಕ್ಷಣಕ್ಕೂ ಸಮಸ್ಯೆ ಆಗಿದ್ದು, ಅಂತಹ ಮಕ್ಕಳು
ಅಭ್ಯಾಸ ಮಾಡುವ ಪಠ್ಯಪುಸ್ತಕಗಳು ಪೂರ್ಣ ಪ್ರಮಾಣದಲ್ಲಿ ನೆರೆಹಾವಳಿಯಲ್ಲಿ ಹಾಳಾಗಿವೆ. ಸರ್ಕಾರಿ, ಅನುದಾನಿತ, ಅನುದಾನರಹಿತ ಶಾಲಾ ವಿದ್ಯಾರ್ಥಿಗಳಿಗೆ ಉಚಿತವಾಗಿ ಪಠ್ಯಪುಸ್ತಕಗಳನ್ನು ಸರ್ಕಾರದ ವತಿಯಿಂದ ನೀಡಲು ಯೋಚಿಸಲಾಗಿದೆ.
ಈ ಹಿನ್ನೆಯಲ್ಲಿ ನೆರೆ ಹಾವಳಿಯಿಂದ ಪಠ್ಯ ಪುಸ್ತಕಗಳನ್ನು ಕಳೆದುಕೊಂಡ ಎಲ್ಲಾ ಮಕ್ಕಳ ವಿವರಗಳನ್ನು ಕ್ರೂಡೀಕರಿಸುವಂತೆ, ತುರ್ತಾಗಿ ಪಠ್ಯಪುಸ್ತಕವನ್ನು ವಿತರಿಸುವಂತೆ ಸೂಚಿಸಲಾಗಿದೆ.
ಬುಕ್ ಬ್ಯಾಂಕ್ ಅಡಿಯಲ್ಲಿ ಹಿಂದಿನ ಶೈಕ್ಷಣಿಕ ಸಾಲಿನ ಮಕ್ಕಳಿಂದ ಸಂಗ್ರಹಿಸಲಾದ ಪಠ್ಯಪುಸ್ತಕಗಳಲ್ಲಿ ಉತ್ತಮ ಸ್ಥಿತಿಯಲ್ಲಿರುವ ಪಠ್ಯ ಪುಸ್ತಕಗಳನ್ನು ಮಾತ್ರ ವಿತರಿಸುವಂತೆ ತಿಳಿಸಲಾಗಿದೆ.