ETV Bharat / state

ಸೂರ್ಯಯಾನದ ಬಹುದೂರದ ಯಾತ್ರೆ ಆರಂಭ: 5ನೇ ಹಂತದ ಕಕ್ಷೆ ಬದಲಾವಣೆ ಪ್ರಕ್ರಿಯೆ ಯಶಸ್ವಿ - ಸೌರ ಮಿಷನ್ ಆದಿತ್ಯ ಎಲ್ 1

ಭಾರತದ ಮೊದಲ ಸೌರ ಯೋಜನೆ ಆದಿತ್ಯ-ಎಲ್ 1 ನೌಕೆಯ 5ನೇ ಕಕ್ಷೆ ಬದಲಾವಣೆ ಪ್ರಕ್ರಿಯೆ ಪೂರ್ಣವಾಗಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ತಿಳಿಸಿದೆ.

Aditya-L1 mission
ಆದಿತ್ಯ ಎಲ್ 1
author img

By ETV Bharat Karnataka Team

Published : Sep 19, 2023, 8:49 AM IST

Updated : Sep 19, 2023, 9:59 AM IST

ಬೆಂಗಳೂರು: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಮಂಗಳವಾರ ತನ್ನ ಚೊಚ್ಚಲ ಸೌರ ಯೋಜನೆ ಆದಿತ್ಯ-ಎಲ್1- ಟ್ರಾನ್ಸ್-ಲಗ್ರಾಂಜಿಯನ್ ಪಾಯಿಂಟ್ 1 ಅಳವಡಿಕೆ (TL1I) ಪ್ರಕ್ರಿಯೆಯನ್ನು ಯಶಸ್ವಿಯಾಗಿ ನಿರ್ವಹಿಸಿತು. ಬಾಹ್ಯಾಕಾಶ ನೌಕೆ ಈಗ ಪಥದಲ್ಲಿದ್ದು, ಅದನ್ನು ಸೂರ್ಯ-ಭೂಮಿಯ ಎಲ್1 ಬಿಂದುವಿಗೆ ಕೊಂಡೊಯ್ಯುತ್ತದೆ.

ಈ ಬಗ್ಗೆ ಇಸ್ರೋ ಸಾಮಾಜಿಕ ಮಾಧ್ಯಮ ಎಕ್ಸ್​ನಲ್ಲಿ ಪೋಸ್ಟ್​ ಮಾಡಿದೆ. "ಸತತ ಐದನೇ ಬಾರಿಗೆ ಪಥದಲ್ಲಿರುವ ನೌಕೆಯನ್ನು ಮತ್ತೊಂದು ಆಕಾಶಕಾಯ ಅಥವಾ ಬಾಹ್ಯಾಕಾಶದಲ್ಲಿರುವ ಸ್ಥಳಕ್ಕೆ ಯಶಸ್ವಿಯಾಗಿ ವರ್ಗಾಯಿಸಿದೆ. ಇದನ್ನು ಸುಮಾರು 110 ದಿನಗಳ ನಂತರ ವಿವಿಧ ಪ್ರಕ್ರಿಯೆಗಳ ಮೂಲಕ ಎಲ್​1 ಸುತ್ತ ಕಕ್ಷೆಗೆ ಸೇರಿಸಲಾಗುತ್ತದೆ" ಎಂದು ಇಸ್ರೋ ತಿಳಿಸಿದೆ.

  • Aditya-L1 Mission:
    Off to Sun-Earth L1 point!

    The Trans-Lagrangean Point 1 Insertion (TL1I) maneuvre is performed successfully.

    The spacecraft is now on a trajectory that will take it to the Sun-Earth L1 point. It will be injected into an orbit around L1 through a maneuver… pic.twitter.com/H7GoY0R44I

    — ISRO (@isro) September 18, 2023 " class="align-text-top noRightClick twitterSection" data=" ">

ಮಾಹಿತಿ ಸಂಗ್ರಹ ಆರಂಭ: ಆದಿತ್ಯ-ಎಲ್​1 ಮಿಷನ್​ ವೈಜ್ಞಾನಿಕ ಡೇಟಾವನ್ನು ಸಂಗ್ರಹಿಸಲು ಪ್ರಾರಂಭಿಸಿದೆ. ಸುಪ್ರಾ ಥರ್ಮಲ್ ಮತ್ತು ಎನರ್ಜಿಟಿಕ್ ಪಾರ್ಟಿಕಲ್ ಸ್ಪೆಕ್ಟ್ರೋಮೀಟರ್ (STEPS) ಉಪಕರಣದ ಸಂವೇದಕಗಳು ಭೂಮಿಯಿಂದ 50 ಸಾವಿರ ಕಿ.ಮೀಗಿಂತ ಹೆಚ್ಚಿನ ದೂರದಲ್ಲಿ ಸೂಪರ್-ಥರ್ಮಲ್ ಮತ್ತು ಶಕ್ತಿಯುತ ಅಯಾನುಗಳು ಮತ್ತು ಎಲೆಕ್ಟ್ರಾನ್‌ಗಳನ್ನು ಅಳೆಯಲು ಪ್ರಾರಂಭಿಸಿವೆ. ಈ ಡೇಟಾವು ವಿಜ್ಞಾನಿಗಳಿಗೆ ಭೂಮಿಯ ಸುತ್ತಲಿನ ಕಣಗಳ ನಡವಳಿಕೆಯನ್ನು ವಿಶ್ಲೇಷಿಸಲು ಸಹಾಯ ಮಾಡುತ್ತದೆ. ಅಂಕಿ ಅಂಶವು ಒಂದು ಘಟಕದಿಂದ ಸಂಗ್ರಹಿಸಲಾದ ಶಕ್ತಿಯುತ ಕಣ ಪರಿಸರದಲ್ಲಿ ವ್ಯತ್ಯಾಸಗಳನ್ನು ತೋರಿಸುತ್ತದೆ ಎಂದು ಇಸ್ರೋ ಪೋಸ್ಟ್ ಮಾಡಿದೆ. ಸುಪ್ರಾ ಥರ್ಮಲ್ ಮತ್ತು ಎನರ್ಜಿಟಿಕ್ ಪಾರ್ಟಿಕಲ್ ಸ್ಪೆಕ್ಟ್ರೋಮೀಟರ್ (STEPS) ಉಪಕರಣ, ಆದಿತ್ಯ ಸೌರ ಮಾರುತದ ಕಣದ ಪ್ರಯೋಗದ (ASPEX) ಪೇಲೋಡ್‌ನ ಒಂದು ಭಾಗವಾಗಿದೆ.

ಸೆ.2 ರಂದು ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಆದಿತ್ಯ-ಎಲ್‌1 ಬಾಹ್ಯಾಕಾಶ ನೌಕೆ ನಭಕ್ಕೆ ಚಿಮ್ಮಿತ್ತು. ಇದು 7 ವಿಭಿನ್ನ ಪೇಲೋಡ್‌ಗಳನ್ನು ಹೊತ್ತೊಯ್ದಿದೆ. ಭೂಮಿಯಿಂದ 15 ಲಕ್ಷ ಕಿ.ಮೀ ದೂರದಲ್ಲಿರುವ ಲಗ್ರಾಂಜಿಯನ್ ಬಿಂದುವಿನಲ್ಲಿ ಆದಿತ್ಯ-ಎಲ್ 1 ಅಂತರಿಕ್ಷ ವೀಕ್ಷಣಾಲಯವನ್ನು ಇರಿಸಲಾಗುತ್ತದೆ. 125 ದಿನಗಳಲ್ಲಿ ಎಲ್-1 ಬಿಂದುವಿಗೆ ಸೇರಿಸಲಾಗುತ್ತದೆ. ಭಾರತದ ಚೊಚ್ಚಲ ಸೌರ ಮಿಷನ್‌ನ ಪ್ರಾಥಮಿಕ ಉದ್ದೇಶಗಳು ವೈಜ್ಞಾನಿಕ ದತ್ತಾಂಶವನ್ನು ಸಂಗ್ರಹಿಸುವುದು ಮತ್ತು ಭಾರತದ ಸೌರ ಪರಿಶೋಧನಾ ಪ್ರಯತ್ನಗಳಲ್ಲಿ ಮತ್ತೊಂದು ಮೈಲಿಗಲಿಗೆ ಸಾಕ್ಷಿಯಾಗಿದೆ.

ಆದಿತ್ಯ-ಎಲ್​ 1 ಬಗ್ಗೆ ಒಂದಿಷ್ಟು..: ಆದಿತ್ಯ-ಎಲ್ 1 ಎಂಬುದು ಸೂರ್ಯನ ಸಮಗ್ರ ಅಧ್ಯಯನಕ್ಕೆ ಮೀಸಲಾದ ಗಗನ ನೌಕೆ. ಇದು ಸೂರ್ಯನ ಬಗ್ಗೆ ಅಜ್ಞಾತ ಸತ್ಯಗಳನ್ನು ಕಂಡುಹಿಡಿಯಲಿದೆ. ಉಪಗ್ರಹವು 16 ದಿನಗಳ ಕಾಲ ಭೂಮಿಗೆ ಸುತ್ತುವರಿದ ಕಕ್ಷೆಗಳಲ್ಲಿ ಪ್ರಯಾಣಿಸಲಿದೆ. ಈ ಸಮಯದಲ್ಲಿ ಅದು ತನ್ನ ಗಮ್ಯಸ್ಥಾನವನ್ನು ತಲುಪಲು ಅಗತ್ಯವಿರುವ ವೇಗವನ್ನು ಪಡೆಯಲು 5 ಪ್ರಕ್ರಿಯೆಗಳಿಗೆ ಒಳಗಾಗುತ್ತದೆ. ನಂತರ ಟ್ರಾನ್ಸ್-ಲಗ್ರಾಂಜಿಯನ್ 1 ಅಳವಡಿಕೆಯ ಪ್ರಕ್ರಿಯೆಗೆ ಒಳಪಡಲಿದೆ. ಅದಕ್ಕೆ ಸುಮಾರು 110 ದಿನಗಳ ಅಗತ್ಯವಿದೆ. ಎಲ್-1 ಬಿಂದು ತಲುಪಲು ಉಪಗ್ರಹವು ಸರಿಸುಮಾರು 15 ಮಿಲಿಯನ್ ಕಿ.ಮೀಟರ್ ಪ್ರಯಾಣಿಸಬೇಕು. (ಎಎನ್ಐ)

ಇದನ್ನೂ ಓದಿ: ಆದಿತ್ಯ L1 ನೌಕೆಯ ಕಕ್ಷೆ ಬದಲಾವಣೆ ನಾಲ್ಕನೇ ಪ್ರಕ್ರಿಯೆ ಯಶಸ್ವಿ: ಇಸ್ರೋ

Last Updated : Sep 19, 2023, 9:59 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.