ಬೆಂಗಳೂರು: 2023ರ ಜುಲೈ 14ರಂದು ಚಂದ್ರಯಾನ-3 ಬಾಹ್ಯಾಕಾಶ ನೌಕೆಯನ್ನು ಕಕ್ಷೆಗೆ ತಲುಪಿಸಿದ್ದ ಎಲ್ವಿಎಂ3 ಎಂ4 ಉಡ್ಡಯನ ವಾಹನದ ಕ್ರಯೋಜೆನಿಕ್ ಮೇಲಿನ ಹಂತದ ಬಿಡಿ ಭಾಗಗಳು ಬುಧವಾರ ಭೂಮಿಯ ವಾತಾವರಣಕ್ಕೆ ಅನಿಯಂತ್ರಿತ ಮರುಪ್ರವೇಶಿಸಿವೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ತಿಳಿಸಿದೆ.
ಈ ಭಾಗಗಳು ಅಂತಿಮವಾಗಿ ಇಳಿಯುವ ಸ್ಥಳದ ನಿಖರ ಹಾದಿ ಭಾರತದ ಮೇಲಿಲ್ಲ. ಉತ್ತರ ಪೆಸಿಫಿಕ್ ಮಹಾಸಾಗರದ ಮೇಲೆ ಬೀಳುವ ಸಾಧ್ಯತೆ ಇದೆ ಎಂದು ಊಹಿಸಲಾಗಿದೆ. ಈಗ ಮರುಪ್ರವೇಶ ಮಾಡುವ ರಾಕೆಟ್‌ನ ಭಾಗವು ಎಲ್ವಿಎಂ3 ಎಂ4ನ ಉಡ್ಡಯನ ವಾಹನದ ಭಾಗವಾಗಿದೆ. ಚಂದ್ರಯಾನ-3 ಬಾಹ್ಯಾಕಾಶ ನೌಕೆ ಉಡಾವಣೆಯಾದ 124 ದಿನಗಳಲ್ಲಿ ರಾಕೆಟ್‌ನ ದೇಹದ ಭಾಗ ಮರುಪ್ರವೇಶ ಮಾಡಿದೆ ಎಂದು ಇಸ್ರೋ ಹೇಳಿದೆ.
-
In the midst of #Chandrayaan3 mission, #ISRO scales another landmark with the successful launch of PSLV-C56/DS-SAR 🛰. PM Sh @NarendraModi’s consistent support enables Team @ISRO to register one success after the other in a serial form. pic.twitter.com/ibt6PlMULg
— Dr Jitendra Singh (@DrJitendraSingh) July 30, 2023 " class="align-text-top noRightClick twitterSection" data="
">In the midst of #Chandrayaan3 mission, #ISRO scales another landmark with the successful launch of PSLV-C56/DS-SAR 🛰. PM Sh @NarendraModi’s consistent support enables Team @ISRO to register one success after the other in a serial form. pic.twitter.com/ibt6PlMULg
— Dr Jitendra Singh (@DrJitendraSingh) July 30, 2023In the midst of #Chandrayaan3 mission, #ISRO scales another landmark with the successful launch of PSLV-C56/DS-SAR 🛰. PM Sh @NarendraModi’s consistent support enables Team @ISRO to register one success after the other in a serial form. pic.twitter.com/ibt6PlMULg
— Dr Jitendra Singh (@DrJitendraSingh) July 30, 2023
ಅಂತರರಾಷ್ಟ್ರೀಯವಾಗಿ ಅಂಗೀಕರಿಸಲ್ಪಟ್ಟ ಮಾರ್ಗಸೂಚಿಗಳಿಗೆ ಅನುಗುಣವಾಗಿ ಈ ರಾಕೆಟ್‌ನ ಬಿಡಿ ಭಾಗಗಳ ನಿಷ್ಕ್ರಿಯಗೊಳಿಸುವಿಕೆ ಮತ್ತು ನಂತರದ ವಿಲೇವಾರಿಯು ಬಾಹ್ಯಾಕಾಶ ಚಟುವಟಿಕೆಗಳ ದೀರ್ಘಾವಧಿಯ ಸುಸ್ಥಿರತೆಯನ್ನು ಸಂರಕ್ಷಿಸುವ ಭಾರತದ ಬದ್ಧತೆಯನ್ನು ಮತ್ತೊಮ್ಮೆ ದೃಢೀಕರಿಸುತ್ತದೆ ಎಂದು ಇಸ್ರೋ ತಿಳಿಸಿದೆ.(ಪಿಟಿಐ)
ಇದನ್ನೂ ಓದಿ: ಆದಿತ್ಯ L1 ಮಿಷನ್ ಮಹತ್ವದ ಹೆಜ್ಜೆ: ಸೂರ್ಯನ ಬಾಹ್ಯ ಪ್ರಖರ ವಿಕಿರಣ ದಾಖಲಿಸಿದ ಪೆಲೋಡ್