ಬೆಂಗಳೂರು: ಸ್ಯಾಂಡಲ್ವುಡ್ಗೆ ಡ್ರಗ್ಸ್ ನಂಟು ಆರೋಪ ಪ್ರಕರಣದ ಬೆನ್ನತ್ತಿರುವ ಐಎಸ್ಡಿ ಇಂದು ಕೂಡ ತನಿಖೆ ಮುಂದುವರೆಸಲಿದ್ದು, ಮಾಜಿ ಸಂಸದ ಶಿವರಾಮೇಗೌಡ ಪುತ್ರ ಚೇತನ್ ಗೌಡನಿಗೆ ಇಂದು ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲಾಗಿದೆ.
ಶಾಂತಿನಗರ ಐಎಸ್ಡಿ ಕಚೇರಿಗೆ ಆಗಮಿಸಿ ವಿಚಾರಣೆ ಎದುರಿಸುವಂತೆ ಐಎಸ್ಡಿ ನೋಟಿಸ್ ನೀಡಿದ್ದು, ಸ್ಯಾಂಡಲ್ವುಡ್ಗೆ ಡ್ರಗ್ಸ್ ನಂಟು ಅರೋಪ ಪ್ರಕರಣ ಸಂಬಂಧ ವಿಚಾರಣೆ ನಡೆಸಲಿದ್ದಾರೆ.
ಈಗಾಗಲೇ ಕೇರಳ ಮೂಲದ ಇಬ್ಬರು ಡ್ರಗ್ಸ್ ಪೆಡ್ಲರ್ಗಳನ್ನು ಐಎಸ್ಡಿ ಬಂಧಿಸಿದ್ದು, ಇವರ ಹೇಳಿಕೆ ಆಧಾರದ ಮೇರೆಗೆ ಹಾಗೂ ಆರೋಪಿಗಳ ಮೊಬೈಲ್ನಲ್ಲಿರುವ ಮಾಹಿತಿ ಮೇರೆಗೆ ನೋಟಿಸ್ ನೀಡಿ ವಿಚಾರಣೆಗೆ ಹಾಜರಾಗುವಂತೆ ತಿಳಿಸಲಾಗಿದೆ.