ಬೆಂಗಳೂರು: ಕೋವಿಡ್ ಟೆಸ್ಟಿಂಗ್ ಪ್ರಮಾಣವನ್ನು ಕಡಿಮೆ ಮಾಡಿ, ಕಡಿಮೆ ಸೋಂಕು ಪ್ರಕರಣಗಳನ್ನು ತೋರಿಸಲು ಬಿಬಿಎಂಪಿ ಮುಂದಾಗಿದೆಯೇ? ಎಂಬ ಶಂಕೆ ಮೂಡಿದೆ.
ಇದೀಗ ಕೋವಿಡ್ ಟೆಸ್ಟ್ ಸಂಖ್ಯೆಗಳನ್ನು ಬಿಬಿಎಂಪಿ ಅರ್ಧಕ್ಕೆ ಇಳಿಸಿದೆ. ಪಾಸಿಟಿವಿಟಿ ರೇಟ್ ಜಾಸ್ತಿಯಾಗ್ತಿದ್ದಂತೆ ಟೆಸ್ಟಿಂಗ್ ಸಂಖ್ಯೆ ಕಡಿಮೆಯಾಗಿದೆ. ನಿನ್ನೆ ನಗರದಲ್ಲಿ ಕೇವಲ 32,862 ಮಂದಿಗೆ ಮಾತ್ರ ಕೋವಿಡ್ ಟೆಸ್ಟ್ ಮಾಡಲಾಗಿದ್ದು, 16,747 ಸೋಂಕಿತರು ಪತ್ತೆಯಾಗಿದ್ದಾರೆ. ಪರಿಣಾಮ, ಬೆಂಗಳೂರಿನಲ್ಲಿ ಶೇ 39 ಪಾಸಿಟಿವಿಟಿ ರೇಟ್ ದಾಖಲಾಗಿದೆ.
![bangalore covid cases](https://etvbharatimages.akamaized.net/etvbharat/prod-images/11716996_xcghyg.jpg)
ಇದನ್ನೂ ಓದಿ: ಬೆಂಗಳೂರಿನಲ್ಲಿ 15,913 ಜನರಿಗೆ ಕೊರೊನಾ ದೃಢ: ಹೊಸ ಸೋಂಕು ಪ್ರಕರಣಗಳು ಇಳಿಕೆ
ಈ ಮೊದಲು ಬಿಬಿಎಂಪಿ 65 ಸಾವಿರದವರೆಗೆ ನಿತ್ಯ ಕೋವಿಡ್ ಟೆಸ್ಟ್ ನಡೆಸುತ್ತಿತ್ತು. ಕೊರೊನಾ ಟಾಸ್ಕ್ ಫೋರ್ಸ್ ಇದನ್ನು 1 ಲಕ್ಷಕ್ಕೆ ಏರಿಸಲು ಸಲಹೆ ನೀಡಿದೆ. ಆದ್ರೆ ಬಿಬಿಎಂಪಿ ಟೆಸ್ಟಿಂಗ್ ಪ್ರಮಾಣವನ್ನು ಇಳಿಕೆ ಮಾಡಿದೆ.
ದೇಶದ ಎಲ್ಲಾ ಮಹಾನಗರಗಳಿಗಿಂತ ಬೆಂಗಳೂರಲ್ಲೇ ಅಧಿಕ ಸೋಂಕು ಪ್ರಕರಣಗಳು ಪತ್ತೆಯಾಗುತ್ತಿದೆ.